ಪಂಪ ಬೆಳ್ಳುಳ್ಳಿ ತಿಂದಿದ್ದನಾ?

garlic.jpgಹೆರಡೋಟಸನ ಪ್ರಕಾರ ಪ್ರಾಚೀನ ಈಜಿಪ್ಟಿನಲ್ಲಿ ಬೆಳ್ಳುಳ್ಳಿ ಯಥೇಚ್ಛವಾಗಿ ಉಪಯೋಗದಲ್ಲಿತ್ತು. ಅಲ್ಲಿಯೇ ಕೃಷಿಯಾಗುತ್ತಿತ್ತು. ತೌರೂರಾದ ಮಧ್ಯ ಏಷಿಯಾದಿಂದ ಈಜಿಪ್ಟಿಗೆ ರವಾನೆಯಾಗಿದ್ದಿರಬೇಕು.

ತೌರೂರಿನಲ್ಲಿ ಬೆಳ್ಳುಳ್ಳಿಯ ಹೆಸರು ಶುಮಿನ್, ಶಮ್. ಸಂಸ್ಕೃತದ ಲಶುನ ಇದೇ ಬುಡಕಟ್ಟಿಗೆ ಸೇರಿದ ಪದ. ಈ ಪದದ ರೂಪಾಂತರಗಳೇ ಉತ್ತರ ಭಾರತದ ಭಾಷೆಗಳಲ್ಲೆಲ್ಲ ಪ್ರಚಾರದಲ್ಲಿವೆ. ದ್ರಾವಿಡ ಭಾಷೆಗಳಲ್ಲಿ ವೆಳ್ಳುಳ್ಳಿ, ಬೆಳ್ಳುಳ್ಳಿ, ಬೊಳ್ಳುಳ್ಳಿ ಮೊದಲಾದ ಹೆಸರುಗಳು ಚಲಾವಣೆಯಲ್ಲಿವೆ. ಇವು ಬಿಳಿಯ+ಉಳ್ಳಿ (=ಗಡ್ಡೆ) ಎಂಬ ಸಂಯೋಜನೆಯಿಂದ ಉಂಟಾದ ಪದಗಳಂತೆ ಕಾಣುತ್ತವೆ.

bgl_swamy.jpg“ಪಂಪ ಬೆಳ್ಳುಳ್ಳಿಯನ್ನು ತಿಂದಿದ್ದನೋ ಇಲ್ಲವೋ ಹೇಳುವುದು ಸಾಧ್ಯವಿಲ್ಲ. ಅದರ ದುರ್ನಾತವನ್ನಂತೂ ಅರಿತಿದ್ದ. ಹಳೆಯ ಮುಗ್ಗಿದ ಬೇವಿನ ಎಣ್ಣೆಯಲ್ಲಿ ಅದ್ದಿದ ಬೆಳ್ಳುಳ್ಳಿಯನ್ನು ಕೆಂಡದ ಮೇಲೆ ಎಸೆದರೆ ಹೊಮ್ಮುವ ನರಕ ವಾಸನೆಯನ್ನು ರಣರಂಗದಲ್ಲಿ ಕೊಳೆತು ನಾರುತ್ತಿದ್ದ ಹೆಣದ ವಾಸನೆಗೆ ಒಪ್ಪವಿಟ್ಟಿದ್ದಾನೆ. ಕೊಳೆತು ನಾರುವ ಹೆಣದ ದುರ್ನಾತಕ್ಕೆ ಬೇರೆ ಹೋಲಿಕೆಯೇ ಇಲ್ಲ ಎನ್ನಲಿಲ್ಲ, ಪಂಪ. ಆ ನಾತಕ್ಕಿಂತಲೂ ಕಟುವಾದ ದುರ್ನಾತದ ಹೊಗೆಯೆಬ್ಬಿಸಿದ್ದಾನೆ.”

ಬಿ.ಜಿ.ಎಲ್. ಸ್ವಾಮಿಯವರು ತಮ್ಮ “ಸಸ್ಯ ಪುರಾಣ”ದಲ್ಲಿ ಬೆಳ್ಳುಳ್ಳಿ ಬಗ್ಗೆ ಬರೆದದ್ದು ಇದು.

‍ಲೇಖಕರು avadhi

June 29, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. S.R.Vijayshankar

    Quoting from B.G.L.Swamy is interesting. I had the great opportunity of spending time with him in 1979 and 1980.(There is a penpicture of BGL Swamy written by me in the book on him)
    However, to come back to Pampa… he (Pampa) mentions several other etables in his book Vikramarjuna Vijayam.There is a detail explanation of Arjuna visiting locations of prostitutes. In that section there are are explanations of various types of liquors and various types of eatables which go well with drinking. Those who are interested could even look for the prose version of Pampa made by Professor L. Basavaraju, one of the great pieces in Kannada.Reading Pampa along with Professor Basavaraju will make it easy to follow.
    Regards
    S.R.Vijayshankar

    ಪ್ರತಿಕ್ರಿಯೆ
  2. ಸುಪ್ತದೀಪ್ತಿ

    ಸುಂದರ ಅವಧಿ,
    ಬೆಳ್ಳುಳ್ಳಿಯ ಬಗ್ಗೆ ಬರೆದಿದ್ದು, ಅಪರೂಪದ ಇತಿಹಾಸ ಕೊಟ್ಟಿದ್ದು ಸಂತೋಷ.
    ಇತ್ತೀಚೆಗೆ ಒಂದು ಸಂಶೋಧನೆ ಬೆಳ್ಳುಳ್ಳಿಯ “ಹೃದಯಕ್ಕೆ ಹತ್ತಿರವಾಗಿದ್ದ” ಸ್ಥಾನವನ್ನು ಸ್ವಲ್ಪ ಬೀಳಿಸಿದೆ. ಬೆಳ್ಳುಳ್ಳಿಯಿಂದ ಕೊಲೆಸ್ಟೆರೋಲ್ ಕಡಿಮೆಯಾಗುವುದಿಲ್ಲ ಎಂಬುದಾಗಿ ಸಂಶೋಧನೆ ಮಾಡಿದ್ದೇವೆ ಎಂದಿದೆ ಯಾವುದೋ ಒಂದು ಸಂಸ್ಥೆ (ಹೆಸರು ಮರೆತು ಹೋಯಿತು, ಅಮೆರಿಕಾದಲ್ಲಿ ಅನ್ನುವುದು ಮಾತ್ರ ನೆನಪಿದೆ). ಸಾವಿರಾರು ವರ್ಷಗಳಿಂದ ಬೆಳ್ಳುಳ್ಳಿಯನ್ನು ಆರೋಗ್ಯಕ್ಕಾಗಿ ಬಳಸುತ್ತಿದ್ದ ಹಲವಾರು ಜನಾಂಗವೇ ಈಗ ‘ಸುಳ್ಳಾಡಿತ್ತು’ ಅಥವಾ ‘ನಂಬಿಕೆಯ ಮೇಲಷ್ಟೇ ಕೆಲಸ ಮಾಡಿತ್ತು’ ಅನಿಸಿಬಿಟ್ಟಿದೆ. ನೀವೇನಂತೀರ?

    ಬಿ.ಜಿ.ಎಲ್.ಸ್ವಾಮಿಯವರ ‘ದೌರ್ಗಂಧಿಕಾಪಹರಣ’ ಓದಿದ್ದೀರಾ? ಅದರ ಬಗ್ಗೆಯೂ ಬರೆಯಿರಿ…

    ಪ್ರತಿಕ್ರಿಯೆ
  3. S.K.Shama Sundara

    ನಮಸ್ಕಾರ,

    ಪಂಪ ಬೆಳ್ಳುಳ್ಳಿ ಕಲ್ಪನೆಯೇ ರೋಚಕ. ಬಿಜಿಎಲ್‌ ಬರವಣಿಗೆಯ ಪರಿಮಳ ಅಷ್ಟೊಂದು ಆಹ್ಲಾದಕರ.
    ನಿಮ್ಮ ಸಾಲುಗಳನ್ನು ಓದಿ ನಾವು ಇಂದು “ಯೋಜನ ಗಂಧಿನಿ, ಆರೋಗ್ಯ ವರ್ಧಿನಿ“ಗೆ ಇನ್ನಷ್ಟು
    ಪ್ರಚಾರ ಕೊಟ್ಟೆವು.

    ಬೆಳ್ಳುಳ್ಳಿ ರೈತರಿಗೆ ಒಳ್ಳೊಳ್ಳೆ ಬೆಳೆ ಸಿಗಲಿ. ಜೊತೆಗೆ ನಮ್ಮಗಳ ವಾತ ಹರಣವೂ ಆಗಲಿ.
    ಶಾಮ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: