ಒಂದು ಸುಂದರ ಪುಸ್ತಕ ಕನ್ನಡ ಲೋಕಕ್ಕೆ ಸಂದಿದೆ. ಕಥೆಗಾರ ಕೇಶವ ಮಳಗಿ ಈ ಪುಸ್ತಕವನ್ನು ಕೊಟ್ಟಿದ್ದಾರೆ. ಕಥೆಗಾರ ಕಂಡ ರೂಪಕ ಲೋಕದ ಕಥನ ಮಳಗಿ ಅವರ ಕೈಚಳಕದಲ್ಲಿ ‘ನೇರಳೆ ಮರ’ ವಾಗಿದೆ. ಇಡೀ ಪುಸ್ತಕ ನೇರಳೆ ಬಣ್ಣದಲ್ಲಿದೆ ಎಂಬುದು ಇದರ ಹೆಚ್ಚುಗಾರಿಕೆ. ಬಹುಶಃ ಕನ್ನಡದಲ್ಲಿ ಈ ರೀತಿಯ ಪ್ರಯತ್ನ ಇದೆ ಮೊದಲಿರಬೇಕು. ಮಳಗಿ ಅವರ ಅಚ್ಚುಕಟ್ಟುತನ ಈ ಪುಸ್ತಕ ರೂಪಿಸುವುದರಲ್ಲಿಯೂ ಎದ್ದು ಕಾಣುತ್ತದೆ.
ಕಥನ ಪ್ರಕಾಶನದ ಪ್ರಕಾರ- ಎಂಬತ್ತರ ದಶಕದಲ್ಲಿ ಬರೆಯಲಾರಂಬಿಸಿದ ಲೇಖಕರಲ್ಲಿ ಕೇಶವ ಮಳಗಿ ಅವರದು ವಿಭಿನ್ನ ಕಥನ ಮಾರ್ಗ. ಬಿಜಾಪುರ, ಬಾಗಲುಕೋಟೆ, ಕಲಬುರ್ಗಿ, ಬಳ್ಳಾರಿ ಜಿಲ್ಲೆಗಳ ಭಾಷೆ: ಸಂಸ್ಕೃತಿಗಳ ಬನಿಯನ್ನು ತಮ್ಮ ಬರಹದಲ್ಲಿ ಹಿಡಿದಿಡಲು ಯತ್ನಿಸಿದ್ದಾರೆ. ಹೊಸ ಬಗೆಯ ಅಭಿವ್ಯಕ್ತಿ ಶೈಲಿ, ವಸ್ತು ಹಾಗೂ ನಿರೂಪಣೆಯಿಂದಾಗಿ ಮಳಗಿ ಅವರ ಕಥನ ಗಮನಾರ್ಹ ಎಂದು ವಿಮರ್ಶಕರು ಗುರುತಿಸುತ್ತಾರೆ.
ಕಡಲ ತೆರೆಗೆ ದಂಡೆ, ಮಾಗಿ ಮೂವತ್ತೈದು, ವೆನ್ನೆಲ ದೊರಸಾನಿ ಇವರ ಕಥಾ ಸಂಕಲನಗಳು. ಕುಂಕುಮ ಭೂಮಿ ಹಾಗೂ ಅಂಗದಧರೆ ಕಾದಂಬರಿಗಳು.
ಇವರ ಕಥೆಗಳು ಕಲ್ಬುರ್ಗಿ ವಿಶ್ವವಿದ್ಯಾಲಯದ ಚಿನ್ನದ ಪದಕ, ಪಾ ವೆಂ ಕಥಾ ಪುರಸ್ಕಾರ, ಕನ್ನಡ ಪ್ರಭ, ಲಂಕೇಶ್ ಪತ್ರಿಕೆ ನಡೆಸಿದ ಕಥಾ ಸ್ಪರ್ಧೆಗಳಲ್ಲಿ ಬಹುಮಾನ, ಸಾಹಿತ್ಯ ಅಕಾಡೆಮಿಯ ಮನ್ನಣೆ ಪಡೆದಿವೆ.
ಮಳಗಿ ನ್ಯಾಷನಲ್ ಬುಕ್ ಟ್ರಸ್ಟ್ ಗಾಗಿ ‘ಸ್ವಾತಂತ್ರ್ಯೋತ್ತರ ಕನ್ನಡ ಕಥೆಗಳು’ ಸಂಕಲನವನ್ನು ಸಂಪಾದಿಸಿದ್ದಾರೆ.
ಪುಸ್ತಕಕ್ಕಾಗಿ:
ಕಥನ
೧೫, ೭ನೆ ಬಿ ಅಡ್ಡರಸ್ತೆ, ಗಾರ್ಡನ್ ವಿಲ್ಲಾಸ್, ನಾಗರಭಾವಿ, ಬೆಂಗಳೂರು-೫೬೦೦೭೨
ದೂರವಾಣಿ: ೦೮೦-೨೩೨೧೮೧೧೮ ಮೊಬೈಲ್: ೯೪೪೮೩ ೩೪೬೨೨






0 Comments