ಇಂದು ‘ನಾಲ್ವರು ಪತ್ರಕರ್ತೆಯರ ಪುಸ್ತಕಗಳು’ ಬಿಡುಗಡೆ ಕಾರ್ಯಕ್ರಮವಿತ್ತು. ಡಾ. ಆರ್.ಪೂರ್ಣಿಮಾ, ಸಿ.ಜಿ.ಮಂಜುಳಾ, ಕುಶಲಾ ಡಿಮೆಲೊ ಹಾಗೂ ಉಮಾ ಅನಂತ್ ಅವರ ಕೃತಿಗಳ ಬಿಡುಗಡೆಯ ಈ ಸಂದರ್ಭ ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಮಹಿಳೆಯರ ಹೆಜ್ಜೆಗುರುತುಗಳನ್ನು ದಾಖಲಿಸಿದ್ದಕ್ಕೆ ಸಾಕ್ಷಿಯಾಯಿತು.
ಮೂರು ದಶಕಕ್ಕೂ ಹೆಚ್ಚು ಕಾಲ ‘ಪತ್ರಿಕೋದ್ಯಮ’ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಇವರೆಲ್ಲರೂ ಅಲ್ಲಿನ ಅನುಭವವನ್ನು ಹಾಗೂ ಅವರುಗಳು ಬರೆದ ಲೇಖನಗಳನ್ನು ಪುಸ್ತಕ ರೂಪದಲ್ಲಿ ತಂದಿರುವುದು ನಿಜಕ್ಕೂ ಅಭಿನಂದನೀಯ! ಡಾ. ಚಂದ್ರಶೇಖರ ಕಂಬಾರ ಅವರು ಹೇಳಿದಂತೆ ಪತ್ರಿಕೆಗಳು ನಾಡಿನ ದಿನಚರಿ ಬರೆಯುವುದರ ಜೊತೆಗೆ ನಾಡಿನ ಇತಿಹಾಸವನ್ನೂ ದಾಖಲಿಸುತ್ತದೆ. ಅದರ ಜೊತೆಗೆ ನಾಡು ಕಟ್ಟುವ ಕೆಲಸದೊಂದಿಗೆ…. ಜನಪರವಾಗಿ ಜನಮನದಲ್ಲಿ ‘ಪ್ರಜಾಪ್ರಭುತ್ವ’, ‘ಸ್ವಾತಂತ್ರ್ಯ’, ‘ಮಾನವ ಹಕ್ಕು’ ಮೊದಲಾದ ಪರಿಕಲ್ಪನೆಗಳ ಬಗ್ಗೆ ಅರಿವು ಮೂಡಿಸುತ್ತಾ ಅವನ್ನು ಜೀವಂತವಾಗಿರಿಸಿ, ಆ ನಿಟ್ಟಿನಲ್ಲಿ ಜನರನ್ನು ಜಾಗೃತವಾಗಿಡುವುದು ಪತ್ರಿಕೆಗಳ ಹಿರಿಮೆ-ಗರಿಮೆ ಎಂದು ಹೇಳುತ್ತಾ ಅವರ ಹಳ್ಳಿಯಲ್ಲಿ ಬಾಲ್ಯದ ದಿನಗಳಲ್ಲಿ ಪತ್ರಿಕೆಗಳು ಸಿಗುತ್ತಿದ್ದ ಪರಿಯ ಬಗ್ಗೆ ಸ್ವಾರಸ್ಯವಾಗಿ ಮಾತನಾಡಿದರು….
ಅವರು ಹೇಳಿದಂತೆ ಎಷ್ಟು ಪತ್ರಿಕೆಗಳು ಕಾರ್ಯನಿರ್ವಹಿಸುತ್ತಿವೆ ಎಂಬುದು ಮುಖ್ಯ….! ಅದೇನೇ ಇರಲಿ… ನನ್ನನ್ನು ಹವ್ಯಾಸಿ ಪತ್ರಕರ್ತೆಯಾಗಿ ರೂಪಿಸಿ ಪ್ರೋತ್ಸಾಹಿಸುವಲ್ಲಿ ವೇದಿಕೆಯ ಮೇಲಿರುವ ಪೂರ್ಣಿಮಾ, ಮಂಜುಳಾ ಹಾಗೂ ಸಂಧ್ಯಾ ಪೈ ಮೇಡಂ ಅವರುಗಳ ಪಾತ್ರ ಹಿರಿದು… ಈ ಸಂದರ್ಭದಲ್ಲಿ ಅವರಿಗೆಲ್ಲಾ ನನ್ನದೊಂದು ದೊಡ್ಡ ಸೆಲ್ಯೂಟ್’ !








ಈ ಚಿತ್ರದಲ್ಲಿ ಒಂದು ತೊಡಕಿದೆ. ಗುರುತಿಸಿ. ಸನ್ಮಾನ ಮಾಡುತ್ತಿರುವುದು, ಹಿಂದೆ ಕುಳಿತ ಸಮರ್ಥ ಲೇಖಕಿಯರನ್ನು ಅಂದಮೇಲೆ ಅವರೇಕೆ ಹಿಂದೆ ಅವಿತುಕೊಂಡಿದ್ದಾರೆ?.
ನಾನೂ ಅದನ್ನೇ ಪೂರ್ಣಿಮಾ ಅವರ ಬಳಿ ಹೇಳಿದೆ.ಲಕ್ಷ್ಮಿ ವೆಂಕಟೇಶ ಅವರೆ, ಅವರ ಕೃತಿಗಳ ಬಿಡುಗಡೆ ಕಾರ್ಯಕ್ರಮ ಇದಾಗಿತ್ತು ಮತ್ತು ಇದು ಅವರ ಸನ್ಮಾನ ಕಾರ್ಯಕ್ರಮ ಆಗಿರಲಿಲ್ಲ. ಆದರೆ ಅವರೆಲ್ಲಾ ಹಾಗೆ ‘ಹಿಂದೆ’ ಕುಳಿತಿದ್ದು ಮಾತ್ರ ಮುದ್ರಣಮಾಧ್ಯಮದವರು ಎಂದಿನಂತೆ ‘ತೆರೆಮರೆ’ಯಲ್ಲೇ ಇದ್ದು, ‘ಲೈಮ್ಲೈಟ್’ಗೆ ಕಾಣಿಸಿಕೊಳ್ಳುವುದಿಲ್ಲ ಎಂಬುದನ್ನು ನಿರೂಪಿಸುವಂತಿತ್ತು! (ನೀವು ಹೇಳುವಂತೆ ‘ಅವಿತಿಲ್ಲ’….ಹಾಗೆ ಭಾವಿಸಿದರೆ ಹಾಗೆ ಕಾಣಿಸುತ್ತದೆ, ಒಟ್ಟಿನಲ್ಲಿ ‘ಆಸನ ವ್ಯವಸ್ಥೆ’ ಕಾರ್ಯಕ್ರಮದ ‘ಉದ್ದೇಶ’ ಮತ್ತು ಸಭಿಕರ ‘ನಿರೀಕ್ಷೆ’ಗೆ ಪೂರಕವಾಗಿರಲಿಲ್ಲ ಎಂದಷ್ಟೇ ಹೇಳಬಹುದು…!). ಆಸನವ್ಯವಸ್ಥೆ ಬಗ್ಗೆ ನನಗೂ ಸಹ ಸರಿ ಎನಿಸಲಿಲ್ಲ ಯಾಕೆಂದರೆ ಬಂದವರೆಲ್ಲರೂ ಲೇಖಕಿಯರೊಂದಿಗೆ ಖುಷಿ ಹಂಚಿಕೊಳ್ಳಲೆಂದೇ ಬಂದದ್ದು….! ಇನ್ನು ಬಿಡುಗಡೆ ಸಮಯದಲ್ಲಿ ಅವರೆಲ್ಲಾ ಮುಂದೆ ಬಂದರು ನೋಡೋಣವೆಂದರೆ ನಮಗೆ ಕಾಣಸಿಕ್ಕಿದ್ದು ಕ್ಯಾಮೆರಾಮೆನ್ ಗಳ ‘ಬೆನ್ನು’…. 🙂
ABHINANDANE….PUSTAKAGALA HESARANNU NAMUUDISABEEKITTU.