
ಬಿ. ಎಸ್ . ವೆಂಕಟಲಕ್ಷ್ಮಿಯವರು ೧೯೪೬ ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.
ಬಿ.ಎ. ಡಿಗ್ರಿ ಮತ್ತು ಭಾರತೀಯ ವಿದ್ಯಾಭವನ ದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಕರ್ನಾಟಕ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಅಧಿಕಾರಿಯಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಇಚ್ಚಾ ನಿವೃತ್ತಿ ಪಡೆದುಕೊಂಡು ತನ್ನ ಬಹುದಿನಗಳ ಪತ್ರಿಕೋದ್ಯಮಕ್ಕೆ ಧುಮುಕುವ ಕನಸನ್ನು ನನಸಾಗಿಸಲು ‘ಚರ್ಚೆಗೊಂದು ಚಾವಡಿ ‘ ಎಂಬ ನಾಲ್ಕು ಪುಟಗಳ ಮಾಸಿಕವನ್ನು೨೦೦೦ನೇ ಇಸವಿಯಲ್ಲಿ ಪ್ರಕಟಿಸಲಾರಂಭಿಸಿ ಹತ್ತು ವರ್ಷಗಳ ಕಾಲ (ಕಾಲವಾಗುವ ತನಕ) ನಡೆಸಿದರು.
ಹಲವಾರು ಪತ್ರಿಕೆಗಳಲ್ಲಿ ಹಲವು ದಶಕಗಳ ಕಾಲ ಅವರ ಬರಹಗಳು ಪ್ರಕಟಗೊಂಡಿವೆ. ‘ಮಯೂರ’ ಮಾಸಪತ್ರಿಕೆಯಲ್ಲಿ ಪ್ರಕಟವಾದ ‘ಪತ್ನಿಯರು ಕಂಡಂತೆ ಪ್ರಸಿದ್ಧರು’ ಎಂಬ ಸಂದರ್ಶನಗಳನ್ನಾಧರಿಸಿದ ಲೇಖನ ಸರಣಿ ಜನಮನ್ನಣೆ ಪಡೆದಿತ್ತು.
ಅವರ ಪ್ರಕಟಿತ ಪುಸ್ತಕಗಳು:
‘ಕನ್ನಡ ಲೇಖಕಿಯರ ನೆಲೆ ಬೆಲೆ ‘(An assessment of literary works of women writers in Kannada),
‘ಬದುಕು ಬವಣೆ ಭರವಸೆ – ಮಹಿಳಾ ಜಗತ್ತಿನ ಅನಾವರಣ ‘ (A comprehensive and an analytical book on Women’),
‘ಸಂಗೀತ ಸಾಮ್ರಾಟ್ ಮಲ್ಲಿಕಾರ್ಜುನ ಮನ್ಸೂರ ‘(A biographical sketch of a distinguished Hindustani vocalist),
‘ ಎಂ. ಬಿ. ಪಾಟೀಲ ‘(A Biography).
ಅವರ ಪುಸ್ತಕ ‘ ‘ಬದುಕು ಬವಣೆ ಭರವಸೆ ‘ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೯೪ರಲ್ಲಿ ದೊರೆತಿದೆ .
ಅವರು ಎಲ್ಲಾ ಬಗೆಯ ಲಲಿತ ಕಲೆಗಳಲ್ಲಿ ಆಸಕ್ತಿಹೊಂದಿದ್ದರು. ಕರ್ನಾಟಕ ಮತ್ತು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಳೆರಡರಲ್ಲೂ ಅಭಿರುಚಿ ಹೊಂದಿದ್ದರು. ಚಿತ್ರಕಲೆಯನ್ನು ಅಭ್ಯಸಿಸಿ ಹಲವು ವರ್ಣಚಿತ್ರಗಳನ್ನು ರಚಿಸಿದ್ದರು .
ಕನ್ನಡದಲ್ಲಿ ೯೦ರಿಂದೀಚೆಗೆ ಮಹಿಳಾವಾದ ಒಂದು ನಿರ್ದಿಷ್ಟ ಆವರಣವಾಗಿ ರೂಪುಗೊಳ್ಳುವ ಮುಂಚೆಯೇ ೮೦ರ ದಶಕದಲ್ಲೇ ಈ ನಿಟ್ಟಿನಲ್ಲಿ ಅತ್ಯಂತ ತೀವ್ರವಾಗಿ, ಪುರೋಗಾಮಿಯಾಗಿ ಚಿಂತಿಸಿದವರು ಬಿ.ಎಸ್. ವೆಂಕಟಲಕ್ಷ್ಮಿ.
ವೆಂಕಟಲಕ್ಷ್ಮಿಯವರು ೨೦೦೯ ರಲ್ಲಿ ನಿಧನರಾದರು .






0 Comments