ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಸನ್ನ ಮತ್ತೊಬ್ಬ ಅಣ್ಣಾ ಹಜಾರೆಯಂತೆ ಕಾಣುತ್ತಾರೆ..

ಪವಿತ್ರ ಆರ್ಥಿಕತೆಗಾಗಿ ಖ್ಯಾತ ರಂಗಕರ್ಮಿ, ದೇಸಿ ಚಳವಳಿಯನ್ನು ಹುಟ್ಟು ಹಾಕಿದ ಪ್ರಸನ್ನ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ‘ಇದೇನಿದು ಪವಿತ್ರ ಆರ್ಥಿಕತೆ?’ ಎನ್ನುವ ಪ್ರಶ್ನೆಗಳೂ ಎದ್ದಿವೆ.

ನಮ್ಮ ನಡುವಿನ ಸಂವೇದನಾಶೀಲ ಚಿತ್ರ ಇರ್ದೆಶಕ ಕೇಸರಿ ಹರವೂ ಪ್ರಸನ್ನರ ನೋಟದ ಹಿಂದಿನ ರಾಜಕೀಯವನ್ನು ನಿನ್ನೆ ಬಿಡಿಸಿಟ್ಟಿದ್ದರು.

ಇದು ‘ಜುಗಾರಿ ಕ್ರಾಸ್’. ಚರ್ಚೆಗಾಗಿ ಇರುವ ಅಂಗಳ

ನೀವೂ ಚರ್ಚೆಯಲ್ಲಿ ಭಾಗವಹಿಸಿ. avadhimag@gmail.com ಗೆ ನಿಮ್ಮ ಅಭಿಪ್ರಾಯವನ್ನು ಕಳಿಸಿಕೊಡಿ

ನಾ ದಿವಾಕರ್ 

ಪವಿತ್ರ ಎನ್ನುವ ಪದವೇ ಸ್ಥಾಪಿತ ವ್ಯವಸ್ಥೆ ಸೃಷ್ಟಿಸುವ ದೊಡ್ಡ ಹೊಂಡ ಅಥವಾ ಖೆಡ್ಡ. ಇದರಲ್ಲಿ ಆನೆ ಬಿದ್ದರೂ ಒಂದೇ ಕೋತಿ ಬಿದ್ದರೂ ಒಂದೆ ಹೊರಬರಲು ಪ್ರಯಾಸ ಪಡಬೇಕು ಮತ್ತೊಬ್ಬರ ನೆರವು ಬೇಕು.

ಪವಿತ್ರ ಆರ್ಥಿಕತೆ ಎನ್ನುವುದೂ ಹಾಗೆಯೇ.

ಪ್ರಸನ್ನ ಅವರ ನಿರಶನದ ಹಿಂದಿನ ಉದ್ದೇಶ ಒಳ್ಳೆಯದೇ ಇರಬಹುದು. ಆದರೆ ಅರ್ಥಶಾಸ್ತ್ರದ ಪರಿಜ್ಞಾನವೇ ಇಲ್ಲದೆ ಆರ್ಥಿಕ ನೀತಿಗಳನ್ನು ಜಾರಿಗೊಳಿಸುತ್ತಾ ದೇಶದ ಜನಸಾಮಾನ್ಯರ ನಿತ್ಯ ಜೀವನವನ್ನು ಕಂಗೆಡಿಸುತ್ತಿರುವ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಗೆ ಪರ್ಯಾಯ ಪವಿತ್ರ ಆರ್ಥಿಕತೆ ಅಲ್ಲ. ಆರ್ಥಿಕತೆಯಲ್ಲಿ ಪವಿತ್ರ ಅಪವಿತ್ರ ಇರುವುದೂ ಇಲ್ಲ.

ಇಂದು ಉತ್ಪಾದನೆ ಮತ್ತು ಸಂಪತ್ತಿನ ಒಡೆತನ, ವಿತರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದ್ದು. ಜಾಗತೀಕರಣ ಮತ್ತು ನವ ಉದಾರವಾದ ಈಗಾಗಲೇ ಭ್ರಮಾಲೋಕವನ್ನು ಸೃಷ್ಟಿಸಿ ಜನರ ದಾರಿ ತಪ್ಪಿಸುತ್ತಿದೆ. ಪವಿತ್ರ ಆರ್ಥಿಕತೆಯ ಮೂಲಕ ಮತ್ತೊಂದು ಭ್ರಮೆ ಅಗತ್ಯವಿಲ್ಲ.

ಹೋರಾಟ ನಡೆಯಬೇಕಿರುವುದು ಯಂತ್ರ ನಾಗರಿಕತೆಯ ವಿರುದ್ಧ ಅಲ್ಲ ಯಂತ್ರ ನಾಗರಿಕತೆಯ ವಾರಸುದಾರರ ವಿರುದ್ಧ.

ಪ್ರಸನ್ನ ಮತ್ತೊಬ್ಬ ಅಣ್ಣಾ ಹಜಾರೆಯಂತೆ ಕಾಣುತ್ತಾರೆ. ಅವರ ಆರೋಗ್ಯ ಶೀಘ್ರ ಸುಧಾರಿಸಲಿ ಎಂದಷ್ಟೇ ಹಾರೈಸಬಹುದು.

 

‍ಲೇಖಕರು avadhi

12 October, 2019

1 Comment

  1. Prasad Raxidi

    ಪ್ರಸನ್ನರು ಬದನವಾಳು ಸತ್ಯಾಗ್ರಹ ಮಾಡಿದಾಗ ನಾನು ಕೂಡ ಇದೇ ಪ್ರಶ್ನೆ ಗಳನ್ನೆತ್ತಿದ್ದೆ ಆ ಕಾರಣಕ್ಕಾಗಿಯೇ ನಾನು ಬದನವಾಳು ಗೆ ಹೋಗಲಿಲ್ಲ. (ಪ್ರಸನ್ನ ನನಗೂ ಪತ್ರ ಬರೆದಿದ್ದರು. ಮತ್ತು ನಂತರ ಭೇಟಿಯಾದಾಗ ಯಾಕೆ ಬರಲಿಲ್ಲ ಎಂದು ವಿಚಾರಿಸಿಕೊಂಡರು) ಆದರೆ ಪ್ರಸನ್ನ ಎಂದೂ ಡೆಮಾಕ್ರಟಿಕ್ ಆಗಿ ವರ್ತಿಸಿದ ಉದಾಹರಣೆ ನನ್ನ ಮುಂದೆ ಇಲ್ಲ. ಹೋಗಲಿ ಗಾಂಧಿ ಮಾದರಿಯ ಹೋರಾಟದ ಮೊದಲ ಹೆಜ್ಜೆಯೇ ಪಾರದರ್ಶಕತೆ ಅಂದರೆ ನಡೆ ಮತ್ತು ನುಡಿಯ ಅಂತರವನ್ನು ಕಡಿಮೆ ಮಾಡಿಕೊಳ್ಳುತ್ತ ಮುನ್ನಡೆಯುವುದು.
    ಇರಲಿ ಇನ್ನು “ಪವಿತ್ರ” ಆರ್ಥಿಕತೆ ಎಂಬ ಚಂದದ ನುಡಿಗಟ್ಟು. ಸಧ್ಯದಲ್ಲೇ ಪವಿತ್ರ ಗೋವಿನಂತಾಗುವ ಎಲ್ಲ ಅಪಾಯವೂ ಇರುವ ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಹೊಸ ನುಡಿಗಟ್ಟನ್ನು ಬಳಸುವ ವಿವೇಚನೆ ಬೇಕು. ಇದಕ್ಕೆ ಸಾಮುದಾಯಿಕ ಒತ್ತಾಸೆಯನ್ನು ಗಳಿಸಿಕೊಳ್ಳಬೇಕು.
    ಈಗ ಪ್ರಸನ್ನರು ಮಾಡುತ್ತಿರುವ ಹೋರಾಟ ಪ್ರಸಿದ್ದಿ ಗೆ ಸಾಕು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading