ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲೆಗಳಲ್ಲಿ ಮದುಮಗಳು : ಬಸು ತರಬೇತಿಗೆ ನಿಂತರು

ಬಾ ಹುಲಿಕಲ್ ನೆತ್ತಿಗೆ-೩ -ಪ್ರೊ. ಶಿವರಾಮಯ್ಯ ಆದರೆ ಆ ಎಲ್ಲದರ ಬಗ್ಗೆ ಪೂರ್ಣ ವಿವರ ತಿಳಿಸಿದ ಮೇಲೆ ವಿ.ವಿ. ಅಡ್ಡಿಪಡಿಸಲಿಲ್ಲ, ರಂಗ ನಿಮರ್ಾತೃ ದ್ವಾರಕಿಯವರು ರಂಗಾಯಣಕ್ಕೂ, ಕುಕ್ಕರಹಳ್ಳಿಕೆರೆ ಕಾಡಿಗೂ ನಡುವೆ ಇದ್ದ ತಂತಿ ಬೇಲಿಯನ್ನು ಕಿತ್ತು ಹಾಕಿ ಆ ಕಾಡನ್ನೇ ಒಳನುಗ್ಗಿಸಿಕೊಂಡು ನಾಲ್ಕು ಊರುಗಳ ಹಾಗೂ ಹುಲಿಕಲ್ ನೆತ್ತಿಯ ಸೆಟ್ ಹಾಕುವುದಾಗಿ ಹೇಳಿದರು. ಕೆರೆಯಂಚಿನಲ್ಲಿ ನಾಟಕ ಹೇಗಪ್ಪಾ ಎಂದು ಭಯಗೊಂಡಿದ್ದ ಕಾ.ತ.ಚಿಕ್ಕಣ್ಣನವರಿಗೆ ಆಗ ಸಮಾಧಾನವಾಯಿತು.

 

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ಬಸು ಪುನಃ ನವಶಕ್ತಿ ಸಂಚಲನ ಗೊಂಡವರಂತೆ ಕಲಾವಿದರ ತರಬೇತಿಗೆ ನಿಂತರು. ಕನ್ನಡ ಸೀಮೆಯ ದೂರದ ಊರುಕೇರಿಗಳಿಂದ ಬಂದ ಹೊಸ ನಟನಟಿಯರು ಲವಲವಿಕೆಯಿಂದ ರಂಗತರಬೇತಿಯಲ್ಲಿ ನಿರತರಾದರು. ಯಾರ ಕೈಯಲ್ಲಿ ನೋಡಿದರೂ ಮದುಮಗಳು ಕಾದಂಬರಿಯೇ. ನೆಲಮನೆ ಪ್ರಕಾಶನದಲ್ಲಿದ್ದ ಪುಸ್ತಕಗಳೆಲ್ಲ ಮುಗಿದು ಅದು ಮರುಮುದ್ರಣಕ್ಕೆ ಹೋಗಿದೆ ಎಂಬ ಸುದ್ದಿ ಬಂತು. ಇತ್ತ ಕೆವೈಎನ್ ನೇತೃತ್ವದಲ್ಲಿ ಮದುಮಗಳು ರಂಗರೂಪ ಸಜ್ಜಾಗುತ್ತಿದ್ದರೆ, ಅತ್ತ ಬಸು ನಿದರ್ೆಶನದಲ್ಲಿ ಸ್ಕ್ರಿಪ್ಟ್ ಕೈಗೆ ಬರುವ ಮುನ್ನವೇ ಕೆಲವಾರು ದೃಶ್ಯಗಳ ಅಭಿನಯ ತರಬೇತಿ ನಡೆಯುತ್ತಿತ್ತು. ಉದಾಹರಣೆಗೆ ಸಿಂಬಾವಿಯ ಭರಮೈಹೆಗ್ಗಡೆ ಮನೆಯಲ್ಲಿ ಅತ್ತಿಗೆ ನಾದಿನಿಯರ ಜಗಳಾಟ, ಲಕ್ಕುಂದದಲ್ಲಿ ಕಾಡಿಯ ಕಳ್ಳ ಬಸುರಿಗೆ ಕಾರಣ ಯಾರು ಎಂಬ ನ್ಯಾಯ: ಬೆಟ್ಟಳ್ಳಿ ದೇವಯ್ಯನ ಬೀಸಕಲ್ಲು ಸವಾರಿ; ಹಳೆಮನೆ ಸ್ಮಶಾನದಲ್ಲಿ ದೊಡ್ಡಣ್ಣ ಮತ್ತು ರಂಗಮ್ಮ ಇವರ ಶವಸಂಸ್ಕಾರ ದೃಶ್ಯ; ಬೆಟ್ಟಳ್ಳಿ ಗೌಡರ ಅಂಗಳದಲ್ಲಿ ಕಂಬಕ್ಕೆ ಕಟ್ಟಿ ಕಲ್ಲಾಗಿನಿಂತ ಹೊಲೇರ ಸಣ್ಣಬೀರನಿಗೆ ಸಾಬರು ‘ಹೊನ್ನಾಳಿ ಹೊಡ್ತ’ ನೀಡುವ ದೃಶ್ಯ; ಹೀಗೆ ಬಿಡಿ ಬಿಡಿ ದೃಶ್ಯಗಳನ್ನು ಆಯ್ದುಕೊಂಡು ಪ್ರಾಕ್ಟೀಸ್ ನಡೆಸುತ್ತಿದ್ದರು. ಭೂಮಿಗೀತದ ಮುಂದಿನ ವನರಂಗದಲ್ಲಿ ದ್ವಾರಕನಾಥ್ ಮಲೆನಾಡು ಹಳ್ಳಿಗಳ ಸೆಟ್ಟಿಂಗ್ ಹಾಕುವುದರಲ್ಲಿ ತನ್ನ ಸಂಗಡಿಗರೊಂದಿಗೆ ಆ ಉರಿ ಬಿಸಿಲಲ್ಲಿ ಹರಸಾಹಸ ನಡೆಸಿದ್ದರು. ಆ ದೃಶ್ಯ ಕಂಡವರಿಗೆ ಇದೇನು ಯುದ್ಧ ಸಿದ್ಧತೆಯೋ, ನಿರಾಶ್ರಿತರ ನಿಲ್ದಾಣವೋ, ಕಡಲ ನೌಕೆಯ ನಿಮರ್ಾಣವೋ ಆಲ್ತಿದು ಮದುಮಗಳ ಮದುವೆಗೆ ಚಪ್ಪರವೋ! ಎಂಬಂತ್ತಿತ್ತು. ಬಸುಮಾತ್ರ ಹಗಲು ರಂಗಾಯಣದ ಕಲಾವಿದರೊಂದಿಗೆ ಸಂಜೆಗೆ ನಮ್ಮೊಂದಿಗೆ ಬಂದು ಕೂಡುತ್ತಿದ್ದರು. ದೃಶ್ಯ ಕಟ್ಟೋದು ಮುಗಿಯಿತೆ? ಹಾಡು ಬರೆಯೋದು ಆಯಿತೆ? ಎಂದು ಕ್ಯಾಪ್ಟನ್ ಕೆವೈಎನ್ಗೆ ತಗಾದೆ ಮಾಡುತ್ತಿದ್ದರು. ನಾನು, ಬೈರೇಗೌಡ, ಕೃಷ್ಣ ಪ್ರಸಾದ್ ಇನ್ನೇನು ಮುಗಿಸುತ್ತೇವೆ ಎನ್ನುತ್ತಿದ್ದೆವು. ನಾರಾಯಣ ಸ್ವಾಮಿ ಹೇಳಿದಂತೆ ಕೃಷ್ಣಪ್ರಸಾದ್ ಮೂಲ ಸಂಭಾಷೆಯನ್ನಿಟ್ಟುಕೊಂಡು ದೃಶ್ಯ ಕಟ್ಟುತ್ತಿದ್ದರೆ, ಬೈರೇಗೌಡ ಟೈಪ್ ಮಾಡುತ್ತ ಹೋಗುತ್ತಿದ್ದರು. ಇವರು ಕೇಳಿದ ಅಧ್ಯಾಯವನ್ನೋ, ಸಂದರ್ಭವನ್ನೋ, ಪುಟವನ್ನೋ ಹುಡುಕಿ ಕೊಡುವ ಕೆಲಸ ನನ್ನದು. ಕೆವೈಎನ್ ನಾವು ಕಟ್ಟಿದ ದೃಶ್ಯಗಳನ್ನು ಮತ್ತೊಮ್ಮೆ ಟ್ರಿಮ್ ಮಾಡುವುದು, ಪಾತ್ರ ಅಥವಾ ಸಂದರ್ಭಕ್ಕೆ ಉಚಿತ ಹಾಡನ್ನು ರಚಿಸುವುದು ಮುಂತಾಗಿ ಮಾಡುತ್ತಿದ್ದರು. ಮದುಮಗಳು ಮೈಮೇಲೆ ಬಂದಂತೆ ಕನವರಿಸುವುದಾಗಿತ್ತು ನಮಗೆಲ್ಲ! ಯಾರಿಗುಂಟು ಯಾರಿಗಿಲ್ಲ ಇಂಥ ಎಂಜಾಯ್ಮೆಂಟ್? ದೇಶಕಾಲ ಸ್ಥಗಿತವಾಗುವುದೆಂದರೆ ಹೀಗೇ ಇರಬೇಕಲ್ಲವೆ? ಕಾದಂಬರಿ ಓದುವುದೇ ರಸ ರೋಮಾಂಚನ, ಅದ್ಭುತಯಾನ. ಮುಂದುವರೆಯುವುದು…]]>

‍ಲೇಖಕರು G

22 December, 2010

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading