ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೊಲೀಸ್ ಸಾಹಿತ್ಯ ಸಂಭ್ರಮ 2022ಕ್ಕೆ ಕೃತಿಗಳ ಆಹ್ವಾನ…

ಬುಕ್ ಬ್ರಹ್ಮ ಮತ್ತು ಆರಕ್ಷಕ ಲಹರಿ ಮಾಸಪತ್ರಿಕೆಯ ಸಹಯೋಗದೊಂದಿಗೆ ಸೆಪ್ಟೆಂಬರ್ ೧೮ರಂದು ನಡೆಯಲಿರುವ ’ಪೊಲೀಸ್‌ ಸಾಹಿತ್ಯ ಸಂಭ್ರಮ-೨೦೨೨’ರಲ್ಲಿ ಅತ್ಯುತ್ತಮ ಕೃತಿಗಳಿಗೆ ಪ್ರಶಸ್ತಿ ನೀಡುವುದಕ್ಕಾಗಿ ಕೃತಿಗಳನ್ನು ಆಹ್ವಾನಿಸಲಾಗಿದೆ. 

ಪೊಲೀಸ್‌ ಇಲಾಖೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ  ಸಿಬ್ಬಂದಿ ಮತ್ತು ಅಧಿಕಾರಿಗಳು ಅಲ್ಲದೆ ಕಾನೂನು ಸುವ್ಯವಸ್ಥೆಗಳ ಜೊತೆಗೆ ಕರ್ನಾಟಕ ರಾಜ್ಯ ಪೊಲೀಸ್ ನ ಇತರ ವಿಭಾಗಗಳಾದ ಸಿಐಡಿ, ಕೆ. ಎಸ್. ಆರ್. ಪಿ, ರಾಜ್ಯ ಗುಪ್ತಚರ ಇಲಾಖೆ, ಕರ್ನಾಟಕ ಲೋಕಾಯುಕ್ತ ಪೊಲೀಸ್, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ, ಹೈಕೋರ್ಟ್ ವಿಜಿಲೆನ್ಸ್, ಸಿ.ಎ.ಆರ್/ಡಿ.ಆರ್ ಹಾಗೂ ಎ ಸಿ ಬಿ ಯಲ್ಲಿ ಸೇವೆ ಸಲ್ಲಿಸುತ್ತಿರುವವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸೃಜನಶೀಲ, ಸೃಜನೇತರ ಮತ್ತು ಅನುಭವ ಕಥನ ಪ್ರಕಾರಗಳಲ್ಲಿ ತಲಾ ಮೂರು ಪ್ರಶಸ್ತಿ ನೀಡಲಾಗುತ್ತದೆ. ಸ್ಪರ್ಧೆಗೆ ಬಂದ ಕೃತಿಗಳನ್ನು ಪರಿಶೀಲಿಸಿ ಪರಿಣಿತರ ತಂಡ ಪ್ರಶಸ್ತಿಯನ್ನು ನಿರ್ಧರಿಸಲಿದೆ. 

ಆಸಕ್ತರು ತಮ್ಮ ಪ್ರಕಟಿತ ಕೃತಿಗಳನ್ನು ಸ್ಪರ್ಧೆಗೆ ಸೆಪ್ಟೆಂಬರ್ ೫ರ ಒಳಗಾಗಿ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು. 

“ಪೊಲೀಸ್ ಸಾಹಿತ್ಯ ಸಂಭ್ರಮ 2022”
ಸಂಪಾದಕರು, 
ಬುಕ್ ಬಹ್ಮ, ವಿ-೪, ಕೆ‌ಎಸ್‌ಎಸ್‌ಐಡಿಸಿ ಆವರಣ, 
ಎಲೆಕ್ಟ್ರಾನಿಕ್ಸ್‌ ಸಿಟಿ ಮೊದಲನೆಯ ಹಂತ,

ಬೆಂಗಳೂರು-೧೦೦
ದೂರವಾಣಿ – 7892608118 

‍ಲೇಖಕರು Admin

28 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading