ನೋವಿಗದ್ದಿದ ನಾಲ್ಕು ಕವಿತೆಗಳು

12400970_963139603770776_884877344830618477_n

ಯಾವುದೋ ಅನಾದಿ ನೋವೊಂದು ಜಾಗ ಬದಲಾಯಿಸುತ್ತಿದೆ
ಅನಂತ ಗಾಯಗಳು ಮೈಮುರಿಯುತ್ತಿವೆ ಒಡಲಾಳದಲ್ಲಿ
ಏಕೆ ಹೀಗೆ ಎಂದು ಯಾರನ್ನೂ ಕೇಳಬಾರದು
ನೀಲ ನಕ್ಷತ್ರವೇ
ನಿನಗಾಗಿ ಸಾವಿರ ಕಣ್ಣಿನ ಅಸಂಖ್ಯ ನವಿಲ ರಕ್ತಗಂಬನಿ
ಸತ್ಯವ ಹೇಳುತ್ತೇವೆ ಶಕ್ತಿಯ ಎದುರೇ
ಏಕಲವ್ಯನ ಹೆಬ್ಬೆರಳು ತುಂಡರಿಸಿದವರೇ ಇಂದು ನಿನ್ನ ಕತ್ತು ಹಿಸುಕಿದರು
ನಮ್ಮ ನಾಳೆಗಳಲ್ಲಿ
ನಕ್ಷತ್ರಗಳು ನೆಲದ ಮೇಲೂ ಉರಿಯುತ್ತವೆ
ಬೆಳಕಿಗೆ, ಬವಣೆಗೆ, ಎಲ್ಲದಕ್ಕೂ
ಸುಮ್ಮನಿರುವ ಮಾತೇ ಇಲ್ಲ

-ವೀರಣ್ಣ ಮಡಿವಾಳರ 

12400970_963139603770776_884877344830618477_n

ನೀನು ನಕ್ಷತ್ರಗಳನ್ನು ಪ್ರೀತಿಸುವುದೇ
ನಿಜವಾಗಿದ್ದರೆ
ಅವುಗಳನ್ನು ಇಲ್ಲಿಂದಲೂ ಪ್ರೀತಿಸಬಹುದಿತ್ತು
ಅವುಗಳೆಡೆಗೆ ಹೋಗುವ ಅಗತ್ಯವಿರಲಿಲ್ಲ

-ಕು ಸ ಮಧುಸೂಧನ್ 

12400970_963139603770776_884877344830618477_n

ಇವು ಪದಗಳಲ್ಲ..
ಈ ಸಮಾಜದೆದರು,
ನಮ್ಮೆಲ್ಲರ ಬೊಗಸೆಗೆ..
ಈ ಹುಡುಗ
ಇಟ್ಟು ಹೋಗಿರುವ
ಕೆಂಡದಂಥಹ
ಸುಡುವ ಪ್ರಶ್ನೆಗಳು..

-ಟಿ ಕೆ ದಯಾನಂದ್ 

12400970_963139603770776_884877344830618477_n

 

ನಮ್ಮ ನಾಳೆಗಳಲ್ಲಿ

ನಕ್ಷತ್ರಗಳು ನೆಲದ ಮೇಲೂ

ಉರಿಯುತ್ತವೆ – ಉರಿಯಲಿ ಬಿಡಿ ,

ಅವುಗಳನ್ನೇ ಬಳಸಿಕೊಂಡು

ಅಡುಗೆಮಾಡಿದರಾಯ್ತು,

ಬದುಕಿನಲ್ಲಿ ಆಶಾವಾದಿತ್ವ ತುಂಬಿರಲಿ

-ಶಂಭುಲಿಂಗ ರಾಮಚಂದ್ರ ಚಿಗರಿ 

‍ಲೇಖಕರು Admin

January 19, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. M,S.Krishna Murthy

    ದುಃಖದಲ್ಲಿದ್ದಾಗಲೇ ಹೇಳಿಬಿಡಬೇಕು
    ಸುಡಿ ನಿಮ್ಮ ಜಾತಿಗಳನ್ನು
    ಧರ್ಮದ ಕಟ್ಟಳೆಗಳನ್ನು
    ಮನುಷ್ಯ ಮನುಷ್ಯನನ್ನು ದ್ವೇಶಿಸಿ ಕೊಲ್ಲುತ್ತಿರುವ
    ನಿಮ್ಮ ಸುಳ್ಳು ಆತ್ಮೋದ್ದರಾದ ಭೊಗಳೆ
    ಪವಿತ್ರ ಅಪವಿತ್ರ
    ಮೇಲು ಕೀಳಿನ
    ಜಾತಿ ಪದ್ದತಿ ಕಲ್ಮಶ ಮನಸ್ಸುಗಳನ್ನು
    ಇಲ್ಲವಾದಲ್ಲಿ ಈ ಸೃಷ್ಟಿಯಲ್ಲಿ
    ಉಳಿಯುವುದು
    ಕೇವಲ ಸಾಯಿಸುವ ಅಸ್ತ್ರಗಳು
    ಅಸ್ತಿಪಂಜರಗಳು
    ಕೃಷ್ಣ

    ಪ್ರತಿಕ್ರಿಯೆ
  2. ಪ್ರಗಾಥ ಮೋಹನ

    ನೀನು ನಕ್ಷತ್ರವಾಗಿಹೆ ಎಂದು
    ಕತ್ತಲಾಗುವುದನು ಕಾಯುತ್ತಿದ್ದೆ
    ನಾ ಇಲ್ಲಿಂದ..
    ನೀನು
    ನೊಂದುಕೊಂಡು ಉಸಿರ
    ಹಾಸಿದ ನೆಲದ ಮೇಲೆ
    ಬಿದ್ದುಕೊಂಡು
    ನಿನ್ನ ಹುಡುಕುತ್ತಿದ್ದೇನೆ
    ಕಣ್ಣಲಿ ತುಂಬಿದ ನೀರಿನಲಿ
    ಆದರೆ..
    ನಕ್ಷತ್ರಗಳೆಲ್ಲ ಮಂಜಾಗಿ ನೀ ಕಾಣದಾಗಿಹೆ
    ಹನಿ ಇಂಗಿ ಹೋದ ನೆಲದಲಿ
    ನಿನ್ನ ನೆನಪ ಹುದುಗಿಸಿದ್ದೇನೆ
    ಮುಂದೊಂದು ದಿನ ಬಿದ್ದ ಹನಿ
    ಗಂಟಲ ಸೇರಿ
    ಗ್ರಹ-ನಕ್ಷತ್ರಗಳೆನಿಸಿದವರ ಎದೆ
    ತಟ್ಟಬಹುದು ಎಂದು
    ನನ್ನ ಗೆಳೆಯರು ಹೀಗೆ ಮಾಡುತ್ತಿದ್ದಾರೆ
    ನೀ ಕೊರಳೊಡ್ಡಿ ಸಾವಿನನುಭವದ
    ಅನ್ನವಿಕ್ಕಿದ್ದಿ
    ಉಣ್ಣಲಾಗುತ್ತಿಲ್ಲ
    ಹನಿ ನೀರ ಹುಡುಕುತ್ತಾ
    ಕತ್ತಲಿಗೆ ಬಂದಿದ್ದೇನೆ
    ಕತ್ತಲು ಕಳೆದು
    ವಿಜ್ಞಾನ ಸೂರ್ಯ ಬರಲಿದ್ದಾನೆ
    ನಿನ್ನೆಲ್ಲ ನಕ್ಷತ್ರಗಳು
    ವಿಜ್ಞಾನ ಸೂರ್ಯರಲ್ಲವೇ…
    – ಪ್ರಗಾಥ ಮೋಹನ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: