ನೀಲು ಪದ್ಯಗಳ ಬಗ್ಗೆ ವಿಮರ್ಶೆ ಬರೆಯುವುದೇ ಒಂಥರಾ ಅಭಾಸ. “ನೀಲಿಆಗಸದಸೀರೆ ಉಟ್ಟ ನನ್ನ ಸೆರಗಿನಂಚಿನ ಕುಸುರಿಯನ್ನು ನೆಲದ ಮೇಲೆ ನಿಂತುಅಳೆಯುವ ಮರುಳೇ!”
ಅಂತ ಅವಳ ಟಿಪಿಕಲ್ ಆದ ಸಣ್ಣ ನಗೆ ನಕ್ಕು ನೀಲುವೇತಮಾಷೆ ಮಾಡಿಬಿಡಹುದೇನೋ ಅನ್ನಿಸುತ್ತದೆ.
ಹಾದಿಮನಿಯ ಚಿತ್ರಗಳ ನಿತ್ಯದಿಗಂಬರಿ, ನೀಳ ಕೂದಲ ಹಂಗೂ ಇಲ್ಲದ ಅಕ್ಕ ಜಂಗಮಿ ನೀಲುವಿಗೆ ಮತ್ತು
ಸೀರೆಗೆ ಎತ್ತಣಿಂದೆತ್ತ ಸಂಬಂಧ ಅನ್ನುವುದು ಬೇರೆ ಪ್ರಶ್ನೆ.
ಆದರೂ ನೀಲು ಎಂಬ ಮಿಸ್ಟರಿ ಮಹಿಳೆಯ ಕುರಿತು ಕುತೂಹಲವಂತೂಇಲ್ಲದಿರಲಿಕ್ಕೆ ಸಾಧ್ಯವಿಲ್ಲ.
ಆದ್ದರಿಂದ ವಿದ್ವಾಂಸರು ಸ್ಟಾರ್ಚ್ ಹಾಕಿ ಗಟ್ಟಿಮಾಡಿಟ್ಟ ವಿಮರ್ಶೆ ಅನ್ನುವ ಪದವನ್ನು ಬದಿಗಿಟ್ಟು
ಈಕೆಯ ಮೀನಹೆಜ್ಜೆಗಳನ್ನುಅರಸುವ ಪ್ರಯತ್ನ ಮಾಡಿದರೆ ವಾಸಿ.
ಸಂಪೂರ್ಣ ಓದಿಗೆ ಭೇಟಿ ಕೊಡಿ- ಬಾಗೇಶ್ರೀ
+++
ಆ ಮನೆಯನ್ನ ನಾನು ಪುನಹ ನೋಡಲಾರೆನೆನ್ನುವ ಹಳಹಳಿ ತಿನ್ನತೊಡಗಿದ್ದ ಸಮಯ. ಇವ ಕೇಳಿದ, ’ಹನಿ… ಯು ಹ್ಯಾವ್ ಟು ಡಿಸೈಡ್ ವ್ಹೇರ್ ಯು ಬಿಲಾಂಗ್.’ ನಾನು ನಿರ್ಧರಿಸಿಬಿಟ್ಟೆ. ನನ್ನದೊಂದು ಮನೆ ಸಿಕ್ಕಿತಲ್ಲ ಅನ್ನುವ ಸಡಗರ ಎಲ್ಲ ಮರೆಸಿತು. ಆಗಾಗ ರಾತ್ರಿ ಹೊತ್ತು ಚಿಕ್ಕಿಗಳನ್ನ ದಿಟ್ಟಿಸುತ್ತ ಯಾಕೆ ಬಿಕ್ಕಳಿಸುತ್ತಿದ್ದೆನೊ ತಿಳಿಯುತ್ತಿರಲಿಲ್ಲ. ಈಗ ನೋಡಿದರೆ ನಾನೆ ಅಮ್ಮನಾಗಿ ನನ್ನ ಅಮ್ಮ ಅಜ್ಜಿಯಾಗಿ ತುಂಬ ಏನೇನೋ ಆಗಿಹೋಗಿದೆ.
ವಿಪರೀತ ಹಸಿವು. ಅಮ್ಮನ ಕೈಯ ಅಡುಗೆ ನೆನಪಾಗತೊಡಗಿತು.
ಭೂತದೊಳಗೆ ಹೂತುಹೋಗಿದ್ದ ಅಜ್ಜಿಯ ಬೆಚ್ಚಗಿನ ಕೈ ಕೂಡ.
ಸಂಪೂರ್ಣ ಓದಿಗೆ ಭೇಟಿ ಕೊಡಿ- Tinazone



0 Comments