ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಪ್ರಜಾಮತ'ದಲ್ಲೊಂದು 'ತುಳಸೀದಳ'

imagesಮೊನ್ನೆ ಹೀಗಾಯ್ತು… ಕಲಾವಿದ ಪ ಸ ಕುಮಾರ್ ಅವರ ಮನೆಗೆ ಹೋಗಿದ್ದೆ. ಅಲ್ಲೇ ಸಮೀಪದಲ್ಲಿ ಅವರ ಸ್ಟುಡಿಯೋ ಕೂಡಾ ಇದೆ. ನಾನು ಒಳಹೊಕ್ಕಾಗ ಪ ಸ ಕುಮಾರ್ ತಮ್ಮದೇ ಲೋಕದಲ್ಲಿ ಮುಳುಗಿ ಹೋಗಿದ್ದರು. ತಮ್ಮ ಮುಂದೆ ಹತ್ತಾರು ರೇಖಾ ಚಿತ್ರ ಹರಡಿ ಕೂತಿದ್ದರು.
ಪ ಸ ಕುಮಾರ್ ಗೊತ್ತಿರುವ ಎಲ್ಲರಿಗೂ ಗೊತ್ತಿರುವ ಸತ್ಯವೆಂದರೆ ಅವರು ತಮ್ಮ ಯಾವುದೇ ರೇಖಾ ಚಿತ್ರಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವುದೇ ಇಲ್ಲ. ಹೀಗಾಗಿಯೇ ‘ಕನ್ನಡಪ್ರಭ’ದ ಸಾಪ್ತಾಹಿಕದ ಕಥೆ, ಕವಿತೆಗೆ ಸವಾಲೆಸೆಯುವಂತೆ ಅವರು ರಚಿಸುತ್ತಿದ್ದ ಚಿತ್ರಗಳು ಎಲ್ಲಿವೆಯೋ…? ಯಾರಿಗೆ ಗೊತ್ತು. ಅಂತಹದ್ದರಲ್ಲಿ ಪ ಸ ಕುಮಾರ್ ತಮ್ಮ ರೇಖಾಚಿತ್ರಗಳೊಂದಿಗೆ ಕುಳಿತಿದ್ದರು ಎಂಬುದೇ ನನಗೆ ಆಶ್ಚರ್ಯ. ಅದರಲ್ಲೂ ಪ ಸ ಕುಮಾರ್ ಶೈಲಿಗೆ ತೀರಾ ಭಿನ್ನ ಎನ್ನುವ ರೀತಿಯ ದೊಡ್ಡ ದೊಡ್ಡ ಚಿತ್ರಗಳು.
img_6831‘ಏನಿದು?’ ಎನ್ನುವ ನನ್ನ ಪ್ರಶ್ನೆ ಅವರಿಗೆ ತಲುಪಿಯಾಗಿತ್ತು. ಪ ಸ ಕುಮಾರ್ ‘ಪ್ರಜಾಮತ’ದ ಚಿತ್ರಗಳು ಎಂದರು. ತಕ್ಷಣ ‘ಓಹೋ! ತುಳಸೀದಳ’ ಎಂಬುದು ಫ್ಲಾಶ್ ಆಯಿತು.
ಒಂದು ರೀತಿಯಲ್ಲಿ ಪ್ರಜಾಮತಕ್ಕೂ, ಪ ಸ ಕುಮಾರ್ ಗೂ ಹೆಸರು ತಂದದ್ದು ‘ತುಳಸೀದಳ’ ಧಾರಾವಾಹಿಗೆ ಬರೆದ ಚಿತ್ರಗಳು. ಕಣ್ಣರಳಿಸಿ ನೋಡುತ್ತಿದ್ದಾಗ ಪ ಸ ಕುಮಾರ್ ಅದರ ಇನ್ನಷ್ಟು ವಿಶೇಷಗಳನ್ನು ಹೇಳಿದರು. ಬಹುಷಃ ಕನ್ನಡ ಮ್ಯಾಗಜೈನ್ ನಲ್ಲಿ ಇಷ್ಟು ದೊಡ್ಡ ರೇಖಾ ಚಿತ್ರಗಳನ್ನು ಮಾಡಿದ್ದು ಅವರೇ ಇರಬೇಕು. ಒಂದು ಚಿತ್ರದ ಮೇಲೆ ತಮ್ಮ ಅಂಗೈ ಇರಿಸಿ ತೋರಿಸಿದರು. ‘ತುಳಸೀದಳ’ದ ಪಾತ್ರಗಳೆಲ್ಲವೂ ತಮ್ಮ ರಿಯಲ್ ಆಕಾರದಲ್ಲಿಯೇ ಎದ್ದು ಬಂತೇನೋ ಎನ್ನುವಷ್ಟು ದೊಡ್ಡದಾದ ಚಿತ್ರಗಳನ್ನು ಕುಮಾರ್ ರಚಿಸಿದ್ದರು.
ನೆನಪಿಗಿರಲಿ ಎಂದು ಒಂದಷ್ಟು ಚಿತ್ರಗಳನ್ನು ಕ್ಲಿಕ್ಕಿಸಿದೆ.

‍ಲೇಖಕರು avadhi

7 April, 2009

2 Comments

  1. chidambara baikampady

    nijakkU pa sa kumaar avarige vandanegalu. naanu prajaamatakke bareyuttiddaaga avara chitragaLu nanna baravanigege pusti kottive. aadare naanu kannadaprabhadalli iddasthukaala nanna parichayavannu prajaamatada moolaka heelikollalilla. aadaroo avara bagge nanage olavide, yaakeMdare avaru apoorva kalaavida

  2. r t sharan

    ಕಾಲೇಜಿನ ದಿನಗಳ ಸವಿನೆನಪುಗಳು ಮರುಕಳಿಸಿದವು – “ತುಳಸಿದಳ` ಓದಲು ಪಬ್ಲಿಕ್ ವಾಚನಾಲಯದಲ್ಲಿ ಗಂಟೆಗಟ್ಟಲೆ ಪ್ರಜಾಮತಕ್ಕಾಗಿ ಕಾಯುತ್ತಿದ್ದೆ . ಒಂದೇ ಥರದ ಕತೆ-ಕಾದಂಬರಿಗಳನ್ನು ಓದಿ ಬೇಜಾರಾಗಿದ್ದ ನಮಗೆ ಆಗ `ತುಳಸಿದಳ` ಒಳ್ಳೆ thrill ಕೊಟ್ಟಿತ್ತು .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading