ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಪ್ರೆಸೆಂಟ್ ಸಾರ್' ಅಂದಾಗ

ಆಕರ್ಷ ಕಮಲ ವೃತ್ತಿಯಲ್ಲಿ ಟೆಕ್ಕಿ ಆಗಿದ್ದರೂ ಪ್ರವೃತ್ತಿಯಲ್ಲಿ ಕವಿ. ಎದೆಯೊಳಗೆ ಸದಾ ಸೂಕ್ಷ್ಮ ಸಂವೇದನೆಯನ್ನು ಜಾಗೃತವಾಗಿಟ್ಟುಕೊಂಡಿರುವ ಆಕರ್ಷ ನಿರ್ಮಿಸಿದ ಕಿರುಚಿತ್ರ ‘ಪ್ರೆಸೆಂಟ್ ಸಾರ್’. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಕನ್ನಡ ಶಾಲೆಗಳು ಮುಚ್ಚಬೇಕಾಗಿ ಬರುವ ದುಸ್ಥಿತಿಯ ಬಗೆಗೆ ಚಿತ್ರ ಬೆಳಕು ಚೆಲ್ಲುತ್ತದೆ.

ಆಕರ್ಷ ಮತ್ತು ‘ಕಥನ’ ತಂಡಕ್ಕೆ ಅವಧಿ  ಅಭಿನಂದನೆಗಳು.

akarsha kamala

ಎರಡು ವಿಷಯ ಹಂಚಿಕೊಳ್ಳೋದು ಇದೆ.

೧. ನನ್ನ fb ಗೆಳೆಯನೊಬ್ಬ “ಪ್ರೆಸೆಂಟ್ ಸರ್” ಟ್ರೈಲರ್ ನೋಡಿ “ನಾನು ಕನ್ನಡ ಮಾಧ್ಯಮ ಶಾಲೇಲಿ ಓದಿದ್ದು. ಹಾಜರಿ ಸಂಖ್ಯೆ ಕಡಿಮೆಯಾಗಿ ನಮ್ಮ ಶಾಲೆಯನ್ನು ಮುಚ್ಚಿದ ನೆನಪು ಬಂತು. ಭಾವುಕನಾದೆ ಅಂತ ” ಹೇಳದ್ರು. ಹೆಸರು ಹಾಕಬೇಡಿ ಅಂತ ಹೇಳಿರೋದ್ರಿಂದ ಅವರ ಹೆಸರನ್ನು ಬ್ಲರ್ ಮಾಡಿದಿನಿ.

ಇದು ನಮ್ಮ ಟೀಂ ಗೆ ಸಂತಸದ ವಿಷಯ ಅಲ್ಲ. ಇಂಥ ಗಂಭೀರ ಸಮಸ್ಯೆಯ ಬಗ್ಗೆ ಅರಿವು ಮೂಡಿಸೋದು ಉದ್ದೇಶವಾಗಿತ್ತು. ಎಷ್ಟರ ಮಟ್ಟಿಗೆ ಅರಿವು ಮೂಡುತ್ತೋ ಗೊತ್ತಿಲ್ಲ? ಆದರೆ ಜನಕ್ಕೆ ನಮ್ಮ ಸಿನಿಮಾ ಮುಟ್ಟುತ್ತೆ ಅನ್ನೋ ದೃಢವಾದ ನಂಬಿಕೆ ಅಂತು ಇದೆ.

೨. ಇನ್ನು ಇಷ್ಟು ಚೆಂದವಾದ ಟ್ರೈಲರ್ ನ ಕಟ್ಟಿಕೊಟ್ಟ ಪೂರ್ತಿ ಕ್ರೆಡಿಟ್ಸ್ ನವೀನ Naveen Sagar , ನನ್ನ ತಂಗಿ Sparsha Rk ಹಾಗೆ ವಿಕಾಸ್ Vikas Vasishta ಇವರಿಗೆ ಸಲ್ಲಬೇಕು . ಒಂದು ಕಿರುಚಿತ್ರದ ಟ್ರೈಲರ್ ಅನ್ನು ಒಂದೇ ದಿವಸದಲ್ಲಿ ೯೦೦ಕ್ಕಿಂತ ಹೆಚ್ಚು ಜನ ನೋಡಿರೋದು Kathanaಕ್ಕೆ ಸಂದ ಚಿಕ್ಕ ಜಯ.

ಇನ್ನು ನೋಡದೆ ಇರುವವರು ಬೇಗ ನೋಡಿ ….

‍ಲೇಖಕರು admin

3 November, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading