ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ
ನೀ ಬಂದು ನಿಂದಿಲ್ಲಿ
ದೀಪ ಹಚ್ಚಾ.
ನಲ್ಲ ನೀ ಬಂದಂದು ಕಣ್ಣಾರೆ ಕಂಡಂದು
ಮನೆಯೆಲ್ಲ ಹೊಳೆದಂತೆ
ದೀಪ ಹಚ್ಚಾ.
ಎದೆಯೊಳಗೆ ಒಂದು ದೀಪ ಹಚ್ಚುವ, ಮನಸ್ಸಿಗೂ ಬೆಳಕು ಹರಡುವ ಈ ಗೀತೆ ಮತ್ತೆ ಮತ್ತೆ ಕಾಡಿಸುತ್ತಲೇ ಇದೆ. ಓದುಗರು ಇನ್ನೂ ಈ ಗುಂಗಿನಿಂದ ಹೊರಬಂದಿಲ್ಲ. ಹಾಡುವವರ ದನಿ ಇನ್ನೂ ಸಾಲುಗಳನ್ನು ಗುಣು ಗುಣಿಸುತ್ತಲೇ ಇದೆ.
ಈ ಕವಿತೆಯನ್ನು ಕೊಟ್ಟ, ಇಂತಹದೇ ಕಾಡುವ ಹಲವು ಗೀತೆಗಳನ್ನು ಇತ್ತ ಎಸ್ ವಿ ಪರಮೇಶ್ವರ ಭಟ್ಟರ ಕಾವ್ಯ ಸಂಗ್ರಹ ಇದೀಗ ಹೊರ ಬಂದಿದೆ. ಎಸ್ವಿಪಿ ಎಂದೆ ಜನಪ್ರಿಯರಾಗಿ ಹೋಗಿರುವ, ನಾಡಿನುದ್ದಕ್ಕೂ ಹರಡಿಕೊಂಡಿರುವ ಅತ್ಯುತ್ತಮ ಸಂಸ್ಕೃತಿ ಪ್ರೀತಿ ಉಳ್ಳ ವಿದ್ವಾಂಸರನ್ನು ಕೊಟ್ಟ ಎಸ್ ವಿ ಪಿ ಮತ್ತೆ ನೆನಪಾಗಿದ್ದಾರೆ.
ಶಿವಮೊಗ್ಗದ ಕರ್ನಾಟಕ ಸಂಘ ಶ್ರಮ ವಹಿಸಿ ಎನ್ನುವುದಕ್ಕಿಂತ, ಅಪಾರ ಪ್ರೀತಿಯಿಂದ ಈ ಪುಸ್ತಕ ತಂದಿದೆ. ಜೆ. ಕೆ. ರಮೇಶ್ ಈ ಸಂಕಲನದ ಸಂಪಾದಕರು. ಎಸ್ ವಿ ಪಿ ಯವರ ಕವನ, ಮುಕ್ತಕ ಹಾಗೂ ವಚನಗಳನ್ನೆಲ್ಲ ಸಂಗ್ರಹಿಸಲಾಗಿದೆ. ೧೭ ಕವಿತಾ ಸಂಗ್ರಹಗಳ ಈ ಗುಚ್ಚ ಕಾಡುತ್ತದೆ.
ಪುಸ್ತಕಕ್ಕಾಗಿ:
![]()
ಕರ್ನಾಟಕ ಸಂಘ, ಬಿ, ಎಚ್ ರೋಡ್, ಶಿವಮೊಗ್ಗ-೫೭೭೨೦೧
ದೂರವಾಣಿ: ೨೭೭೪೦೬
ಬೆಲೆ: ೧೨೦ ರೂ.






0 Comments