ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆಯ ಜೀಪ್ ಸ್ಮರಣಾರ್ಹ…

ಶಿವ ಪ್ರಸಾದ್

ಕಾಡುಗಳ್ಳ, ಹಂತಕ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಐಎಫ್‌ಎಸ್ ಅಧಿಕಾರಿ “ಕೀರ್ತಿಚಕ್ರ” ಪಿ.ಶ್ರೀನಿವಾಸ್ ಬಳಸಿದ್ದ 3 ಜೀಪ್‌ಗಳಲ್ಲಿ ಒಂದನ್ನು ರಿಪೇರಿ ಮಾಡಿಸಿ ಓಡಾಡುವ ಸ್ಥಿತಿಗೆ ತರಲಾಗಿದ್ದು, ಅದನ್ನು ಸ್ಮರಣೀಯ ವಾಹನವಾಗಿ ಪರಿವರ್ತಿಸಲಾಗಿದೆ. 30 ವರ್ಷಗಳ ಹಿಂದೆ ಈ ಜೀಪನ್ನು ಶ್ರೀನಿವಾಸ್ ರವರು ಕೊಳ್ಳೇಗಾಲ ಅರಣ್ಯ ವಿಭಾಗದ ಪಾಲಾರ್ ರೇಂಜ್ ಕಚೇರಿ ಬಳಿ ಬಿಟ್ಟಿದ್ದರು. ಆ ಸಂಧರ್ಭದಲ್ಲಿಯೇ ಈ ಜೀಪ್ scrap ಹಂತದಲ್ಲಿತ್ತು. ಅಂತಹ ಜೀಪನ್ನು ಇಂದು ಸ್ಮರಣಾರ್ಹ ಗೊಳಿಸಿದ್ದಾರೆ.

ಭಾರತದಲ್ಲಿ ಹುತಾತ್ಮರಾದ ಅರಣ್ಯಾಧಿಕಾರಿಯೊಬ್ಬರಿಗೆ ಈ ರೀತಿ ಗೌರವ ನೀಡಿರುವುದು ಇದೇ ಮೊದಲು. ಇದಕ್ಕೂ ಹಲವು ವರ್ಷಗಳ ಮುಂಚಿತವಾಗಿ ವೀರಪ್ಪನ್ ನ ಹುಟ್ಟೂರಾದ ಕಾಡಂಚಿನ ಗ್ರಾಮ ಗೋಪಿನಾಥಂನ ಮುಖ್ಯ ದೇವಾಲಯವೊಂದರಲ್ಲಿ ಶ್ರೀನಿವಾಸ್ ರವರ ಭಾವಚಿತ್ರ ಇಟ್ಟು ಪೂಜಿಸಲಾಗುತ್ತಿದೆ. ಕೊಳ್ಳೆಗಾಲ ನಗರದ ಅರಣ್ಯ ವಿಶ್ರಾಂತಿ ಗೃಹವನ್ನು ವಸ್ತುಸಂಗ್ರಹಾಲಯವನ್ಬಾಗಿ ರೂಪಿಸಿ, ಅಲ್ಲಿಯೇ ಈ ಜೀಪನ್ನು ನಿಲ್ಲಿಸಿ, ಕೀರ್ತಿಚಕ್ರ ಶ್ರೀನಿವಾಸ್ ರವರ ಕೀರ್ತಿಯನ್ನು ಸ್ಮರಣಾರ್ಥಗೊಳಿಸುವ ಕಾರ್ಯಕ್ಕೆ ಮುಂದಾದ ಕರ್ನಾಟಕ ಅರಣ್ಯ ಇಲಾಖೆ ಹಾಗೂ ಈ ಹಿಂದಿನ ಮಲೆಮದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ ಏಡುಕೊಂಡಲು ಅಭಿನಂದನಾರ್ಹರು.

‍ಲೇಖಕರು Admin

17 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading