ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೇಟೆಯಲ್ಲಿ ಸಿಕ್ಕ ತೇಜಸ್ವಿ..

ಹಾಗೆ ಇವತ್ತು ಪೇಟೆ ಕಡೆ ಹೋಗಿದ್ದಾಗ ನವಕನಾ೯ಟಕ ಪಬ್ಲಿಕೇಷನ್ ನಿಂದ ನನ್ನ ಇಷ್ಟದ ಲೇಖಕ ಪೂಣ೯ಚಂದ್ರ ತೇಜಸ್ವಿ ಅವರ ಪುಸ್ತಕಗಳನ್ನು ಖರೀದಿಸಿದೆ. ಎಲ್ಲಾ ಓದಿದ್ದ ಪುಸ್ತಕಗಳೇ. ಪುಸ್ತಕ ಕೊಂಡು ಹೋಗಿದ್ದ ಗೆಳೆಯರು ಪುಸ್ತಕ ಕೊಡುವುದನ್ನು ಮರೆತಿದ್ದರು. ಹೇಗೂ ಕಣ್ಣಿಗೆ ಕಟ್ಟುವಂತಹ ಬೈಂಡಿಂಗ್ ನ ತೇಜಸ್ವಿ ಯ 10 ಪುಸ್ತಕಗಳನ್ನು ಒಂದೇ ಬೀಸಿಗೆ ಕೊಂಡು ತಂದೆ. ನಮ್ಮ ಝೆನ್ ಟೀಮಿ ವತಿಯಿಂದ ತೇಜಸ್ವಿ ಅವರ `ಜುಗಾರಿ ಕ್ರಾಸ್’, ರಹಸ್ಯ ವಿಶ್ವ, `ಅಬಚೂರಿನ ಪೋಸ್ಟಾಫೀಸ್’ ನಾಟಕಗಳನ್ನು ಆಡಿಸಿದ್ದೆವು. ಮೊನ್ನೆ ಹೆಸರಾಂತ ರಂಗ ನಿದೇ೯ಶಕರೊಬ್ಬರು ಸಿಕ್ಕಿದ್ದರು. ಹೊಸ ನಾಟಕ ಮಾಡುವ ತಯಾರಿಯಲ್ಲಿದ್ದರು. ತೇಜಸ್ವಿ ಅವರ `ಮಾಯಾ ಲೋಕ’ ಮಾಡಿಸಿ ಎಂದು ಒತ್ತಾಯ ಕೂಡ ಮಾಡಿದೆ. ಇರಲಿ. ಕವಾ೯ಲೂ, ಚಿದಂಬರ ರಹಸ್ಯ, ಜುಗಾರಿಕ್ರಾಸ್, ಪರಿಸರದ ಕಥೆಗಳು, ಅಣ್ಣನ ನೆನಪು ಮುಂತಾದ ಪುಸ್ತಕಗಳು ಈಗ ನನ್ನ ಮುಂದೆ… ಉಗಮ ಶ್ರೀನಿವಾಸ್]]>

‍ಲೇಖಕರು G

7 April, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading