ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀವು ಬರಲೇಬೇಕು….

2 ವರುಷಗಳ ಹಿಂದೆ ಕನ್ನಡಪ್ರಭ ‘ಚುಕ್ಕಿ’ ಪುರವಣಿಯಲ್ಲಿ ನಾನು ಸುಮಾರು 30ಕ್ಕೂ ಹೆಚ್ಚು ಸಾಧಕಿಯರನ್ನು ಪರಿಚಯಿಸಿದ್ದೆ. ಇದೀಗ ಆ ಎಲ್ಲ ಲೇಖನಗಳ ಸಂಗ್ರಹ ನನ್ನ ಎರಡನೇ ಕೃತಿ “ಅವಳು ಮತ್ತೊಬ್ಬಳು” ಲೋಕಾರ್ಪಣೆಗೆ ಸಿದ್ಧವಾಗಿದೆ.

ಕಾಸರಗೋಡು, ಮಂಗಳೂರು, ಕುಂದಾಪುರ, ಮಂಡ್ಯದಿಂದ ಹಿಡಿದು ಗೋವಾದ ವರೆಗೆ…

ರಂಗೋಲಿ ಬಿಡಿಸುತ್ತಾ, ರಂಗೋಲಿಯನ್ನೇ ಅಧ್ಯಯನ ಮಾಡಿ ಅದರಲ್ಲೇ ಪಿಹೆಚ್್ಡಿ ಮಾಡಿದ ಮಹಿಳೆ …ಬುದ್ಧಿಮಾಂದ್ಯತೆಯಿರುವ ಮಕ್ಕಳಿಗೆ ಕುದುರೆ ಸವಾರಿ ಕಲಿಸುವ ಮಹಿಳೆ…ಕಾಲಿಲ್ಲದೇ ಇದ್ದರೂ ನೃತ್ಯಗಾತಿಯಾದ ಹುಡುಗಿ…ದೃಷ್ಟಿ ವೈಕಲ್ಯವಿದ್ದರೂ ಆನ್್ಲೈನ್್ನಲ್ಲಿ ಸಂಗೀತ ಹೇಳಿಕೊಡುವ ಮೂಲಕ ವೈಕಲ್ಯತೆಯನ್ನು ಮೀರಿದ ಯುವತಿ…ಹೀಗೆ ಒಟ್ಟು 35 ಮಹಿಳೆಯರ ಸಾಧನೆಗಳು…ಈ ಕೃತಿಯಲ್ಲಿದೆ.

ನನ್ನ ಈ ಕಾರ್ಯಕ್ರಮಕ್ಕೆ ನೀವೂ ಬಂದರೆ ತುಂಬಾ ಖುಷಿಯಾಗುತ್ತೆ…

ಈ ಮೊದಲು ಕಾಸರಗೋಡಿನಲ್ಲಿ ನನ್ನ ಚೊಚ್ಚಲ ಕವನ ಸಂಕಲನ ಬಿಡುಗಡೆಯಾದಾಗ ….ಅಲ್ಲಿಗೆ ಬರೋಕೆ ಕಷ್ಟ ಅಂತಾ ಹೇಳಿ ನುಣುಚಿಕೊಂಡಿದ್ದಿರಿ ಅಲ್ವಾ?

ಈವಾಗ ಬೆಂಗಳೂರಿನಲ್ಲೇ ಕಾರ್ಯಕ್ರಮ ಆಯೋಜಿಸಿದ್ದೇನೆ…

ಆದ್ದರಿಂದ ನೀವೂ ಬರಲೇ ಬೇಕು….

ಕಾಯ್ತಾ ಇರ್ತೀನಿ…

-ರಶ್ಮಿ ಕಾಸರಗೋಡು

 

‍ಲೇಖಕರು G

5 December, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading