ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೂರಾ ಉಚಿತವಾಗಿಯೆ ‘ಶಿ ಕಪ್’ ಒದಗಿಸಿ..

ಲಲಿತಾ ಸಿದ್ದಬಸವಯ್ಯ 

ಇದು ನಿಸ್ಸಂಶಯವಾಗಿ ಮುಖ್ಯವೂ ಮತ್ತು ತುರ್ತೂ ಆದ ವಿಷಯ.

ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನ್ನಂತಹ ಅನೇಕ ಹೆಣ್ಣುಮಕ್ಕಳು ಈ ಲೇಖನದಲ್ಲಿ ವಿವರಿಸಿರುವ ಹಿಂಸೆಗೆ ಒಳಗಾಗಿಯೇ ಇರುತ್ತಾರೆ. ಸದ್ಯ, ಈಗ ಹಳ್ಳಿಯಲ್ಲಿ ಕೂಡ ನ್ಯಾಪ್ಕಿನ್ ಬಳಕೆ ಬಂದಿದೆ. ಆದರೆ ಅವು ತರುವ ಕೋಟಲೆ ನೋಡಿದರೆ ತುರ್ತಾಗಿ ಅವನ್ನೀಗ ತೊರೆಯುವುದೇ ಸರಿ ಅನ್ನಿಸುತ್ತದೆ.

ಶಿ ಕಪ್ ಬಳಕೆ ಇದ್ದುದ್ದರಲ್ಲಿ ಒಳ್ಳೆಯದು. ಅವುಗಳ ದುಬಾರಿಯೇ ಈಗ ದೊಡ್ಡ ಅಡ್ಡಿ. ಖಾಸಗಿ ಸಂಸ್ಥೆಗಳು ಬೆಲೆ ಇಳಿಸಿ ಕೈ ಸುಟ್ಟುಕೊಳ್ಳುವ ಆದರ್ಶ ಪಾಲನೆ ಮಾಡುತ್ತವೆಂಬುದು ಕನಸಿನ ಮಾತು.

ನಾನು ಈ ಮೂಲಕ ನಮ್ಮ ಅಭಿಮಾನದ ಮಂತ್ರಿ ಉಮಕ್ಕ ಅವರನ್ನು ದಯವಿಟ್ಟು ಈ ಕಡೆಗೊಮ್ಮೆ ನೋಡಿ ಎಂದು ಕೋರುತ್ತೇನೆ . ಅವರು ಅಂತಃಕರಣದವರು, ಹಳ್ಳಿ ಹೆಣ್ಣುಹುಡುಗಿಯರ ಈ ಸಮಸ್ಯೆ ಅರ್ಥ ಮಾಡಿಕೊಳ್ಳ ಬಲ್ಲವರು. ಮೇಡಮ್ ಒಮ್ಮೆ ಇತ್ತ ನೋಡಿ, ಇದು ನಿಜವಾಗಿಯೂ ತುರ್ತು. ಈಗಿನ ಅಹಾರ ಇತ್ಯಾದಿ ಕಾರಣ ದಿಂದ ಎಂಟು ಒಂಭತ್ತು ವರ್ಷಕ್ಕೆಲ್ಲ ನಮ್ಮ ಪುಟ್ಟ ಪುಟ್ಟ ಹೆಣ್ಣುಮಕ್ಕಳು ರುತುಸ್ರಾವಕ್ಕೆ ಈಡಾಗಿಬಿಡುತ್ತಿದ್ದಾರೆ. ಅವರ ದೇಹಲಕ್ಷಣವೆ ಅವರನ್ನು ಹಿಂಡುವುದು ಬೇಡ.

ಸರ್ಕಾರ ಬಡವರ್ಗದ ಹೆಮ್ಮಕ್ಕಳಿಗೆ ಪೂರಾ ಉಚಿತವಾಗಿಯೆ ಈ ಶಿ ಕಪ್ ಒದಗಿಸಿದರೆ ಬಹಳ ಉಪಕಾರವಾಗುತ್ತದೆ. ಮಧ್ಯಮ ವರ್ಗದವರಿಗೆ ಬೆಲೆ ರಿಯಾಯಿತಿ ಕೊಟ್ಟರೆ ಅವರಿಗೂ ಮಹದುಪಕಾರ ಇದು. ನಮ್ಮ ಎಲ್ಲ ಮಹಿಳಾ ಸಂಘಟನೆಗಳೂ ಇತ್ತ ನೋಡುತ್ತವೆಂದುಕೊಂಡಿರುವೆ.

‍ಲೇಖಕರು avadhi

11 July, 2017

1 Comment

  1. ಭಾರತಿ ಬಿ ವಿ

    ಹೀಗೂ ಯೋಚಿಸಬಹುದಲ್ವಾ! ನಿಜ ಮೇಡಂ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading