
ಪ್ರಸನ್ನ ಸಂತೇಕಡೂರು
ಇತ್ತೀಚೆಗೆ ಕಥೆಗಾರರಾದ ಆನಂದ್ ಗೋಪಾಲ್ ಅವರು ಮೈಸೂರಿನ ವಿಜಯನಗರದ ಎರಡನೆಯ ಹಂತದ ಹೈ ಟೆನ್ಷನ್ ರಸ್ತೆಯಲ್ಲಿನ “ದೇಸಿ ಟೀ ಮಾಸ್ಟರ್ ಕೆಫೆ” ಬಗ್ಗೆ ಬರೆದು, ಆ ಕೆಫೆ ಟೀ ಪ್ರಿಯರಿಗೆ ಓದುವ ರುಚಿ ಒದಗಿಸುತ್ತಿದೆ. ಅಲ್ಲದೆ, ಇದರೊಂದಿಗೆ ಕನ್ನಡದ ಸಂಸ್ಕೃತಿಯನ್ನು ಪರಿಚಯಿಸುತ್ತಿರುವ ವೈಖರಿ ವಿಶಿಷ್ಟವಾಗಿದೆ ಎಂದು ಬರೆದಿದ್ದರು.
ಇಲ್ಲಿ ಕನ್ನಡದ ಲೇಖಕರಾದ ಮಾಸ್ತಿ, ಪ್ರಸನ್ನ ಸಂತೇಕಡೂರು, ಜಯಂತ ಕಾಯ್ಕಿಣಿ, ಹೆಗ್ಗೋಡು ಪ್ರಸನ್ನ ಮೊದಲಾದ ಲೇಖಕರ ಪುಸ್ತಕಗಳಿವೆ ಎಂದು ತಿಳಿಸಿದ್ದರು.
ಅಲ್ಲಿ ಹಲವು ಕನ್ನಡ ಸಾಹಿತಿಗಳು ಮತ್ತು ಕನ್ನಡ ನಾಡಿನ ಹಲವು ಮಹನೀಯರ ಫೋಟೋಗಳಿವೆ. ಅಲ್ಲಿ ಎಲ್ಲದರಲ್ಲೂ ಕನ್ನಡತೆ ಎದ್ದು ಕಾಣುತಿದೆ.
ಇಂದು ವಿಜಯ ನಗರ ಎರಡನೇ ಹಂತಕ್ಕೆ ಕಾರ್ಯ ನಿಮಿತ್ತ ಹೋಗಿದ್ದೆ. ಕೆಲಸ ಮುಗಿದ ಮೇಲೆ “ದೇಸಿ ಟೀ ಮಾಸ್ಟರ್ ಕೆಫೆ” ಜ್ಞಾಪಕಕ್ಕೆ ಬಂತು. ಅಲ್ಲಿ ಉತ್ತರ ಕರ್ನಾಟಕ ಶೈಲಿಯ ಗಿರ್ಮಿಟ್ ಮತ್ತು ನಿಪ್ಪಟ್ ಮಸಾಲ ಇನ್ನು ಹಲವು ಶೈಲಿಯ ತಿಂಡಿಗಳ ಜೊತೆ, ಹಲವು ರೀತಿಯ ಕಾಫಿ, ಟೀ, ಜ್ಯೂಸ್ ಗಳು ಲಭ್ಯವಿರುತ್ತವೆ.

ನನಗೆ ಅಲ್ಲಿನ ರುಚಿ ಮತ್ತು ಕೆಫೆಯ ಮಾಲೀಕರ ಸದಾಭಿರುಚಿ ತುಂಬಾ ಇಷ್ಟವಾಯಿತು. ಅಲ್ಲಿ ನನ್ನ ಮಾಯಾಪಂಜರ ಕಥಾಸಂಕಲನ ಮತ್ತು ಸು ಕಾದಂಬರಿ ನೋಡಿ ತುಂಬಾ ಸಂತೋಷವಾಯಿತು.
ಸಾಹಿತ್ಯ ಕತೆ, ಕಾದಂಬರಿ ಮತ್ತು ಕವನಗಳ ಚರ್ಚೆಗೆ ಒಳ್ಳೆಯ ಜಾಗ ಕೂಡ. ಇದರ ಮಾಲೀಕರಾದ ಮಲ್ಲಮ್ಮನವರು ಕೂಡ ಸಾಹಿತ್ಯಾಭಿಮಾನಿಗಳು. ನೀವು ನಿಮ್ಮ ಕುಟುಂಬದವರ, ಆತ್ಮೀಯರ ಗೆಳೆಯ ಗೆಳತಿಯರ ಜೊತೆ ಭೇಟಿ ನೀಡಲು ಒಂದು ಒಳ್ಳೆಯ ಜಾಗ.






0 Comments