ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀಳವೇಣಿ ನಿನಗೆಷ್ಟು ಕತೆಗಳು

ಸಂಧ್ಯಾ ಹೊನಗುಂಟಿಕರ್

Click-2

ಬಾಬ್ಕಟ್ಟನ್ನೂ ಬಾಚಲು
ಹೊತ್ತು ಹವಣಿಸುವ
ಪೋನಿಟೇಲಿಗೂ ಕ್ಲಿಪ್ ಸಿಕ್ಕಿಸಿ
ಕುದುರೆ ವೇಗದಿ ಹೆಜ್ಜೆಸಾಗುವ
ಕಾಲವನ್ನು ಒಲಿಸಿಕೊಳುವ
ಉಪಾಯ ತೋಚದೆ ದಿಕ್ಕುಗೆಟ್ಟ ನಾನು,

ನೀಳ ಹೆರಳ ಹೆಣೆದು
ನಡುನಡುವೆ ಮುತ್ತ ಕೋದು
ಹೊತ್ತು ಸವೆಸಲು ಹೆಣಗಿದೆ ನೀನು,
ನೀಳವೇಣಿಯೆ,
ಮೂರು ಕವಲುಗಳು ಬದುಕಿಗೆ ನಿಜ,
ಮತ್ತೆ ಮೂರನ್ನೂ ಒಂದಾಗಿಸುವ
ಈ ಜೀವ ನದಿ ಸೇರ ಎಲ್ಲಿ ? ಗೊಂಡೆ ಕಟ್ಟಿದ ಬಳಿಕ ದಾರಿಎಲ್ಲಿ ?
ಕಲ್ಲಾಗುವ ಮುನ್ನ ಅಹಲ್ಯೆ ಕಂಡ ಕನಸ ಬಲ್ಲೆಯ ?
ಕಲ್ಲು ಕಟೆದಷ್ಟು ಸರಾಗವಲ್ಲ
ಕನಸು ಕಟ್ಟುವುದು
ಮನಸು ತಟ್ಟುವುದು.
ಸಣ್ಣ ಕಟಿ, ಘನ  ನಿತಂಬದೊಡತಿಯೇ,
ನಿನಗೆಷ್ಟು ಕತೆಗಳೆ?
ಕಲ್ಲಾಗಲೊಂದು,
ಕೇಶ ಕಟ್ಟಲೊಂದು ,
ಮುಂಗುರಳ ಮೋಹಕ್ಕೆ ದುಶ್ಯಂತ
ಬರೆದದ್ದೊಂದು.
ಸಾಕಲ್ಲವೇ,ಮತ್ತೇಕೆ ಕವನಕ್ಕೆ ಕಾರಣವಾಗುವ ಅತಿಆಸೆ?

‍ಲೇಖಕರು Admin

3 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading