ಮೊನ್ನೆಯವರೆಗೂ ನಡೆಯುತ್ತಿದ್ದ “ಪೋಸ್ಕೊ” ಗಲಾಟೆ ಇನ್ನೂ ಮುಗಿದಂತಿಲ್ಲ.
“ಪೋಸ್ಕೊ” ಬೇಡವೆಂದು ಗದುಗಿನ ತೋಂಟದಾರ್ಯ ಸ್ವಾಮಿಗಳೂ,ಬೇಕೆಂದು
ಅಲ್ಲಿನ ಅತೃಪ್ತ (?) ರೈತರೂ ಗಲಾಟೆ ಮಾಡತೊಡಗಿದ್ದಾರೆ.
ಕೆಲವೊಂದಿಷ್ಟು ರೈತರು ಬೆಂಗಳೂರಿಗೂ ಬಂದು ಮು.ಮ.ಯಡ್ಯೂರಪ್ಪನವರಿಗೆ
ಹ್ಯಾಗಾದರೂ ಮಾಡಿ ನಮ್ಮ ಹೊಲ ತಗೊಂಡು ದುಡ್ಡು ಕೊಡಿ ಎಂದಿದ್ದಕ್ಕೆ
ಮು.ಮ.ಗಳು ನಿಮ್ಮ ಸ್ವಾಮೀಜಿಗಳು ಒಪ್ಪಿಕೊಂಡರೆ ಮಾತ್ರ “ಪೋಸ್ಕೊ”
ನಿಮ್ಮಲ್ಲಿಗೆ ಬರಬಹುದು ಎಂದು ಹೇಳಿಕಳಿಸಿದ್ದಾರೆ.
ಪ್ರಶ್ನೆ ಇದಲ್ಲ.
ಕೈಗಾರಿಕೆಗಳು ಬರಬೇಕೇ,ಬೇಡವೇ ಎಂಬುದು ಮಠಾಧಿಪತಿಗಳು ನಿರ್ಧರಿಸಬೇಕೆ?
ಮಠಾಧಿಪತಿಗಳು ಭಯಪಡಲು ಕಾರಣಗಳು ಏನಿವೆ?
ಒಂದು ವೇಳೆ ಸರ್ಕಾರ ಪ್ರತಿಭಟನಾಕಾರರ ಎಲ್ಲ ಷರತ್ತುಗಳನ್ನು ಒಪ್ಪಿಕೊಂಡರೆ “ಭಯಪಡುವ ಕಾರಣಗಳು” ಇಲ್ಲವಾಗುತ್ತವೆಯೇ?
ಇಲ್ಲಿ ಪ್ರತಿಭಟನಾಕಾರರು ಭಯಪಡುವ ಕಾರಣಗಳಲ್ಲಿ ಕಪ್ಪತ್ತ ಗುಡ್ಡದ ಔಷಧ ಮೂಲಿಕೆಗಳ ಸಸ್ಯವನ ವಿನಾಶವೂ ಒಂದು.
ಒಂದುವೇಳೆ,ಸರ್ಕಾರವೇನಾದರೂ ರೈತರಿಗೆ ಖುಷಿಯಾಗುವಷ್ಟು ಹಣ ಕೊಟ್ಟು,ಸೈಟು ಕೊಟ್ಟು ಹಾಗೆಯೇ
ಎಲ್ಲರಿಗೂ ಅವರವರ ವಿದ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗ ನೀಡುತ್ತೇವೆ ಎಂದರೆ
ಪ್ರತಿಭಟನಾಕಾರರು “ಪೋಸ್ಕೊ” ಸ್ವಾಗತಿಸುತ್ತಾರೆಯೇ?
ಹಾಗೊಂದು ವೇಳೆ ಒಪ್ಪಿಕೊಂಡರೆ ಕಪ್ಪತ್ತ ಗುಡ್ಡದ ವಿಷಯ ಎಲ್ಲಿಗೆ ಬಂತು?
ಅದಕ್ಕೆ replacement ಏನು?
ಇಷ್ಟಕ್ಕೂ ಜಿಲ್ಲೆಗೊಂದು ಬೃಹತ್ ಕೈಗಾರಿಕೆ ತರುವ ವಿಚಾರದಲ್ಲಿ ಮು.ಮ.ಗಳು ಯಾರನ್ನು ವಿಶ್ವಾಸಕ್ಕೆ ತಗೆದುಕೊಳ್ಳಬೇಕು ಎಂಬುದೇ ದೊಡ್ಡ ಪ್ರಶ್ನೆ.
ಸದರಿ ವಿಷಯಕ್ಕೆ ಸಂಬಂಧಿಸಿದ experts ಗಳನ್ನೇ?
ಭೂಮಿ ಕಳೆದುಕೊಳ್ಳುವ ರೈತರನ್ನೇ?
ಕೆಲಸಕ್ಕಾಗಿ ಆಸೆಗಣ್ಣಿನಿಂದ ನೋಡುತ್ತಿರುವ ನಿರುದ್ಯೋಗಿಗಳನ್ನೇ?
ಆ ಮೂಲಕ ಅಲ್ಲಿ ಬರಬಹುದಾದ commercial opportunity ಗಳನ್ನೇ?
**
“ಮೊದಲು ನಿಮ್ಮ ಸ್ವಾಮೀಜಿಗಳನ್ನು ಒಪ್ಪಿಸಿ..” ಅಂತ ಹೇಳುವ ಬದಲು ಯಡ್ಯೂರಪ್ಪನವರು ಬೇರೆ ಏನೋ ಹೇಳಬೇಕಾಗಿತ್ತಲ್ಲವೇ?








ಅರಮನೆ ಗುರುಮನೆಯ ಅಪ್ಪಣೆಯ೦ತೆ ನಡೆಯುತ್ತದೆ ಎ೦ದು ಮುಖ್ಯಮ೦ತ್ರಿ ಗಳು ಘೋಷಿಸಿದ ಮೇಲೆ ಇನ್ನು ಮು೦ದೆ ಜನರು ಅರ್ಜಿ ಅಹವಾಲುಗಳನ್ನು ಮಠ ಗಳಿಗೆ ಸಲ್ಲಿಸುವುದೇ ಮೇಲೇನೋ… ಮೊನ್ನೆ ಅ೦ಕಿತ ಪುಸ್ತಕ ಬಿಡುಗಡೆ ಸಮಾರ೦ಭದಲ್ಲಿ ಮಾತನಾಡುತ್ತಾ ಟಿ.ಎನ್.ಸೀತಾರಾ೦ ಒ೦ದು ಒಳ್ಳೆ ಮಾತು ಹೇಳಿದರು, ‘ಹಣ ತೆಗೆದುಕೊ೦ಡು ನೆಲ ಕೊಡಲು ರೈತರೇ ಸಿದ್ಧವಾಗಿ ನಿ೦ತ ಮೇಲೆ, ಅದನ್ನು ತಪ್ಪು ಎನ್ನುವ ನಾವು ರೈತರ ಕಣ್ಣಿಗೆ ಶೋಷಕರಾಗಿ ಕಾಣುತ್ತೇವೆ’ ಅ೦ತ. ಜಾಗತೀಕರಣ ಎಲ್ಲವನ್ನು ಸ೦ಕೀರ್ಣಗೊಳಿಸುತ್ತದೆ, ಅಲ್ಲವೇ?
Every one is playing politics here…..CM, swami and few “farmer leaders”…..
main qns raised here are not debatd. it is qn of land, agriculture, livelihood of farmers, ecology etc.on oneside. industries, employment, who is to decide and how?what is the role of different stakeholders? in that context is ther any role for swamijis or not