ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಪುಸ್ತಕ ಓದಿ ಅದೃಷ್ಟಶಾಲಿಗಳಾಗಿ’ …

ಸೃಷ್ಟಿ ಕಲಾಲಯಂ ಮತ್ತು ಅನುಭವ ಶಾಲೆಯು ‘ಲಕ್ಕಿ ಬುಕ್ ಕನ್ನಡ’ ಎಂಬ ವಿಶಿಷ್ಟ ಹಾಗೂ ವಿನೂತನ ಕಾರ್ಯಕ್ರಮವನ್ನು ಡಿಸೆಂಬರ್ 3ರಿಂದ 5ರವರೆಗೆ ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದಲ್ಲಿ ಹಮ್ಮಿಕೊಂಡಿವೆ.

‘ಲಕ್ಕಿ ಬುಕ್ ಕನ್ನಡ’ ಕಾರ್ಯಕ್ರಮಕ್ಕೆ ಕರ್ನಾಟಕದ ಯಾವುದೇ ಪುಸ್ತಕ ಮಳಿಗೆಯಿಂದ ಕನ್ನಡ ಪುಸ್ತಕಗಳನ್ನು ಖರೀದಿಸಿ, ರಸೀದಿಗಳನ್ನು ಕಳುಹಿಸಿ ಅದೃಷ್ಟ ಕೂಪನ್‌ಗಳನ್ನು ಪಡೆದು ಬಹಮಾನ ಗಳಿಸಬಹುದಾಗಿದೆ.


ಕನಿಷ್ಠ 50 ರೂಪಾಯಿ ಮೌಲ್ಯದ ಕನ್ನಡ ಪುಸ್ತಕಗಳನ್ನು ಖರೀದಿಸಿರಬೇಕು. ರಸೀದಿಯಲ್ಲಿ ಖರೀದಿದಾರರ ಹೆಸರಿರಬೇಕು. ಖರೀದಿಯ ಮೂಲ ಪ್ರತಿಯ ರಸೀತಿ, ದೂರವಾಣಿ ಹಾಗೂ ಸ್ವವಿಳಾಸವುಳ್ಳ 5 ರೂಪಾಯಿ ಲಕೋಟೆಯಲ್ಲಿ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು. ರಸೀತಿ ಕಳುಹಿಸಲು ನವೆಂಬರ್ 30ಕೊನೆಯ ದಿನಾಂಕ.

50 ರೂಪಾಯಿ ಮೌಲ್ಯದ ಪುಸ್ತಕ ಖರೀದಿಸಿದರೆ 1 ಅದೃಷ್ಟ ಕೂಪನ್ ಪಡೆಯಬಹುದು. ಹಾಗೆಯೇ ಒಂದು ಸಾವಿರ ರೂಪಾಯಿ ಮೌಲ್ಯದ ಕನ್ನಡ ಪುಸ್ತಕಗಳನ್ನು ಖರೀದಿಸಿದರೆ 25 ಅದೃಷ್ಟ ಕೂಪನ್‌ಗಳನ್ನು ಪಡೆಯಬಹುದಾಗಿದೆ.

ರಸೀತಿಗಳನ್ನು ಕಳುಹಿಸಬೇಕಾದ ವಿಳಾಸ- ಸೃಷ್ಟಿ ಕಲಾಲಯಂ (ಸೃಷ್ಟಿ ವೆಂಚರ್ಸ್‌), ನಂ. 81, 1ನೇ ಮಹಡಿ (ಪುಳಿಯೋಗರೆ ಪಾಯಿಂಟ್ ಮೇಲೆ), ಈ.ಎ.ಟಿ ರಸ್ತೆ,ಬಸವನಗುಡಿ, ಬೆಂಗಳೂರು- 560004. ದೂರವಾಣಿ- 99450 03479.9448171069

‍ಲೇಖಕರು avadhi

18 October, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading