ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪತ್ರಕರ್ತೆಯರ ಸಂಘದ ಉಪನ್ಯಾಸ: ಫೋಟೋ ಆಲ್ಬಂ..

ಸಮಾಜಕ್ಕೆ ಕನ್ನಡಿ ಬೇಕು. ಆಗ ಮಾತ್ರವೇ ವ್ಯಕ್ತಿಯ, ಸರ್ಕಾರದ, ಸಮಾಜದ ಹುಳುಕುಗಳು ಕಾಣುವುದು. ಹಾಗಾಗಿ ಮಾಧ್ಯಮ ಕನ್ನಡಿಯಂತೆ ಕೆಲಸ ಮಾಡಲಿ ಯಾವುದೇ ಒತ್ತಡ ಬಂದರೂ ಹಿಂದೆ ಸರಿಯದಿರಲಿ ಎಂದು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಾದ ಬಿ ಎನ್ ಕೃಷ್ಣ ಅವರು ಅಭಿಪ್ರಾಯಪಟ್ಟರು

ಕರ್ನಾಟಕ ಪತ್ರಕರ್ತೆಯರ ಸಂಘ ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಹಮ್ಮಿಕೊಂಡಿದ್ದ ನಾಗಮಣಿ ಎಸ್ ರಾವ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಅಭಿವ್ಯಕ್ತಿ ಸ್ವಾತಂತ್ರ್ಯ: ಮಾಧ್ಯಮ ಮತ್ತು ನ್ಯಾಯಾಂಗ’ ಕುರಿತು ಮಾತನಾಡಿದರು.

ಹಿರಿಯ ಪತ್ರಕರ್ತರಾದ ಡಾ ವಿಜಯಾ ಹಾಗೂ ನಾಗಮಣಿ ಎಸ್ ರಾವ್ ಅವರು ಬಿ ಎನ್ ಕೃಷ್ಣ ಅವರನ್ನು ಸಂಘದ ಪರವಾಗಿ ಸನ್ಮಾನಿಸಿದರು.

ಸಂಘದ ಅಧ್ಯಕ್ಷರಾದ ಪದ್ಮಾ ಶಿವಮೊಗ್ಗ, ಕಾರ್ಯದರ್ಶಿ ಮಂಜುಶ್ರೀ ಎಂ ಕಡಕೋಳ ಉಪಸ್ಥಿತರಿದ್ದರು. ಚೇತನಾ ಬೆಳಗೆರೆ ಸ್ವಾಗತಿಸಿದರು. ಡಿ ಯಶೋದಾ ಕಾರ್ಯಕ್ರಮವನ್ನು ನಿರ್ವಹಿಸಿದರು.

ಸಂಘದ ನಿಕಟಪೂರ್ವ ಅಧ್ಯಕ್ಷರಾದ ಶಾಂತಲಾ ಧರ್ಮರಾಜ್ ಹಾಗೂ ಕಾರ್ಯದರ್ಶಿ ಮಾಲತಿ ಭಟ್ ಉಪಸ್ಥಿತರಿದ್ದರು.

ಸಭೆಯಲ್ಲಿ ಸಂಘದ ಪದಾದಧಿಕಾರಿಗಳಾದ ವಾಣಿಶ್ರೀ ಜೆ ಎಂ, ಗೊರೂರು ಪಂಕಜ, ಹಲೀಮತ್ ಸಾದಿಯಾ, ಶ್ರೀಜಾ ವಿ ಎನ್ ಉಪಸ್ಥಿತರಿದ್ದರು.

‍ಲೇಖಕರು avadhi

8 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading