ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀವು ಮಾಡಿದ ಆಪಾದನೆಗಳು ಸತ್ಯವಲ್ಲ..

ಬರಹಗಾರ ಎಸ್ ಗಂಗಾಧರಯ್ಯ ತಾವು ಇತ್ತೀಚಿಗೆ ಓದಿದ ಕೃತಿಗಳ ಪಟ್ಟಿ ಮಾಡುತ್ತಾ ಪ್ರತಿಭಾ ನಂದಕುಮಾರ್

ಅವರ ಆತ್ಮ ಕಥನ ‘ಅನುದಿನದ ಅಂತರಗಂಗೆ’ ಯ ಬಗ್ಗೆ ಬರೆದಿದ್ದರು. ಅದು ಇಲ್ಲಿದೆ.

ಅದಕ್ಕೆ ಪ್ರತಿಭಾ ನೀಡಿರುವ ಉತ್ತರವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

ಎಸ್ ಗಂಗಾಧರಯ್ಯ ಅವರಿಗೆ, ಬರೆದದ್ದು ಎಲ್ಲರಿಗು ಇಷ್ಥವಾಗಬೇಕು ಎಂದು ಯಾವ ಸಾಹಿತಿಯೂ ನಿರೀಕ್ಷಿಸುವುದಿಲ್ಲ. ನನ್ನ ಬರಹ ನಿಮಗೆ ಇಷ್ಥವಾಗದಿದ್ದರೆ ಇಷ್ಥವಾಗಲಿಲ್ಲ ಎಂದು ಹೇಳಿ ಆದರೆ ಅದನ್ನು pritentious ಎಂದು ಕರೆಯುವ ಹಾಗು “ಓದುಗರನ್ನೇ ಮನಸ್ಸಿನಲ್ಲಿತ್ತುಕೊಮ್ದು ಅಥವಾ ತಾವು ಬರೆದದ್ದನ್ನೆಲ್ಲ ಓದುವವರಿದ್ದಾರೆ ” ಎನ್ನುವ ತಿರ್ಮಾನಕ್ಕೆ ಬಂದು ಬರೆದಿದ್ದೇನೆ ಎಂದು ನೀವು ಮಾಡಿದ ಆಪಾದನೆಗಳು ಸತ್ಯವಲ್ಲ. ಮೊತ್ತ ಮೊದಲನೆಯದಾಗಿ ಈ ಬರಹ ‘ಅಗ್ನಿ’ ಪತ್ರಿಕೆಯಲ್ಲಿ ಎಂಟು ವರ್ಷಗಳ ಹಿಂದೆಯೇ ೫೬ ವಾರಗಳ ಕಾಲ ಕಂತುಗಳಲ್ಲಿ ಬಂದಿತ್ತು. ನೀವು ಆಪಾದಿಸಿದ ಹಪಾಹಪಿ ನನಗೆ ಇದ್ದಿದ್ದರೆ ಆಗಲೇ ನಾನು ಇದನ್ನು ಪುಸ್ತಕವಾಗಿ ತರಬಹುದಿತ್ತು. ಈಗಲೂ ಅದನ್ನು ಪುಸ್ತಕವಾಗಿ ತಂದಿದ್ದು ಅಹರ್ನಿಸಿ ಪ್ರಕಾಶನದ ಅಕ್ಷತಾ ಆಸಕ್ತಿ ವಹಿಸಿದ್ದರಿಂದ ಅಂತ ಮುನ್ನುಡಿಯಲ್ಲೇ ಹೇಳಿದ್ದೇನೆ. ಗಮನಿಸಿ. ನಿಮ್ಮದು ಬೇಜವಾಬ್ದಾರಿಯ ಟೀಕೆ -ಪ್ರತಿಭಾ ನಂದಕುಮಾರ್]]>

‍ಲೇಖಕರು G

23 June, 2012

5 Comments

  1. VG

    ಒಂದು ಕೃತಿಯನ್ನು ಸಾರ್ವಜನಿಕರ ವಶಕ್ಕೆ ಬಿಟ್ಟುಕೊಟ್ಟಮೇಲೆ ಪ್ರತಿಯೊಂದು ಅಭಿಪ್ರಾಯಕ್ಕೂ ಮರುಪ್ರತಿಕ್ರಿಯಿಸುವ ಅಗತ್ಯವಿಲ್ಲ ಎನಿಸುತ್ತದೆ. ಅಷ್ಟಕ್ಕೂ ವಿಮರ್ಶೆ/ಅಭಿಪ್ರಾಯಗಳೆಲ್ಲಾ ೧೦೦% ವಸ್ತುನಿಷ್ಠ ನೆಲೆಯಿಂದಲೇ ಮೂಡಿಬರುವುದು ಸಾಧ್ಯವೇ ಇಲ್ಲ. ‘pretentious’ ಮುಂತಾದ ಪದಗಳನ್ನು ಬಳಸಿ ಮಾಡುವ ಇಂಥ ವಿಮರ್ಶೆಗಳ ಸಾಹಿತ್ಯಿಕ ಮೌಲ್ಯವೇ ಪ್ರಶ್ನಾರ್ಹ….
    ವಿ.ಗಾ

  2. ಸೂರಿ

    ಯಾವುದೇ ಒಂದು ಕೃತಿಯನ್ನು ವಿಮರ್ಶೆ ಮಾಡುವಾಗ ‘ಅದು ತನಗೆ ಇಷ್ಟವಾಗಲಿಲ್ಲ’ ಅನ್ನುವುದಕ್ಕೂ; ‘ಅದು ಚೆನ್ನಾಗಿಲ್ಲ ಅಥವಾ ಕಳಪೆ ಅಥವಾ ಅದು pretentious’ ಅಂತ ಸಾರಾಸಗಟಾಗಿ ಹೇಳಿಕೆ ಕೊಡುವುದಕ್ಕೂ ವ್ಯತ್ಯಾಸವಿದೆ. ಮೊದಲನೆಯದು ವಯಕ್ತಿಕ ಅಭಿಪ್ರಾಯ. ಅದನ್ನು ಹೇಳುವುದಕ್ಕೆ ಯಾರ ಹಂಗೂ ಬೇಡ. ಎರಡನೆಯದು ಉಡಾಫೆಯದು. ಯಾರ ಮತ್ತು ಯಾವ ಚಟುವಟಿಕೆಯ ಆರೋಗ್ಯಕ್ಕೂ ಒಳ್ಳೆಯದಲ್ಲ. ಅದನ್ನು ವಿಮರ್ಶಕರು ತಿಳಿದಿರಬೇಕು. ಕೃತಿಗಾರನ ಬರವಣಿಗೆಯನ್ನೇ, ನಿಷ್ಥೆಯನ್ನೇ ಪ್ರಶ್ನಿಸುವುದು; ಈ ಕೃತಿ ಹೀಗಿದ್ದರೆ ಚೆನ್ನಾಗಿತ್ತು, ಈ ಪಾತ್ರ ಹೀಗಿದ್ದರೆ ಚೆನ್ನಾಗಿತ್ತು ಅಂತ ಹೊಸ ಕೃತಿಯನ್ನೇ ರಚಿಸಲು ಸಲಹೆ ಕೊಡುವುದು ಈ ಕಾಲದ ವಿಮರ್ಶೆಯ ಮಾನದಂಡವಾಗಿದೆ. ಪದ್ಮಾ ದೇಸಾಯಿ ಅವರ ಪುಸ್ತಕವನ್ನು ” BREAKING OUT: AN INDIAN WOMAN’S AMERICAN JOURNEY” (ಇದು ಅವರ ಆತ್ಮಕಥೆ) ಈ ವಾರದ ತೆಹೆಲ್ಕದಲ್ಲಿ ಚಿತ್ರಾ ಬ್ಯಾನರ್ಜಿ ದಿವಾಕರುಣಿ ಅವರು ಪರಿಚಯ ಮಾಡಿಕೊಟ್ಟಿದ್ದಾರೆ. ಎಲ್ಲರೂ ಒಮ್ಮೆ ಅದನ್ನು ಓದುವುದು ಒಳ್ಳೆಯದು. ಸಾಧ್ಯವಾದರೆ ಪ್ರತಿಭಾ ಮತ್ತು ದೇಸಾಯಿ ಅವರ ಎರಡೂ ಪುಸ್ತಕಗಳನ್ನು ಜೊತೆ ಜೊತೆಯಲ್ಲೇ ಓದಿ ನೋಡಿ.

    • laxminarasimha

      oLLeya pratikriye.

  3. D.RAVI VARMA

    ಸರ್ ಇಲ್ಲಿ ಏನಾಗಿದೆ ಅಂದ್ರೆ ಪ್ರತಿಭಾ ನಂದಕುಮಾರ್ ಅವರನ್ನು ಒಂದು ಹೆಣ್ಣಿನ staanadallittu ನೋಡುವುದರಿಂದ ಈ ತರದ ಮಾತು ಬರ್ತಿವೆ ಅನಿಸುತ್ತೆ,ಗಂಗದರಯ್ಯ ಒಳ್ಳೆ ಹಾಗು ತುಂಬಾ ಆಳವಾಗಿ ಆಲೋಚನೆ ಮಾಡಿ ಬರೆಯುವನ್ತವರು ಎನ್ನುವುದು ಅವರ ಬರಹಗಳ ಮೂಲಕ ತಿಳಿಯುತ್ತೆ, ಆತ್ಮ ಚರಿತ್ರೆಗಳಲ್ಲಿ ಮುಚ್ಚಿಡಬಹುದದ್ದನ್ನು ಪ್ರತಿಭಾನಂದಕುಮಾರ್ ಹೊರಹಾಕಿದ್ದಾರೆ, ಅದು ಒಂದಿಸ್ತು ಓದುಗರಿಗೆ ಇಡಿಸಲಿಕ್ಕಿಲ್ಲ. ನಾನಂತು ತುಂಬಾ ದಿನಗಳನಂತರ ಒಂದು ಒಳ್ಳೆ ಪುಸ್ತಿಕೆ ಓದಿದೆ ಮರು ಓದಿದೆ ಹಾಗೆ ನಮ್ಮಲ್ಲಿ ಅಮೃತಾಪ್ರೀತಂ ಪ್ರೊತಿಮಾ ಬೇಡಿ ಮಾಧವಿ ಕುಟ್ಟಿ ,ಹೀಗೆ ಹೀಗೆ…….ಲಂಕೇಶ್ ……..ಎಲ್ಲರ ಆತ್ಮಚರಿತ್ರ್ಗಳು ಕೆಲವರ ಬೇಸರಕ್ಕೆ,ಇನ್ನು ಹಲವರ ಮೆಚ್ಚುಗೆಗೆ ಪಾತ್ರವಾದದ್ದಂತು ಸತ್ಯ.ಬಿಡಿ ಇಸ್ತವಾದವರು ಓದಲಿ ,ಇಲ್ಲವಾದವರು ಬಿಡಲಿ
    ರವಿ ವರ್ಮ ಹೊಸಪೇಟೆ

  4. mmshaik

    hennina mansondige avla barahavannu arthamaadidikolluvavaraste ondu krutiyannu vimarsisaballaru…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading