ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೃತ್ಯ ರೂಪಕ “ಅಂಬಾ ಭವಾನಿ ವೈಭವ”


ಸೂರ್ಯ ಬಾನಂಚಿನ ತೆರೆಯ ಮರೆಗೆ ಸರಿಯುವ ಹೊತ್ತಿನಲ್ಲಿ ಅಂಬೆಯ ಸನ್ನಿಧಿಯಲ್ಲಿ ಅಲಂಕೃತವಾದ ರಂಗದ ಮೇಲೆ ಅನಾವರಣ ಗೊಳ್ಳುವವು ದೇವಿಯ ಹತ್ತಾರು ರೂಪಗಳ ವೈಭವದ ಚಿತ್ತಾರ.
ಇಂಪಾದ ರಾಗದ ಜೊತೆಗೆ ತಾಳದ ಮೇಳ. ಗೆಜ್ಜೆ ಕಟ್ಟಿ ಹೆಜ್ಜೆ ಹಾಕುವ ಸುಂದರಾಂಗಿಯರ ಸುಂದರ ಮೊಗದಲ್ಲಿಯೂ ದೈವಕಳೆ ಮೂಡುವಂಥ ಸೊಬಗು. ರಂಗದ ಮೇಲೆ ಭಾವ-ಭಂಗಿಯಿಂದ ದೇವಿಯ ಪ್ರತಿರೂಪವಾಗಿ ನಿಂತು ದೇವಿ ಆರಾಧಕರನ್ನು ಭಕ್ತಿ ಸಾಗರದಲ್ಲಿ ಸೆಳೆದೊಯ್ಯುವುದೇ ಈ ಎಲ್ಲ ಕಲಾವಿದೆಯರ ಆಶಯ. ಬಣ್ಣ-ಬೆಳಕಿನ ಆಟದ ನಡುವೆ ಭವಾನಿಯ ವೈಭವದ ರಸಾಮೃತ ಸಾರವೇ ಹರಿಯಬೇಕೆನ್ನುವುದು ತುಡಿತ ಹಾಗೂ ಮಿಡಿತ.   ಇಂತಹದೊಂದು ಭಕ್ತಿಯ ಸಾರವು ನೃತ್ಯ ಸಾಗರ ಮಂಥನದಿಂದ ಹೊರಹೊಮ್ಮಲಿದೆ. ಅದೇ `ಅಂಬಾ ಭವಾನಿ ವೈಭವ’ದ ಅಮೃತಧಾರೆ. ಈ ನೃತ್ಯಾಮೃತ ಧಾರೆಯನ್ನು ಹರಿಸಲಿರುವವರು `ಗರುಡ ನಾಟ್ಯ ಸಂಘ’ದ ಪ್ರತಿಭಾವಂತ ಯುವ ಕಲಾವಿದೆಯರು.
ಸುಮಾರು ನಲ್ವತ್ತು ವರ್ಷಗಳ ದೀರ್ಘ ಇತಿಹಾಸ ಹೊಂದಿರುವ “ಗರುಡ ನಾಟ್ಯ ಸಂಘ”ದ ಹೊಸ ತಲೆಮಾರಿನ ಕಲಾವಿದರು ಇದೇ ಶನಿವಾರ(1ನೇ ಅಕ್ಟೋಬರ್, 2011)ದಂದು ನಗರದ ಕುಮಾರಸ್ವಾಮಿ ಬಡಾವಣೆಯ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ “ಅಂಬಾ ಭವಾನಿ ವೈಭವ” ನೃತ್ಯ ಕಾರ್ಯಕ್ರಮ ಪ್ರದಶರ್ಿಸಲಿದ್ದಾರೆ.
ಭರತ ನಾಟ್ಯ ಹಾಗೂ ಕಾಂಟೆಂಪರರಿ ನೃತ್ಯವನ್ನು ಮೇಳೈಸಿದ `ಕಾಂಟೆಂಪರರಿ ಕ್ಲಾಸಿಕಲ್’ ಶೈಲಿಯಲ್ಲಿ ಪ್ರಸ್ತುತಪಡಿಸುವ ಅಂಬಾ ಭವಾನಿ ವೈಭವ ನೃತ್ಯವು ಸುಮಾರು ಒಂದೂವರೆ ತಾಸು ನೋಡುಗರಿಗೆ ರಸದೌತಣ ನೀಡಲಿದೆ. ಫ್ಯೂಜನ್ ಸಂಗೀತದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ನೃತ್ಯ ಸೊಬಗನ್ನು ಶೋಭಾ ಎಂ. ಲೋಲನಾಥ್ ಹಾಗೂ ರಘುನಂದನ್ ನೇತೃತ್ವದ ಕಲಾವಿದ ಬಳಗವು ತಮ್ಮ ಕಲಾ ಕೌಶಲದಿಂದ ಪ್ರದಶರ್ಿಸಲಿದೆ.
ದೇವಿಯ ವಿವಿಧ ರೂಪಗಳನ್ನು ಪ್ರೇಕ್ಷಕರೆದುರು ಸಾದರಪಡಿಸುವ ಈ ನೃತ್ಯ ಕಾರ್ಯಕ್ರಮವು ಶನಿವಾರ(1ನೇ ಅಕ್ಟೋಬರ್, 2011)ದಂದು ರಾತ್ರಿ 7.00 ಗಂಟೆಗೆ ಆರಂಭವಾಗಲಿದೆ. ಕುಣಿಗಲ್ ಶಾಸಕ ಶ್ರೀ ಬಿ.ಬಿ. ರಾಮಸ್ವಾಮಿ ಗೌಡ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಸಿನೀಮಾ ಹಾಗೂ ಟೆಲಿವಿಷನ್ ನಿದರ್ೇಶಕ ರಾಜು ಮೋಕಾಶಿ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ.

ದಿನಾಂಕ: 1ನೇ ಅಕ್ಟೋಬರ್ 2011 (ಶನಿವಾರ)
ಸಮಯ: ರಾತ್ರಿ 7.00ಕ್ಕೆ
ಸ್ಥಳ: ಶ್ರೀ ಅಂಬಾ ಭವಾನಿ ದೇವಸ್ಥಾನ58ನೇ ಅಡ್ಡ ರಸ್ತೆ, 64ನೇ ಅಡ್ಡ ರಸ್ತೆ, ಮುನೇಶ್ವರ ಬ್ಲಾಕ್,ಕುಮಾರಸ್ವಾಮಿ ಲೇಔಟ್, 1ನೇ ಹಂತ.ಬೆಂಗಳೂರು 560 078
ಉದ್ಘಾಟನೆ: ಶ್ರೀ ಬಿ.ಬಿ. ರಾಮಸ್ವಾಮಿ ಗೌಡ (ಶಾಸಕರು, ಕುಣಿಗಲ್)
ಮುಖ್ಯ ಅತಿಥಿ: ಶ್ರೀ ರಾಜು ಮೋಕಾಶಿ (ನಿದರ್ೇಶಕರು, ಸಿನೀಮಾ ಮತ್ತು ಟೆಲಿವಿಷನ್)

‍ಲೇಖಕರು avadhi

30 September, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading