ಬಿ ಎಂ ಬಶೀರ್
ವ್ಯಂಗ್ಯಚಿತ್ರ ಎಂದರೆ ಖಾಲಿ ಜಾಗ ತುಂಬಿಸುದು ಎಂದು ನಂಬಿದ್ದ ಸಂಪಾದಕರು ಒಂದು ಕಾಲದಲ್ಲಿ ಇದ್ದರು. ಅವರಿಗೆಲ್ಲ ಉತ್ತರಿಸುವಂತೆ ಪ್ರತಿಭಾವಂತ ವ್ಯಂಗ್ಯಚಿತ್ರ ಕಾರರು ಕನ್ನಡದಲ್ಲಿ ಹುಟ್ಟಿದರು. ಪಿ. ಮಹಮ್ಮದ್ ಕಾರ್ಟೂನ್ ಇಲ್ಲ ಎಂದು ಪ್ರಜಾವಾಣಿ ಬಿಟ್ಟವರನ್ನು ನಾನು ನೋಡಿದ್ದೇನೆ.

ಇದೀಗ ಕನ್ನಡದಲ್ಲಿ ತನ್ನ ಭಿನ್ನ ರೇಖೆ ಮತ್ತು ಪನ್ ಗಳ ಮೂಲಕ ನನಗೆ ಇಷ್ಟವಾಗುತ್ತಿರುವ ಕಾರ್ಟುನಿಸ್ಟ್ ದಿನೇಶ್ ಕುಕ್ಕುಜಡ್ಕ. ಒಂದು ಪದವನ್ನು ಎರಡಾಗಿ ಒಡೆದು ಎದೆ ಮುಟ್ಟುವಂತೆ ವ್ಯಂಗ್ಯವಾಡುವ ಅವರ ರೇಖೆಗಳು ನನಗೆ ತುಂಬಾ ಇಷ್ಟ. ಒಂದು ವ್ಯಂಗ್ಯ ಚಿತ್ರ ಬರೆದು ಅದಕ್ಕೆ ಐದಾರು ವಾಕ್ಯಗಳ ಹೇಳಿಕೆ ಕೊಟ್ಟು ನಗಿಸಲು ತಿಣುಕುವ ವಾಚಾಳಿ ಕಾರ್ಟೂನ್ನಿಸ್ಟರನ್ನು ನೋಡಿದ್ದೇನೆ. ಅವರ ನಡುವೆ ಪದಗಳನ್ನು ದುಂದು ವೆಚ್ಚ ಮಾಡದೆ ಬರೆ ರೇಖೆಗಳಿಗೆ ನಿಷ್ಠರಾದ ಕುಕ್ಕುಜಡ್ಕ ನಿಜಕ್ಕೂ ಅಪ್ಪಟ ಕಾರ್ಟೂನ್ ಪ್ರತಿಭೆ. ಅವರು ಈ ಕ್ಷೇತ್ರದಲ್ಲಿ ಇನ್ನಷ್ಟು ಬೆಳೆಯಲಿ.







houdu.nijakkoo appata pratibhe.abhinanadanegalu dinesh…-smitha
ಈ ನಾಡಿನ ಪ್ರತಿಭಾವಂತ ವ್ಯಂಗ್ಯಚಿತ್ರಕಾರ ದಿನೇಶ್ ಕುಕ್ಕುಜಡ್ಕ ಅವರಿಗೆ ಸಲಾಂ . ಕತೆ,ಕವಿತೆಗಳಿಗೂ ಜೀವಂತ ರೇಖೆಗಳನ್ನು ಎಳೆಯಬಲ್ಲ ಅವರ ಪ್ರತಿಭೆಯನ್ನು ನಾಡಿನ ವಿವಿಧ ಪತ್ರಿಕೆಗಳು ಬಳಸಿಕೊಳ್ಳುವಂತಾಗಲಿ .
shubhvaagali.
Yes, Dinesh is undoubtedly a very sharp cartoonist with deep insights.He is top class. I wish him more and more precision in future.