ಪಿನ್ ಕೋಡ್ಸ್ (PINCODES)
ಪೇಂಟ್ ಮಾಡಿದ ಪೋಸ್ಟ್ ಕಾರ್ಡ್ಗಳ ಪ್ರದರ್ಶನ
11 ಕಲಾವಿದರು; 100 ಕಲಾಕೃತಿಗಳು
ಪರಿಕಲ್ಪನೆ: ಗಿರಿಧರ್ ಖಾಸನೀಸ್ ಸಂಯೋಜನೆ: ಪ್ರದೀಪ್ ಕುಮಾರ್ ಡಿಎಂ
ಭರತ ಲದ್ದಿಯವರ | ಈಶ್ವರಯ್ಯ ಪ್ರ ಮಠಪತಿ | ಗಿರಿಧರ್ ಖಾಸನೀಸ್ | ಮಹಾದೇವ ಅಳ್ಳಣ್ಣವರ | ಮಲ್ಲಿಕಸಾಬ ನಧಾಪ್ | ಪ್ರದೀಪ್ ಕುಮಾರ್ ಡಿಎಂ | ರುದ್ರಗೌಡ ಎಲ್ ಇಂಡಿ | ಸಂತೋಷ ಪತ್ತಾರ | ವಾಮನ್ ಪೈ | ವೇಣುಗೋಪಾಲ ಎಚ್ ಎಸ್ | ವಿನ್ಯಾಸ ಕಾಟೇನಹಳ್ಳಿ
9 – 10 ಸೆಪ್ಟೆಂಬರ್. 2023. (11 am – 6 pm)
ಕಲಾವಿದರ ಭೇಟಿ: ಎರಡೂ ದಿನ ಸಂಜೆ 4 ಗಂಟೆಗೆ.
ಮೀತಾ ಜೈನ್ ಆರ್ಕಿಟೆಕ್ಟ್ಸ್
ನಂ. 6, 2ನೇ ಅಡ್ಡ ರಸ್ತೆ, ಎಂ.ಆರ್. ಗಾರ್ಡನ್, ಕೆಇಬಿ ಲೇಔಟ್ 1ನೇ ಹಂತ, (ರಂಗಾಭರಣ ಕಲಾಕೇಂದ್ರದ ಸಮೀಪ) ಸಂಜಯನಗರ, ಬೆಂಗಳೂರು 560094.
ಸಂಪರ್ಕಕ್ಕೆ: 94482 57518 (ಗಿರಿಧರ್)

‘ಒಂದು ಕಾಲದಲ್ಲಿ ಅಂಚೆ ಕಾರ್ಡ್ಗಳು ಕಲಾಕೃತಿಗಳಾಗಿದ್ದವು.’
– ಒಮರ್ ಖಾನ್, ಖ್ಯಾತ ಇತಿಹಾಸಕಾರರು
ಭಾರತೀಯ ಅಂಚೆ ಕಾರ್ಡ್ ಸುದೀರ್ಘ ಇತಿಹಾಸವನ್ನು ಹೊಂದಿದೆ. ಮೊದಲ ಬಾರಿಗೆ ಜುಲೈ 1879 ರಲ್ಲಿ ಭಾರತೀಯ ಅಂಚೆ ಕಛೇರಿಯಿಂದ ಅದನ್ನು ಪರಿಚಯಿಸಲಾಯಿತು, ನಂತರ ಕಾಲಾಣೆ ಮೊತ್ತದ ಪೋಸ್ಟ್ ಕಾರ್ಡ್- ಅನ್ನು ಬ್ರಿಟಿಷ್ ಭಾರತದ ವಿಶಾಲವಾದ ಭೌಗೋಳಿಕತೆಯಾದ್ಯಂತ ಎಲ್ಲಿ ಬೇಕಾದರೂ ತಲುಪಿಸಲು ಸಾಧ್ಯವಾಯಿತು.
ಸಮಯ ಕಳೆದಂತೆ ಪೋಸ್ಟ್ಕಾರ್ಡ್ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಳ್ಳುವುದರ ಜೊತೆಗೆ ಹೊಸ ಮತ್ತು ಉದಯೋನ್ಮುಖ ಸಂದರ್ಭಗಳ ಅನುಗುಣವಾಗಿ ಬದಲಾವಣೆಗಳನ್ನೂ ಅಂಗೀಕರಿಸಿತು. ಉದಾಹರಣೆಗೆ ಚಿತ್ರ ಪೋಸ್ಟ್ಕಾರ್ಡ್ (picture postcards) ಗಳು ಹೊರಬಂದಾಗ ಅವು ಜನರನ್ನು ಬಹುವಾಗಿ ಆಕರ್ಷಿಸಿತು.
ತನ್ನ ಸರಳ ರೂಪದಲ್ಲಿ ಪೋಸ್ಟ್ಕಾರ್ಡ್ ಕಲಾವಿದರಿಗೆ ಕಲಾಕೃತಿಗಳನ್ನು ರಚಿಸಲು ಒಂದು ಅಗ್ಗ ಹಾಗೂ ಆಕರ್ಷಕ ಮಾಧ್ಯಮವಾಯಿತು. ಆಧುನಿಕ ಭಾರತೀಯ ಕಲೆಯ ಪ್ರವರ್ತಕರಲ್ಲಿ ಒಬ್ಬರಾದ ನಂದಲಾಲ್ ಬೋಸ್ (1882-1966) ಈ ಸಂಪ್ರದಾಯವನ್ನು ಪ್ರಾರಂಭಿಸಿದರು ಎನ್ನಲಾಗುತ್ತದೆ. ಪೋಸ್ಟ್ಕಾರ್ಡ್ಗಳಲ್ಲಿ ಕಲೆಯನ್ನು ರಚಿಸಿದ್ದು ಮಾತ್ರವಲ್ಲದೆ ನಂದಲಾಲರು ಸಹ ಕಲಾವಿದರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಅದೇ ರೀತಿ ಮಾಡಲು ಪ್ರೇರೇಪಿಸಿದರು ಕೂಡ.
ಇಂದು ವಿನಮ್ರ ಪೋಸ್ಟ್ಕಾರ್ಡ್ ಬಹುತೇಕ ಕಣ್ಮರೆಯಾಗಿದೆ; ಡಿಜಿಟಲ್/ಎಲೆಕ್ಟ್ರಾನಿಕ್ ಮಾಧ್ಯಮಗಳು ನಮ್ಮ ಸಂವಹನ ಪರಿಸರವನ್ನು ಆಕ್ರಮಿಸಿಕೊಂಡಿವೆ.
ಈ ಪ್ರದರ್ಶನವು ಇಂದು ಅಸ್ತಿತ್ವದಲ್ಲಿರುವ ಸಾಧಾರಣ ಪೋಸ್ಟ್ಕಾರ್ಡ್ಗೆ ಗೌರವ ಸಲ್ಲಿಸುತ್ತದೆ. ‘ಪೋಸ್ಟ್ಕಾರ್ಡ್ಗಳು ಆ ಕಾಲದ ಇನ್ಸ್ಟಾಗ್ರಾಮ್ ಆಗಿದ್ದವು’ ಎಂದು ಪ್ರೊ.ಖಾನ್ ಹೇಳುತ್ತಾರೆ. ಪ್ರಸ್ತುತ ಸಮಯದಲ್ಲೂ ಪೋಸ್ಟ್ಕಾರ್ಡ್ಗಳು ಸೃಜನಾತ್ಮಕ ಕಲಾಕೃತಿಗಳಾಗಲು ಸಾಧ್ಯ ಎಂದು ಈ ಪ್ರದರ್ಶನದಲ್ಲಿನ ಕಲಾವಿದರು ತೋರಿಸಿಕೊಟ್ಟಿದ್ದಾರೆ.
-ಗಿರಿಧರ್ ಖಾಸನೀಸ್






0 Comments