ಪಿ ಸಾಯಿನಾಥ್ ಹೊಸ ಕೃತಿ ಕನ್ನಡದಲ್ಲಿ..

ಹೆದ್ದಾರಿಗಳಿಗಿಂತ ಕಾಲ್ದಾರಿ..
ಪಿ ಸಾಯಿನಾಥ್ ಹಾಗೂ ಜಿ ಎನ್ ಮೋಹನ್ ‘ಹಾಯ್’ ಅಂದು ದಶಕಗಳು ಉರುಳಿವೆ. ಈ ಗೆಳೆತನದ ಅವಧಿಯಲ್ಲಿ ಇಬ್ಬರೂ ಹಲವು ಕೆರೆಯ ನೀರು ಕುಡಿದಿದ್ದಾರೆ. ಇಬ್ಬರಿಗೂ ಅರಿವಾಗಿರುವುದು ಮಾಧ್ಯಮ ಎನ್ನುವುದು ನಾಲ್ಕನೆಯ ಸ್ಥಂಭ ಹೌದು ಆದರೆ ಸಿಕ್ಕಾಪಟ್ಟೆ ಲಾಭ ಮಾಡಲು ಹೊರಟಿರುವ ಏಕೈಕ ಸ್ಥಂಭವೂ ಹೌದು. ಹಾಗಾಗಿಯೇ ಇಂದಿನ ಮಾಧ್ಯಮದ ಒಳಗೆ ಸಾಮಾಜಿಕ ಕಳಕಳಿಯ ಉಸಿರಿನ ತಾಣಗಳು ಕಿರಿದಾಗುತ್ತಿವೆ. ಅಬ್ಬರದ ದನಿ, ಆಧಾರವಿಲ್ಲದ ಹೂರಣ ಇವು ಮೂಗುದಾರ ಹಾಕಲಾಗದ ಅಶ್ವಮೇಧದ ಕುದುರೆಯಂತೆ ಓಡುತ್ತಿವೆ. ಹಾಗಾಗಿ ಒಂದು ಮಿಣಿ ಮಿಣಿ ದೀಪವನ್ನು ಹುಟ್ಟುಹಾಕುವುದರಲ್ಲಿ ಇಬ್ಬರಿಗೂ ನಂಬಿಕೆ ಇದೆ.
ಪಿ ಸಾಯಿನಾಥ್ ಹಾಗೂ ಜಿ ಎನ್ ಮೋಹನ್ ಅವರ ಗೆಳೆತನದ ಕಾರಣದಿಂದಾಗಿ ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಎನ್ನುವ ನಿಟ್ಟುಸಿರಿನ ಸಂಕಲನ ಓದುಗರಿಗೆ ಧಕ್ಕಿದೆ. ಪಿ ಸಾಯಿನಾಥ್ ‘ಪರಿ’ಯನ್ನು ಹುಟ್ಟು ಹಾಕಿದರೆ, ಜಿ ಎನ್ ಮೋಹನ್ ಅದನ್ನು ಕನ್ನಡದಲ್ಲಿ ಧಕ್ಕಿಸಿಕೊಡುವ ಕೆಲಸ ಮಾಡುತ್ತಿದ್ದಾರೆ. ಇಬ್ಬರಿಗೂ ಬೀದಿ ಬದಿಯಲ್ಲಿ ಕುಳಿತು ಮೀನು ತಿನ್ನುವುದು, ಹಳ್ಳಿ ಹಳ್ಳಿ ತಿರುಗುವುದು, ಮಾತು ಸತ್ತು ಹೋಯಿತು ಎನ್ನುವ ಕಥೆಗಳನ್ನು ಲೋಕದ ಮುಂದಿಡುವುದು ಹವ್ಯಾಸವಲ್ಲ, ಜವಾಬ್ದಾರಿ ಎನಿಸಿದೆ. ಇಬ್ಬರೂ ತಮ್ಮ ತಮ್ಮ ಮಾಧ್ಯಮಗಳಲ್ಲಿ ಈ ಕಥೆಗಳನ್ನು ಮುಂದಿಟ್ಟಿದ್ದಾರೆ.

ಈ ಇಬ್ಬರಿಗೂ ಹೆದ್ದಾರಿಗಳಿಗಿಂತ, ಚಕ್ಕಡಿ ಸಾಗುವ, ನಡೆದು ಮುಟ್ಟುವ ಕಾಲ್ದಾರಿಗಳೇ ಇಷ್ಟ. ಈ ಇಬ್ಬರ ಮೇಲಿಂದ ಮೇಲಿನ ಮಾತುಕತೆಯ ಕಾರಣದಿಂದಾಗಿ ಈ ಕೃತಿ ಈಗ ನಿಮ್ಮ ಕೈನಲ್ಲಿ..

PARI BOOK COVER-1 (2)

ಈ ‘ಪರಿ’..
—————————— ———————–
ಪಿ ಸಾಯಿನಾಥ್ ಹುಟ್ಟುಹಾಕಿದ ಕನಸು- ಪರಿ. ruralindiaonline.org

ಅಂತರ್ಜಾಲ ಮಾಧ್ಯಮ ಶರವೇಗದಲ್ಲಿ ನಮ್ಮನ್ನು ಆವರಿಸಿಕೊಳ್ಳಲಿದೆ. ಅಂತರ್ಜಾಲ ಎನ್ನುವುದು ಮಾಹಿತಿಯ ಗೋಡೌನ್ ಆಗಿ ಬದಲಾಗುವ ದಿನ ದೂರ ಇಲ್ಲ. ಬೆಂಗಳೂರಿನ ಕಸವನ್ನೆಲ್ಲಾ ಮಂಡೂರಿಗೆ ಎತ್ತಿ ಹಾಕಿದ ಹಾಗೆ ಅಂತರ್ಜಾಲದ ತಾಣ ಮಾಹಿತಿ ತಿಪ್ಪೆಯೂ ಆಗಿಬಿಡುವ ಅಪಾಯವಿದೆ.

ಇಂತಹ ಸಂದರ್ಭದಲ್ಲಿ ಹೊಸ ಮಾಧ್ಯಮಕ್ಕೂ ಕಳಕಳಿಯ ಕಣ್ಣು ತೊಡಿಸುವ ಪ್ರಯತ್ನ ಈ ‘ಪರಿ’. ಭಾರತ ಎನ್ನುವುದು ಕಾಮನಬಿಲ್ಲಿನಂತೆ ಹತ್ತು ಹಲವು ಬಣ್ಣದ ಗುಡಾಣ ಎನ್ನುವುದನ್ನು ಈ ‘ಪರಿ’ ಹೊಕ್ಕವರಿಗೆಲ್ಲರಿಗೂ ಅರ್ಥವಾಗಿಬಿಡುತ್ತದೆ. ‘ಪರಿ’ ಲೇಖನ, ಆಡಿಯೋ, ವಿಡಿಯೋ ಗಳ ತಾಣ. ಬಹು ಸಂಸ್ಕೃತಿಯನ್ನು ಕಾಪಿಟ್ಟಿರುವ ತಾಣ.

ಈ ತಾಣದಲ್ಲಿದ್ದ ಲೇಖನಗಳನ್ನು ಕನ್ನಡಕ್ಕೆ ದಾಟಿಸುವ ಹೊಣೆಯನ್ನು ‘ಕ್ರೇಜಿ ಫ್ರಾಗ್ ಮೀಡಿಯಾ’ ಸಂಸ್ಥೆ ಹೊತ್ತುಕೊಂಡಿತು. ಹಾಗೆ ಕನ್ನಡೀಕರಿಸುತ್ತಿದ್ದಾಗ ಮೂಡಿದ್ದು ಈ ‘PARI’ಯ ಸೊಬಗಿನ ಕಲ್ಪನೆ.

ಸಾಯಿನಾಥ್ ಮತ್ತು ಅವರಂತೆಯೇ ಊರೂರು ತಿರುಗಿದವರ ಕಥೆಗಳು ಇಲ್ಲಿವೆ.

ಓದಿ. ಬೆರಗಾಗಿ.. ಅಷ್ಟೇ ಅಲ್ಲ, ಪರಿಯ ಜೊತೆ ನೀವೂ ಕೈಗೂಡಿಸಿ

‍ಲೇಖಕರು Admin

June 29, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. shama nandibetta

    ಹವ್ಯಾಸವಲ್ಲ, ಜವಾಬ್ದಾರಿ ಎನಿಸಿದೆ.

    Javabdari enisidaagasthe mowlikavada kelasavoo saadhya

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: