ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೂತನ ದೋಶೆಟ್ಟಿ ಹೊಸ ಕವಿತೆ- ಮಗ್ಗುಲ ಮುಳ್ಳು 

ಮಗ್ಗುಲ ಮುಳ್ಳು 

ನೂತನ ದೋಶೆಟ್ಟಿ

*

ಇದು ಚಂದ್ರನಿಲ್ಲದ ರಾತ್ರಿ

ಬೆಳಕೆಲ್ಲ ಕತ್ತಲಲ್ಲಿ ಕರಗಿ

ಅವಳ ಕನಸುಗಳು ಒಡಲಲ್ಲಿ ಕೊರಗಿ

ರಕ್ತ ರಾತ್ರಿಯಾಗಿ ಹರಿದು

ಅಪ್ಪನ ಕೈಯ ತೋಯಿಸಿದ್ದವು!

ಅವನ ಎದೆಯ ಉರಿ ತಣ್ಣಗಾಗಲು.

ಹೊಟ್ಟೆಯ ಪುಟ್ಟ ಕಂದಮ್ಮನ ರಕ್ತ ಸೇರಿದರೂ

ಆದದ್ದು ಒಂದೇ ಬಣ್ಣ, ಕೆಂಪು!

ಹೆಪ್ಪುಗಟ್ಟಿದ ಅಜ್ಜನ ಎದೆಯ ಸೋಕಲಿಲ್ಲ ಅದು.

ಅಚ್ಚರಿ…

ಅದು , ಅವನ ರಕ್ತವೇ, ಅದೇ ಬಣ್ಣವೇ!

ಅವಳ ವಿಶಾಲ ವಿಶ್ವದಲ್ಲಿ

ಆ ಬಣ್ಣಕ್ಕೆ ದೀರ್ಘ ಇತಿಹಾಸವಿತ್ತು

ಅವನ ಪುಟ್ಟ ಬಾವಿಯಲ್ಲಿ

ಆ ಬಣ್ಣ ಇನ್ನೂ ಹುಟ್ಟಿರಲಿಲ್ಲ!

ಏನು ಸೋಜಿಗ..

ಬೆರಳು ಹಿಡಿದು ನಡೆದ ಮಗಳು 

ಕೈ ಚಾಚಿ ಅಪ್ಪಿದ ಬದುಕು

ಕಾಲವನ್ನು ಹಿಂದೋಡಿಸಿ

ಮೋಜು ನೋಡುವ

ಫೂತ್ಕರಿಸಿ  ಮಣಿಸುವ

ಮಗ್ಗುಲ ಮುಳ್ಳು!

‍ಲೇಖಕರು avadhi

10 March, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading