ನೂಪುರ ಭ್ರಮರಿ ಸಂಶೋಧನಾ ಪ್ರತಿಷ್ಠಾನ(ರಿ.)
‘ಸಾನ್ನಿಧ್ಯ’, ದೇಚೂರು ರಸ್ತೆ, ಅಶ್ವತ್ಥಕಟ್ಟೆ ಹತ್ತಿರ, ಮಡಿಕೇರಿ, ಕೊಡಗು ೫೭೧೨೦೧.
ರಾಜ್ಯಮಟ್ಟದಲ್ಲಿ ನೃತ್ಯದ ಸಂಶೋಧನೆಗೆಂದೇ ನಡೆಯಲಿರುವ ಮೊತ್ತಮೊದಲ ಕಮ್ಮಟ ಕಾರ್ಯಕ್ರಮಕ್ಕೆ ಸಂಶೋಧನಾ ಲೇಖನಗಳನ್ನು ಹಾಗೂ ಆಸಕ್ತರ ಪಾಲ್ಗೊಳ್ಳುವಿಕೆಯನ್ನು ಕೋರಿ ಆಹ್ವಾನ ನೀಡುವ ಪತ್ರಿಕಾ ಪ್ರಕಟಣೆಯನ್ನು ಕಳುಹಿಸಿಕೊಡುತ್ತಲಿದ್ದೇವೆ. ಈ ಮೊದಲು ಇಂಗ್ಲೀಷಿನಲ್ಲೂ ಪ್ರಕಟಣೆ ಕಳಿಸಿ ಕೋರಲಾಗಿದೆ. ಜನವರಿ ೧ ಸಂಶೋಧನಾ ಸಂಕ್ಷೇಪ ಕಳಿಸುವ ಕೊನೆಯ ದಿನಾಂಕ. ಈ ಹಿನ್ನಲೆಯಲ್ಲಿ ಈ ವಾರ್ತೆಯನ್ನು ರಾಜ್ಯದ ಸಹೃದಯರಿಗೆ ತಲುಪುವಂತೆ ಪ್ರಕಟಿಸಿ ಪ್ರೋತ್ಸಾಹಿಸಬೇಕಾಗಿ ಸವಿನಯ ವಿನಂತಿ.
ರಾಜ್ಯಮಟ್ಟದ ನೃತ್ಯ ಸಂಶೋಧನಾ ಕಮ್ಮಟ/ಸಂಶೋಧನಾ ಪ್ರಬಂಧ ಮಂಡನಾ ವೇದಿಕೆಗೆ ಆಹ್ವಾನ
ವಿಷಯ : “ನೃತ್ಯ ಸಂಶೋಧನೆ : ಪ್ರಕ್ರಿಯೆ ಮತ್ತು ಸವಾಲುಗಳು”
ಕಮ್ಮಟದ ಪ್ರಮುಖ ವಿಷಯಗಳು: ನೃತ್ಯ ಇತಿಹಾಸ, ನೃತ್ಯಶೈಲಿಯ ಪುನರ್ ರಚನೆ ಮತ್ತು ಮಾಧ್ಯಮ ಮತ್ತು ಸಾಹಿತ್ಯ ಸಂಬಂಧ ವಿಶ್ಲೇಷಣೆ.
ಇತರೇ ವಿಚಾರಪ್ರಸ್ತಾಪಗಳು: ನೃತ್ಯದ ಶಾಸ್ತ್ರೀಯತೆ, ವ್ಯಾಖ್ಯಾನ, ಶೈಕ್ಷಣಿಕ ನೆಲೆ, ಸಮಕಾಲೀನ ಬೆಳವಣಿಗೆ, ಸಾಮಾಜಿಕ ಪರಿಕಲ್ಪನೆ, ಸಂಗೀತ, ಜನಪದ
ಕರ್ನಾಟಕದಲ್ಲಿ ನೃತ್ಯಸಂಸ್ಕೃತಿಗೆ ಸಂಬಂಧಿಸಿದಂತೆ ವಸ್ತುನಿಷ್ಠ ಅಧ್ಯಯನ, ಕ್ರಮಬದ್ಧವಾದ ಸಂಶೋಧನಾಕ್ರಮ ಮತ್ತು ಅವಕಾಶಗಳಿಗಾಗಿ ಒಂದು ದಿನದ ಸಂಶೋಧನಾ ಕಮ್ಮಟ/ವಿಚಾರ ಮಂಡನಾ ವೇದಿಕೆಯನ್ನು ಕರ್ನಾಟಕ ಸಂಶೋಧಕರ ಒಕ್ಕೂಟ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನೂಪುರ ಭ್ರಮರಿ ಸಂಶೋಧನಾ ಪ್ರತಿಷ್ಠಾನ ಮತ್ತು ಪತ್ರಿಕೆಯು 20 ಫೆಬ್ರವರಿ 2012ರಂದು ಬೆಂಗಳೂರಿನಲ್ಲಿ ಆಯೋಜಿಸಲಿದೆ. ಈ ನಿಟ್ಟಿನಲ್ಲಿ ಆಸಕ್ತ ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳಿಂದ (ಪಿಎಚ್‌ಡಿ/ಎಂಎ/ಎಂಫಿಲ್) ಸಂಶೋಧನಾ ಲೇಖನಗಳನ್ನು ಆಹ್ವಾನಿಸಲಾಗಿದೆ. ಸಂಶೋಧನಾ ಲೇಖನವು ಕನ್ನಡದಲ್ಲಿದ್ದು ಈ ಮೊದಲು ಎಲ್ಲಿಯೂ ಮಂಡನೆಯಾಗಲೀ/ ಪ್ರಕಟವಾಗಲೀ ಆಗಿರಬಾರದು. ಲೇಖನಗಳ ಪ್ರಬಂಧ ಸಾರ/ಸಂಕ್ಷೇಪಗಳನ್ನು ಕಳುಹಿಸಿಕೊಡಲು ಅಂತಿಮ ದಿನಾಂಕ : ಜನವರಿ 1, 2012. ಹಿರಿಯ ಕಲಾವಿದರು-ಲೇಖಕರು-ವಿದ್ವಾಂಸರು-ಮಾಧ್ಯಮ ಪ್ರತಿನಿಧಿಗಳು ಕಮ್ಮಟದಲ್ಲಿ ಭಾಗವಹಿಸಬಹುದಾಗಿದ್ದು ಸಂಶೋಧನಾಸಕ್ತಿ ಹೊಂದಿದ ಅಭ್ಯರ್ಥಿಗಳು ಮುಂಚಿತವಾಗಿ ಹೆಸರು ನೋಂದಾಯಿಸಬೇಕು. ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಗುತ್ತದೆ. ವಿದ್ವತ್ಪೂರ್ಣ ಸಂಶೋಧಕರಿಗೆ ಕಮ್ಮಟದ ಸಮಾಲೋಚನೆಯಲ್ಲಿ ಭಾಗವಹಿಸಲು ಅವಕಾಶವಿದೆ. ಆಯ್ಕೆ ಸಮಿತಿಯ ನಿರ್ಧಾರವೇ ಅಂತಿಮ.
ಹೆಚ್ಚಿನ ಮಾಹಿತಿಗೆ ಮತ್ತು ಪ್ರವೇಶಗಳನ್ನು ಕಳುಹಿಸಬೇಕಾದ ವಿಳಾಸ :
ನೂಪುರ ಭ್ರಮರಿ ಪ್ರತಿಷ್ಠಾನ
ಛಿ/o ಬಿ.ಕೆ.ವಿಜಯೇಂದ್ರ
ನಂ. ೬೪(೩೩), ೨ನೇ ಅಡ್ಡರಸ್ತೆ
ಗವಿಪುರಂ ಬಡಾವಣೆ
ಬಸವನಗುಡಿ, ಬೆಂಗಳೂರು
ದೂರವಾಣಿ: 9964140927
ಈ ಮೈಲ್ : ediotr@noopurabhramari.com
ಅಂತರ್ಜಾಲ ತಾಣ : www.noopurabhramari.com







0 Comments