ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಜ್ಞಾ ಶಾಸ್ತ್ರಿ ಮೆಚ್ಚಿದ ಕೆ ಸಚ್ಚಿದಾನಂದನ್ ಕವಿತೆ

ಪ್ರಜ್ಞಾ ಶಾಸ್ತ್ರಿ

ನನ್ನಜ್ಜಿಗೆ ತಲೆ ಕೆಟ್ಟಿತ್ತು.
ಅವಳ ಹುಚ್ಚು ದಿನೇ ದಿನೇ ಬೆಳೆದು, ಹಣ್ಣಾಗಿ, ಸಾವಾದಾಗ,
ನನ್ನ ಮಾವ, ಮಹಾ ಜಿಪುಣ,
ಅವಳನ್ನ ಹುಲ್ಲೊಳಗೆ ಸುತ್ತಿ
ನಮ್ಮ ಸ್ಟೋರ್ ರೂಮಿನೊಳಗಿಟ್ಟ.
ನನ್ನಜ್ಜಿ ಅಲ್ಲೇ ಒಣಗಿ, ಬಿರಿದು,
ಅವಳ ಬೀಜಗಳು ಕಿಟಕಿಯಿಂದಾಚೆ ಹಾರಿ ಹೋದವು.
ಸೂರ್ಯ ಬಂದ ಆಮೇಲೆ ಮಳೆ
ಅದರೊಳಗೊಂದು ಬೀಜ ಸಸಿಯಾಗಿ ಬೆಳೆದು
ಅದರ ಬಯಕೆಯ ತಂತು ನನ್ನನ್ನ ಹುಟ್ಟಿಸಿತು.
ಅಂಥಾ ನಾನು
ಚಿನ್ನದ ಹಲ್ಲಿನ ಮಂಗಗಳ ಬಗ್ಗಲ್ಲದೇ
ಇನ್ನಾವುದರ ಬಗ್ಗೆ ಕವಿತೆ ಬರೆಯಲಾದೀತು?!

ಕೆ. ಸಚ್ಚಿದಾನಂದನ್ ಕವಿತೆಗಳನ್ನ ಈಗಷ್ಟೇ ಓದುವುದಕ್ಕೆ ಶುರು ಮಾಡಿದ್ದೇನೆ. ನಿಮ್ಮಲ್ಲಿ ಹಲವರು ಅವರನ್ನ ಈಗಾಗಲೇ ಓದಿರುತ್ತೀರಿ. ಮೇಲೆ ಅನುವಾದಿಸಿದ ಕವನ 1973 ರಲ್ಲೇ ಪ್ರಕಟಗೊಂಡಿದ್ದು. ಅವರ ಕಾವ್ಯ ಪ್ರಪಂಚ ನನಗೆ ಹೊಸತು. ಈಗಷ್ಟೇ ಓದಲು ಕೈಗೆತ್ತಿಕೊಂಡಿದ್ದೇನೆ. ತಲೆ ಕೆಟ್ಟು ಅನುವಾದಿಸುತ್ತಿದ್ದೇನೆ!! ಆ ಮೂಲಕ ಅವರ ಕಾವ್ಯ ಲೋಕದಲ್ಲಿ ಮತ್ತಷ್ಟು ಆಪ್ತವಾಗಿ ವಿಹರಿಸಬಹುದೆಂಬ ದುರಾಸೆ. ಈ ಬಾಲೆಯ ಅಧಿಕ ಪ್ರಸಂಗತನವನ್ನ ಮನ್ನಿಸಿ!
 

‍ಲೇಖಕರು G

26 June, 2014

2 Comments

  1. pratibha kage

    very nice

  2. mmshaik

    nice good one..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading