ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ಯಾಟಿ ಕಂಡ ‘ಜಾನ್’

ಜೀವನ ಸುಲಭ; ಅದನ್ಯಾಕೆ ಅಷ್ಟು ಕಠಿಣ ಮಾಡಿಕೊಳ್ಳಬೇಕು?

ಸಾವಯವ ಕೃಷಿಕ, ಸಂತಸದ ಬದುಕಿನ ಪ್ರತಿಪಾದಕ, ಥಾಯ್ಲೆಂಡಿನ ‘ಪನ್ ಪನ್ ಸೆಂಟರ್’ ಸ್ಥಾಪಕ ಜಾನ್ ಜಾನ್ಡಾಯ್ ಜತೆ ಸಂವಾದ ಹಾಗೂ ಮಾತುಕತೆ.

‘ಜೀವನ ಸುಲಭ; ಅದನ್ಯಾಕೆ ಅಷ್ಟೊಂದು ಕಠಿಣ ಮಾಡಿಕೊಳ್ಳಬೇಕು?’ ಎನ್ನುತ್ತ ಪ್ರಕೃತಿ ಜತೆ ಸರಳವಾಗಿ ಬದುಕುತ್ತಿರುವ ಥಾಯ್ಲೆಂಡಿನ ರೈತ ಜಾನ್ ಜಾನ್ಡಾಯ್. ಸಾವಯವ ಕೃಷಿ, ಬೀಜ ಸಂರಕ್ಷಣೆ, ಮಣ್ಣಿನ ಮನೆಗಳ ನಿರ್ಮಾಣದಲ್ಲಿ ಪರಿಣಿತನಾಗಿರುವ ಜಾನ್ಡಾಯ್, ‘ಪನ್ ಪನ್ ಸೆಂಟರ್’ ಸ್ಥಾಪಕ.

ಹಣ ಗಳಿಸಬೇಕು ಎಂಬ ಆಸೆ ಹೊತ್ತುಕೊಂಡು ಹಳ್ಳಿಯಿಂದ ಬ್ಯಾಂಕಾಕ್‍ಗೆ ವಲಸೆ ಬಂದ ಜಾನ್ಡಾಯ್, ಅಲ್ಲಿನ ಒತ್ತಡದ ಬದುಕಿನಿಂದ ಬೇಸತ್ತು ವಾಪಸು ಹಳ್ಳಿಗೆ ಬರುತ್ತಾರೆ. ಸ್ವಾವಲಂಬನೆ ಸಾಧಿಸುವ ತಮ್ಮ ಗುರಿಯನ್ನು ಒಂದೊಂದಾಗಿ ಈಡೇರಿಸಿಕೊಳ್ಳುತ್ತ, ನಿಸರ್ಗದ ಜತೆ ಬದುಕು ಎಷ್ಟೊಂದು ಸುಲಭವಿದೆಯಲ್ಲ ಎಂಬುದನ್ನು ಕಂಡುಕೊಳ್ಳುತ್ತಾರೆ.

ಜಪಾನಿನ ಮಸನೊಬು ಫುಕುವೊಕ ಅವರು ‘ಒಂದು ಹುಲ್ಲಿನ ಕ್ರಾಂತಿ’ ಮೂಲಕ ಕೃಷಿ ಹಾಗೂ ಬದುಕಿಗೆ ಹೊಸ ದೃಷ್ಟಿ ನೀಡಿದ ಹಾಗೆ ಥಾಯ್ಲೆಂಡಿನ ಜಾನ್ ಜಾನ್ಡಾಯ್ ಕೂಡ ನೆಮ್ಮದಿಯ ಜೀವನಕ್ಕೆ ಸರಳ ಸೂತ್ರಗಳನ್ನು ಪ್ರತಿಪಾದಿಸುತ್ತಿದ್ದಾರೆ; ಅದರಂತೆ ಬದುಕುತ್ತಿದ್ದಾರೆ. ಸದ್ದಿಲ್ಲದೇ ಜಗತ್ತೇ ಅವರತ್ತ ನೋಡತೊಡಗಿದೆ.

ದೇಸಿ ಬೀಜ ಸಂರಕ್ಷಣೆ ಕುರಿತಂತೆ ಸಾಕ್ಷ್ಯಚಿತ್ರವೊಂದರ ಚಿತ್ರೀಕರಣಕ್ಕಾಗಿ ತಮ್ಮ ತಂಡದ ಜತೆ ಕರ್ನಾಟಕವನ್ನು ಸುತ್ತುತ್ತಿರುವ ಜಾನ್ ಜಾನ್ಡಾಯ್, ಇಲ್ಲಿನ ಸಾವಯವ ಕೃಷಿ ಹಾಗೂ ಬೀಜ ಸಂರಕ್ಷಣೆ ಜ್ಞಾನವನ್ನು ದಾಖಲಿಸುತ್ತಿದ್ದಾರೆ. ಸಹಜ ಸಮೃದ್ಧ, ಜೈವಿಕ್ ಕೃಷಿಕ್ ಸೊಸೈಟಿ ಹಾಗೂ ದಿ ಗ್ರೀನ್ ಪಾತ್ ಸಹಯೋಗದಲ್ಲಿ ಜಾನ್ ಜಾನ್ಡಾಯ್ ಅವರ ಸಂವಾದವನ್ನು ಭಾನುವಾರÀ (ಏ. 15) ಸಂಜೆ 5ಕ್ಕೆ ಆಯೋಜಿಸಲಾಗಿದೆ.

‘ಲೈಫ್ ಈಸ್ ಈಜಿó. ವೈ ಡು ವಿ ಮೇಕ್ ಇಟ್ ಸೋ ಹಾರ್ಡ್’ ಎಂಬ ಟೆಡ್‍ಟಾಕ್ ಮೂಲಕ ವಿಶ್ವವಿಖ್ಯಾತರಾಗಿರುವ ಜಾನ್ ಜಾನ್ಡಾಯ್, ಪ್ರಕೃತಿ ಜತೆಗಿನ ತಮ್ಮ ಒಡನಾಟವನ್ನು ಆಸಕ್ತರ ಎದುರು ತೆರೆದಿಡಲಿದ್ದಾರೆ. ಇದೇ ಸಂದರ್ಭದಲ್ಲಿ ಪತ್ರಕರ್ತ ಆನಂದತೀರ್ಥ ಪ್ಯಾಟಿ ಬರೆದ, ಕೃಷಿ ಮಾಧ್ಯಮ ಕೇಂದ್ರ ಪ್ರಕಟಿಸಿದÀ ‘ಪನ್ ಪನ್ ಸಂತ’ ಪುಸ್ತಕದ ಬಿಡುಗಡೆಯನ್ನೂ ಅವರು ಮಾಡಲಿದ್ದಾರೆ.

ದಿನಾಂಕ: ಭಾನುವಾರ, ಏಪ್ರಿಲ್ 15, 2018 ಸಂಜೆ 5 ಗಂಟೆ
ಸ್ಥಳ: ‘ದಿ ಗ್ರೀನ್ ಪಾತ್’, ಮೆಟ್ರೋ ಸ್ಟೇಷನ್ ಎದುರು, ಸಂಪಿಗೆ ರಸ್ತೆ, ಮಲ್ಲೇಶ್ವರ, ಬೆಂಗಳೂರು
ಫೋನ್: 080 2356 9777

‍ಲೇಖಕರು avadhi

13 April, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading