ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ನೆರೆಮನೆಯವನು’

-ಎ ಎಸ್ ಅಶೋಕ

ಪಕ್ಕದ ಮನೆ ತುಂಬಾ ದಿನಗಳಿಂದ ಕಾಲಿ ಇತ್ತು . ಇಂದೇನೋ ಅಲ್ಲಿ ಗೇಟಿನ ಕೀರಲು ಶಬ್ದ ಕೇಳಿದ ಹಾಗಾಯ್ತು. ಮೆಲ್ಲಗೆ ಕಿಟಕಿಯಿಂದ ಇಣುಕಿ ನೋಡಿದೆ. ಲಿಯೋ ಪ್ಯಾಕರ್ಸ್ & ಮುವರ್ಸ್ ಎಂಬ ತಲೆ ಬರಹ ಹೊತ್ತಿದ್ದ ಲಾರಿಯೊಂದು ಮನೆಯ ಮುಂದೆ ನಿಂತಿತ್ತು. ಯುನಿಫಾರ್ಮ್ ತೊಟ್ಟ ಕೆಲಸಗಾರರಿಬ್ಬರು ನಾಜೂಕಾಗಿ ಮನೆ ಸಾಮಾನುಗಳನ್ನು ಇಳಿಸಿ ಮನೆಯೊಳಗೆ ಸಾಗಿಸ್ತಿದ್ರು. ಹೊಸತಾಗಿ ಬಂದ ಬಾಡಿಗೆದಾರನ ಸಂಸಾರವೂ ಜೊತೆಯಲ್ಲಿತ್ತು. ಅವರ ಡ್ರೆಸ್ ನೋಡಿದರೆ ಈ ಮಹಾ ನಗರದಲ್ಲಿ ಇಲ್ಲದ ಕಸರತ್ತು ಮಾಡಿ ದಿನ ದೂಡುವ  ಮದ್ಯಮ ವರ್ಗದ ಸಾವಿರಾರು ಜನರಿಗಿಂತ ಭಿನ್ನವೇನೂ ಇಲ್ಲ .ಅವನ ಹೆಂಡತಿಯ ಸೊಂಟದಲ್ಲಿ ಒಂದು ಸಣ್ಣ ಮಗು ಬೇರೆ! ಸರಿ ಇನ್ನು ರಾತ್ರಿ ನಿದ್ದೆಗೆ ಸಂಚಾಕಾರ ಬಂತು ಅಂದು ಕೊಂಡೆ. ಸರಿ, ಯಾರಾದರೆ ನನಗೇನು ?! ನನ್ನ ಮಟ್ಟದ ಜನಗಳಂತೂ ಇವರಲ್ಲ ಎಂದು ಕೊಂಡು ಕಿಟಕಿಯ ಪರದೆಯನ್ನೆಳೆದು TV ಆನ್ ಮಾಡಿದೆ.

ಹೀಗೆ ಒಂದೆರಡು ದಿನಗಳು ಉರುಳಿದವು .ಪಕ್ಕದ ಮನೆಯಿಂದ ಕೆಲವೊಮ್ಮೆ ಆ ಸಣ್ಣ ಮಗು ಅಳುತ್ತಿದ್ದ ಶಬ್ದ ಬಿಟ್ಟರೆ ಬೇರೇನೂ ಕೇಳಿಸುತ್ತಿರಲಿಲ್ಲ. ಅ ವ್ಯಕ್ತಿ ಮಾತ್ರ ಬೆಳಗ್ಗೆ ಬೈಕ್ ಏರಿ ಎಲ್ಲಿಗೋ ಹೋಗಿ ಸಂಜೆ ಹಿಂತುರುಗುತ್ತಿದ್ದ. ಅವನು ಬರುವ ಹೊತ್ತಿಗೆ ಸರಿಯಾಗಿ ಮಗುವನ್ನು ಸೊಂಟದಲ್ಲಿ ಸಿಕ್ಕಿಸಿಕೊಂಡು ಅವನ ಹೆಂಡತಿ ಗೇಟಿನ ಬಳಿ ದೊಡ್ಡ ಹಿರೋಯಿನ್ ತರ ಪೋಸ್ ಕೊಡುತ್ತಿದ್ದಳು. ಇವನೂ ನಗು ನಗುತ್ತಾ ಬೈಕ್ ನಿಲ್ಲಿಸಿ , ಸೈಡ್ ಬಾಕ್ಸಿಂದ ಕೆಲವು ಪೊಟ್ಟಣಗಳನ್ನು ತೆಗೆದುಕೊಂಡು ಅವಳನ್ನು ಕುರಿಯಂತೆ ಹಿಂಬಾಲಿಸುತ್ತಿದ್ದ. ಗಡಿಯಾರದ ಗುಲಾಮ ! ಶುದ್ದ ಅಮ್ಮಾವ್ರ ಗಂಡ ! ಅಂತ ನನ್ನ ಮನಸ್ಸು ಹೇಳಿತು.

ಈ ದಿನ ಬೆಳಗ್ಗೆ ಅದೇ ವ್ಯಕ್ತಿ ಗೇಟು ತೆರೆದು ನಮ್ಮ ಮನೆಗೆ ಬರುವುದು ಕಂಡಿತು. ನನ್ನನ್ನು ನೋಡಿ ಎರಡು ಕೈ ಜೋಡಿಸಿ ನಮಸ್ಕಾರ ಬೇರೆ. ತಿಂಗಳ ಕೊನೆಗೆ ಸಾಲ ಕೇಳಲು ಈಗಲೇ ಮಸ್ಕಾ ಹೊಡಿತಿದ್ದಾನೆ ಅಂದು ಕೊಂಡೆ. ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಸಿಗದಿದ್ದಾಗ ಗಲಿ ಬಿಲಿ ಅನಿಸಿದರೂ ತೋರಿಸಿಕೊಳ್ಳದೆ , ” ಸರ್ ನಿಮ್ಹತ್ರ ಸ್ಕ್ರೂ ಡ್ರೈವರ್ ಇದೆಯಾ? ” ಅಂದ.  ನಾನು, ಖಾರವಾಗಿ ಸ್ಕ್ರೂ ಡ್ರೈವರ್ ಇಟ್ಕೊಳಕ್ಕೆನಾನೇನು ಮೆಕಾನಿಕ್ ಅಂದ್ಕೊಂಡಿದೀರಾ ? ಅಂದೆ. ಅವನ ಮೊರೆ ಪೆಚ್ಚಾದ್ದು ನೋಡಿ ನನಗೆ ಕುಶಿ ಆಯ್ತು. ಆಗ ಆತ ಸಾವರಿಸಿಕೊಂಡು, “ಅಲ್ಲ ಸರ್, ಬೈಕಲ್ಲಿ ಸ್ವಲ್ಪ ಮೈನರ್ ಪ್ರಾಬ್ಲಮ್ ಇತ್ತು…. ನಿಮ್ಮಲ್ಲಿ ಕಾರ್ ಇದೆ…ಟೂಲ್ ಕಿಟ್ ಇರಬಹುದು ಅಂದ್ಕೊಂಡೆ” .ಅಂದ. ನನಗೇನೋ ವಿಜಯ ಸಾದಿಸಿದ ಗರ್ವ ಬಂತು ! ಅಲ್ಲರೀ ! ಟೂಲ್ ಕಿಟ್ ಇಟ್ಕೊಂಡು ಬಿಚ್ಕೊಂಡ್ ಕೂರಕ್ಕೆ ಅದೇನು ಹಳೆ ಬೈಕ್ ಅಂದ್ಕೊಂಡ್ರ? ! ಇಂಪೋರ್ಟೆಡ್ ಕಾರ್ ಕಂಡ್ರೀ ಅದು ! ಇಷ್ಟಾದ ಮೇಲೆ ಆತ ಇನ್ನೇನೂ ಮಾತಾಡಲಿಲ್ಲ. ಸುಮ್ಮಗೆ ಬೆನ್ನು ತಿರುಗಿಸಿ ಗೇಟು ಎಳೆದು ಕೊಂಡು ಹೋದ.  ನನಗೆ ಬಾಕ್ಸಿಂಗ್  ರಿಂಗ್ನಲ್ಲಿ ಎದುರಾಳಿಯನ್ನು ನಾಕೌಟ್  ಮಾಡಿದಷ್ಟು ಖುಷಿ  ಆಯ್ತು ! ಇನ್ನೆಂದೂ ಇವನ ಕಿರಿ ಕಿರಿ ಇರಲಾರದು ಅಂದು ಕೊಂಡೆ.

ಅಷ್ಟರಲ್ಲಿ ನನ್ನ ಮೊಬೈಲ್ ರಿಂಗಾಯ್ತು. ಯಾರು ನೋಡಿದ್ರೆ ರೆಡ್ಡಿ ! ಏನಯ್ಯ ಎಷ್ಟು ಹೊತ್ತು ಕಾಯೋದು ? ನಾನು ಕ್ಲಬ್ಬಿಗೆ ಬಂದು ಗಂಟೆ ಒಂದಾಯ್ತು. ರಮ್ಮಿ ಆಡಕ್ಕೆ ಕಂಪನಿ ಇಲ್ಲ. ಇಂಪೋರ್ಟೆಡ್ ವ್ಹಿಸ್ಕಿ ಆಗಲೇ 3 ಪೆಗ್ ಕಾಲಿಯಾಯ್ತು ಅಂತ ಒಂದೇ ಸಮನೆ ಒದರಿದ! ಬೇಗ ಕಾರ್ ಸ್ಟಾರ್ಟ್ ಮಾಡಿ ಕ್ಲಬ್ ಕಡೆಗೆ ಹೋದೆ. ರೆದ್ದಿಯೊಂದಿಗೆ ಒಂದೆರಡು ಪೆಗ್ ಇಳಿಸಿ , ಎರಡಾಟ ರಮ್ಮಿ ಆಡಿದ ಮೇಲೆ ದಿಡೀರನೆ Income ಟ್ಯಾಕ್ಸ್ ಬ್ಯಾಂಕಿನಲ್ಲಿ ಕಟ್ಟ ಬೇಕಾದ ವಿಷಯ ಜ್ಞಾಪಕ ಬಂತು ! ಇವತ್ತೇ ಕೊನೆ ದಿವಸ ಬೇರೆ. ಅಷ್ಟಲ್ಲದೇ ಫೋನ್ ಮಾಡಿ ಆಡಿಟರ್ ಎಚ್ಚರಿಸಿದ್ದರು. ಹಾಳು ಅಸಿಸ್ಟಂಟ್  ಬೇರೆ ರಜ ಹಾಕಿದ್ದ. ನಾನೇ ಹೋಗದೆ ಬೇರೆ ದಾರಿ ಇರಲಿಲ್ಲ! ಗಡಿಬಿದಿಯಿಂದೊಮ್ಮೆ ಗಡಿಯಾರ ನೋಡಿದೆ. ಬ್ಯಾಂಕಿನ ವ್ಯವಹಾರದ ಸಮಯ ಮುಗಿಯಲು ಕೇವಲ 10 ನಿಮಿಷಗಳು ಉಳಿದಿತ್ತು. ತರಾತುರಿಯಲ್ಲಿ ಇಸ್ಪೀಟು ಎಲೆಗಳನ್ನು ಟೇಬಲ್ ಮೇಲೆ ಕುಕ್ಕಿ ಎದ್ದೆ. ಸ್ಕೂಟ್ ಏನೋ ಅಂತ ಕೇಳುತ್ತಿದ್ದ ರೆಡ್ಡಿಗೆ ಏನನ್ನೂ ಹೇಳದೆ ಹೊರಗೋಡಿ ಕಾರ್ ಹತ್ತಿ ಒಂದೇ ಉಸುರಿಗೆ ಸ್ಟಾರ್ಟ್ ಮಾಡಿದೆ. ಗೇಟಿನ ಬಳಿ ಮಾಮೂಲಿಗಾಗಿ  ಬಗ್ಗಿ ನಿಂತಿದ್ದ ಗೂರ್ಖ ಹಿಂದಕ್ಕೆ ಸರಿಯದಿದ್ದಿದ್ದರೆ ಕಾರಿನಡಿಗೆ ಸಿಕ್ಕುತ್ತಿದ್ದನೋ ಏನೋ!!

ಹಾಳು ಟ್ರಾಫಿಕ್ನಲ್ಲಿ ಹೇಗೋ ಏಗಿ ಬ್ಯಾಂಕ್ ತಲುಪಿದಾಗ  ವ್ಯವಹಾರದ ಸಮಯ ಕೇವಲ 30 ಸೆಕಂಡುಗಳು ಉಳಿದಿತ್ತು. ಕೌಂಟರ್ ನಲ್ಲಿ ಏನು ಗಿಂಜುವುದು …ಮ್ಯಾನೇಜರ್ ಒಳ್ಳೆ ಪರಿಚಯ..ಅವರನ್ನೇ ರಿಕ್ವೆಸ್ಟ್ ಮಾಡಿದರಾಯ್ತು ಅಂದು ಕೊಂಡು ಕ್ಯಾಬಿನ್ಗೆ ಹೋದರೆ, ಅಲ್ಲಿ ಮ್ಯಾನೇಜರ್ ಇಲ್ಲ !! ಒಳ್ಳೆ ಪಚೀತಿ ಆಯ್ತಲ್ಲ ಅಂದು ಕೊಂಡೆ. ಇನ್ನೇನು ಮಾಡುವುದು ಕೌಂಟರ್ನವನಿಗೆ ಕೈ ಮುಗಿಯದೆ ಉಪಾಯವಿಲ್ಲ ಅಂದುಕೊಂಡು ಕೈಲ್ಲಿ ಟ್ಯಾಕ್ಸ್ ಚಲ್ಲನ್ ಹಿಡಿದು ಕೊಂಡು ಕೌಂಟರ್ ಬಳಿ ಹೋಗಿ ನೋಡಿದ್ರೆ…….ಅದೇ ಪಕ್ಕದ ಮನೆಯವನು !! ನನ್ನ ಪೇಚಾಟ ವನ್ನೆಲ್ಲ ಕುಳಿತಲ್ಲಿಂದಲೇ ಗಮನಿಸಿದ್ದ ಆತ! ನನ್ನನ್ನೇ  ನೋಡಿಕೊಂಡು ಮೆದುವಾಗಿ ಶಿಳ್ಳೆ ಹಾಕುತ್ತ ಜೇಬಿಂದ ಕೋಮ್ಬ್ ತೆಗೆದು ಒಮ್ಮೆ ಒಪ್ಪವಾಗಿ ತಲೆ ಬಾಚಿ ಮತ್ತೆ ಜೇಬಲ್ಲಿ ಇಟ್ಟು ಕೊಂಡ. ನಂತರ “COUNTER CLOSED ” ಎಂಬ ಬೋರ್ಡ್ ತೆಗೆದು ಕಿಂಡಿಗೆ ಅಡ್ಡ ಇಟ್ಟು, ಕ್ಯಾಬಿನ್ ಲಾಕ್ ಮಾಡಿ, ಒಂದು ಕೈ ಜೇಬಲ್ಲಿ ಇಳಿಬಿಟ್ಟು, ಮತ್ತೊಂದು ಕೈಯ್ಯಲ್ಲಿ ಚಾವಿಯನ್ನು ತಿರುಗಿಸುತ್ತಾ ನಡೆದೇ ಬಿಟ್ಟ …..

 

‍ಲೇಖಕರು G

16 August, 2011

10 Comments

  1. savitri

    ಎಷ್ಟು ಸೊಗಸಾದ ಕಥೆ!!!

  2. ssrao

    bahaLa chennagide. ahankArakke udAsEnavE maddu.

    Rao.

  3. Ram Naresh Manchi

    …. interesting 🙂 🙂

  4. Anitha Naresh Manchi

    ನಿಮ್ಮ ಕಥೆ ಹೇಳುವ ಶೈಲಿ ಚೆನ್ನಾಗಿದೆ.. 🙂

  5. malathi S

    twist in the tale. good one
    🙂
    malathi S

  6. veena bhat

    ರಸವತ್ತಾದ ಕತೆ….ಕುತೂಹಲಕಾರಿಯಾಗಿತ್ತು …:):)

  7. suvarna

    muyyige muyyi hulukaddiyu kelasakke baruthhade endu thiliyadavanu moorka

  8. Badarinath Palavalli

    ಕಥನ ನಿರೂಪಣಾ ಶೈಲಿಯಲ್ಲಿ ಸರಳತೆ ಮತ್ತು ಓದಿಸಿಕೊಂಡು ಹೋಗುವ ಕಲೆ ನಿಮಗೆ ಕರಗತವಾಗಿದೆ. ಭೇಷ್!

  9. L M nagaraju,

    Beautiful

  10. Ashoka Bhat

    Ellarigoo Dhanyavadagalu! :):)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading