ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಪುಸ್ತಕದಂಗಡಿ’ಯಲ್ಲಿ ಹನೂರು

ಹನೂರ…

ರಾಜಕುಮಾರ ಮಡಿವಾಳರ 

ದೊಡ್ಡ ಕನಸು ಇವರಿಂದ ಕುಮಾರವ್ಯಾಸ ಭಾರತ ಕೇಳಬೇಕೆನ್ನುವುದು ನನ್ನ ಒಳಗಿನ ವಿದ್ಯಾರ್ಥಿ ರಾಜುವಿಗೆ, ನನ್ನ ಪುಟ್ಟ ಅಂಗಡಿಯಲ್ಲಿ ಅಂದುಕೊಂಡ ಅರ್ಧ ಗಂಟೆಯ ಉಪನ್ಯಾಸ ಬರೋಬ್ಬರಿ ಎರಡೂ ಮುಕ್ಕಾಲು ತಾಸು ನಿರರ್ಗಳ ಕುಮಾರವ್ಯಾಸ, ಹರಿಶ್ಚಂದ್ರನ ರಾಘವಾಂಕ, ನಿತ್ಯ ಸ್ಮರಣೀಯ ಜಾನಪದ..

ನಾನು ಸಾಕ್ಷಾತ್ ಸರಸ್ವತಿಯ ತರಗತಿಯಲ್ಲಿದ್ದ ಅನುಭವ. ಹನೂರರಿಗೆ ಒಂದು ಧನ್ಯವಾದ ಬಲು ಸಣ್ಣಮಾತು, ಆತ್ಮವೇ ಬಾಗಿ ನಮಸ್ಕಾರ.

ಇನ್ನು ರಾಜೇಂದ್ರ ಪ್ರಸಾದ್, ಚಿದಂಬರ ನರೇಂದ್ರ , ವೀರಣ್ಣ ಮಡಿವಾಳರ (ಈರಪ್ಮಾವಾ), ಗಿರೀಶ್ ಹಂದಲಗೆರೆ, ಸುಭಾಷ್ ರಾಜಮಾನೆ, ಶ್ರೀಶೈಲ ಮುಗ್ಡಮ್, ಚಿದಂಬರ ಕುಲಕರ್ಣಿ, ಎಲ್ಲೂ ಸಲ್ಲದವನು ಮತ್ತು ತಿಪಟೂರು ಸಿದ್ದು ರಮೇಶ್ ಪರಿವಾರದಿಂದ ಅಂಗಡಿ ತುಂಬಿತುಳುಕಿತು.

ರವಿಕುಮಾರ ಇಟಗಿ, ಅನಿಲ್ ಹುಲಮನಿ, ಮಂಜು ಕಾಳೆ 10-15 ನಿಮಿಷದಲ್ಲಿ ಎಲ್ಲ ತಯಾರಿ ಮಾಡಿಟ್ಟ ಬಗೆ, ಅಂಗಡಿ ಬಿಟ್ಟುಕೊಟ್ಟ ಸುಮಾ ರಾಜಕುಮಾರ್, ಇದಿಷ್ಟು ಫೋಟೊ ಕೊಟ್ಟ ಸುಮಾ ಎಸ್ ಕೆ
ಎಲ್ಲರಿಗೂ ಧನ್ಯವಾದ. ವಾಹನ ವ್ಯವಸ್ಥೆ ಮಾಡಿಕೊಟ್ಟ ಶಿವ ಶೆಕ್ಕಿ ಮಾವಾ ಲವ್ಯೂ..

ಮಿಕ್ಕಂತೆ ನಾನು ಈಗಲೂ ಕುಮಾರವ್ಯಾಸನಿಗೆ ತೆರೆದ ಕಿವಿ.

‍ಲೇಖಕರು avadhi

24 January, 2019

1 Comment

  1. ಹ ವೆಂ ಕಾಖಂಡಿಕಿ

    ರಾಜಕುಮಾರ,
    ಕೃಷ್ಣಮೂರ್ತಿ ಹನೂರರ ವಾಚನ ಮತ್ತು ವ್ಯಾಖ್ಯಾನ ಕೇಳುವ ಅವಕಾಶ ನಾನು ತಪ್ಪಿಸಿಕೊಂಡೆ.
    ಮುಂದಿನ ದಿನಗಳಲ್ಲಿ ಇಂತಹ ಕಾರ್ಯಗಳನ್ನು ಆಯೋಜಿಸಿದಾಗ ನನಗೂ ತಿಳಿಸಿರಿ.
    ಹನೂರರು ನಮ್ಮ ನಡುವಿನ ಬಹುದೊಡ್ಡ ವಿದ್ವಾಂಸರು.
    ಅಭಿನಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading