ಪ್ರತೀಕ್ಷಾ ಮರಕಿಣಿ
Mobile photography..
ಹೊರ ಜಗತ್ತನ್ನ ಕ್ಯಾಮೆರಾ ಕಣ್ಣು ನೋಡುವ ರೀತೀನೇ ಬೇರೆ. ದೊಡ್ಡ ದೊಡ್ಡ ಲೆನ್ಸ್ ಕ್ಯಾಮೆರಾದಲ್ಲೂ ಮೊಬೈಲ್ ಕ್ಯಾಮೆರಾದಲ್ಲೂ ನೋಡೋ ಕಣ್ಣೋಟ ಒಂದೇ, ಆದ್ರೆ ಫಲಿತಾಂಶ ಮಾತ್ರ ಬೇರೆ ಬೇರೆ ಅಲ್ವೇ? ಆಗಸ್ಟ್ 19, ವಿಶ್ವ ಪೋಟೊಗ್ರಫಿ ಡೇ. Photography ನನ್ನ ನೆಚ್ಚಿನ ಹವ್ಯಾಸಗಳಲ್ಲಿ ಒಂದು. ಅದರ ನೆನಪಲ್ಲಿ, ಉತ್ತಮ ನಿಕಾನ್ ಕ್ಯಾಮೆರಾ ಇದ್ದರೂ, ಮೊಬೈಲ್ ಫೋಟೋ ತೆಗಯಬೇಕೆನ್ನಿಸಿದಾಗ ಸಂದರ್ಭ ಕೂಡಿ ಬಂದೇ ಬಿಡ್ತು.
ಕರ್ನಾಟಕದ ರೈತರು, ಅದರಲ್ಲೂ ಕೋಲಾರ ಜಿಲ್ಲೆಯಲ್ಲಿ Tomato ಬೆಳೆಯುವವರು ಅವರ ಫಸಲಿಗೆ ಸರಿಯಾಗಿ ಹಣ ಸಿಗುತ್ತಿಲ್ಲ ಎಂದು ಹೇಳುತ್ತಿರುವುದು ಮಾಧ್ಯಮ, ಸಾಮಾಜಿಕ ತಾಣಗಳಲ್ಲಿ ಸುದ್ದಿ ಮಾಡುತ್ತಿರುವ ಸಂಗತಿ. ಬೆಳೆದ ಫಸಲಿಗೆ ಕನಿಷ್ಠ ಬೆಲೆಯೂ ಸಿಗದೇ, ಮನೆಗೆ ವಾಪಸ್ ತೆಗೆದುಕೊಂಡು ಹೋಗಲೂ ಆಗದೇ ಹತಾಶೆಯಿಂದ ಅದನ್ನು ರಸ್ತೆಗಳಲ್ಲಿ ಹಾಕಿ ಹೋಗುವ ಪರಿಸ್ಥಿತಿ ಬಂದೊದಗಿದೆ. ನಾನು ಇತ್ತೀಚೆಗೆ ಕೋಲಾರಕ್ಕೆ ಭೇಟಿ ನೀಡಿದ್ದೆ. ದಾರಿಯುದ್ದಕ್ಕೂ tomato ರಾಶಿ ರಾಶಿಗಳೇ ಕಂಡುಬಂದವು.
ರೈತರು ದೇಶದ ಬೆನ್ನೆಲುಬು ಎಂಬುದು ಸವಕಲು ಹೇಳಿಕೆಯಾಗಿರೋದಿಕ್ಕೆ ಇದು ಉತ್ತಮ ಉದಾಹರಣೆ. ರೈತರಿಗೆ ಅವರ ಫಸಲಿಗೆ ತಕ್ಕ ಬೆಲೆಯನ್ನು ಕೊಡುವುದು ಸರಕಾರದ ಜವಾಬ್ದಾರಿಯಾಗಿದೆ. ರೈತರು ಬೆಳೆಗೆಳನ್ನು ಕಷ್ಟಪಟ್ಟು ಶ್ರಮದಿಂದ ಬೆವರು ಸುರಿಸಿ ತಮ್ಮದೇ ಮಕ್ಕಳಂತೆ ಬೆಳೆಯುತ್ತಾರೆ. ಆದರೆ ರೈತರ ಕಷ್ಟಗಳನ್ನು ದೂರಮಾಡಲು ನಾವೇನು ಮಾಡುತ್ತಿದ್ದೇವೆ? ಇದು ದೇಶದ ಪ್ರತಿಯೊಂದು ಪ್ರಜೆಯ ಜವಾಬ್ದಾರಿಯಲ್ಲವೇ?
ಮೊಬೈಲ್‌ನಲ್ಲಿ ತೆಗೆದ ಕೆಲವು ಫೋಟೋಗಳು world photography day ನೆನಪಿಗಾಗಿ.










0 Comments