ಎರಡು ಚಿತ್ರಗಳು
ಎನ್ ಸಂಧ್ಯಾ ರಾಣಿ
ಎರಡು ದಿನಗಳ ಅಂತರದಲ್ಲಿ ನೋಡಿದ ಎರಡೆರಡು ಚಿತ್ರಗಳು. ಒಂದು ತಲಾಶ್, ಮತ್ತೊಂದು ಎದೆಗಾರಿಕೆ.
ತಲಾಶ್ ನಲ್ಲಿ ಒಳ್ಳೆಯ ಚಿತ್ರಕಥೆ ಇದೆ. ಅನುಭವಿ ನಟ ನಟಿಯರ ದಂಡೇ ಇದೆ… ಅಮೀರ್ ಖಾನ್ ನ ದುಖಃ, ಯಾತನೆ ಹರಳುಗಟ್ಟಿದ ಅದ್ಭುತ ಅಭಿನಯ, ಕರೀನಾ ಮತ್ತು ಆಮೀರ್ ನಡುವಿನ ಕವನದಂತಹ ಮೌನ ಸಂವಾದದ ಕ್ಷಣಗಳು ಎಲ್ಲಾ ಇವೆ…. ಅತ್ಯಂತ ಬಿಗಿಯಾದ ನಿರೂಪಣೆ, ಹೆಜ್ಜೆ ಹೆಜ್ಜೆಯಾಗಿ ಚಿತ್ರ ಒಂದು ತಾರ್ಕಿಕ ಅಂತ್ಯಕ್ಕೆ ಹೋಗುತ್ತಿದೆ ಅನ್ನಿಸುತ್ತದೆ. ಹೀಗೆ ಸಾಗುವ ಚಿತ್ರ ಕೊನೆಯಲ್ಲಿ ಮುಗ್ಗರಿಸುತ್ತದೆ. ಎರಡು ಗಂಟೆಗಳ ಕಾಲ ಒಂದು ಸುಂದರ ಕಾವ್ಯ ಓದಿಸಿ, ಕಡೆಯಲ್ಲಿ ಅದನ್ನು ಕಾವ್ಯವೇ ಅಲ್ಲ, ಬೇರೇನೋ ಎಂದು ಹೇಳಿದರೆ ನಿರಾಸೆ ಮೂಡುತ್ತದಲ್ಲ ಹಾಗನ್ನಿಸಿತು. ಚಿತ್ರ ನೋಡುವಾಗ ಇದ್ದ ಸಂತೋಷ, ಅದು ಮುಗಿದ ಮೇಲೆ ಉಳಿಯಲಿಲ್ಲ. ಅರೆ, ನಮ್ಮನ್ನು ಮೋಸ ಮಾಡಿದ್ರಾ ಅನ್ನಿಸ್ತು.
ಆಮೇಲೆ ನೋಡಿದ ಚಿತ್ರ ಎದೆಗಾರಿಕೆ. ಪುಸ್ತಕ ಓದಿದ್ದೆ. ಕಿರು ಕಾದಂಬರಿ ಅದು. ಅದನ್ನು ಚಿತ್ರವಾಗಿಸಬೇಕಾದರೆ ಹೆಚ್ಚಿನ ದೃಶ್ಯಗಳನ್ನು ಸೇರಿಸಬೇಕು, ಮತ್ತು ಹಾಗೆ ಸೇರಿಸಿದರೆ ಚಿತ್ರಕಥೆ ತೆಳುವಾಗಿ, ಅಳ್ಳಕವಾಗುವ ಸಾಧ್ಯತೆಯೂ ಇತ್ತು. ಆದರೆ ಸುಮನ ಕಿತ್ತೂರ್ ಅದನ್ನು ಎಂತಹ ಬಿಗಿಯಾದ ಚಿತ್ರವಾಗಿಸಿದ್ದಾರೆ ಎಂದರೆ, ಪ್ರತಿಯೊಂದು ಪಾತ್ರದ ನೋಟ-ಒಳನೋಟ ಎರಡೂ ನಮಗೆ ದಕ್ಕುತ್ತದೆ. ಕಥೆ, ಚಿತ್ರಕಥೆ, ಕ್ಯಾಮೆರಾ, ಸಂಭಾಷಣೆ ಎಲ್ಲವೂ ಅಚ್ಚುಕಟ್ಟು. ಪುಸ್ತಕದಲ್ಲಿಲ್ಲದ ಕೆಲವು ಪಾತ್ರಗಳು ಇಲ್ಲಿ ಬಂದಿವೆ, ಆದರೆ ಅದು ಚಿತ್ರವನ್ನು ಮತ್ತಷ್ಟು ಶಕ್ತವಾಗಿಸಿವೆ. D Suman Kittur You Rock!! ಗಾಂಧಿನಗರದ ಬೌಂಡರಿ ದಾಟಿದ ಚಿತ್ರ ಸಿಕ್ಸರ್ ಹೊಡೆದಿದೆ… Congrats Suman!
ಈ ಚಿತ್ರದಲ್ಲೊಂದು ಕಾಡುವ ಹಾಡಿದೆ. ಕೇಳಿದ ಮೇಲೆ ನಮ್ಮ ಜೊತೆಯಲ್ಲೇ ಬಂದು ನಮ್ಮದಾಗುವ ಹಾಡು.
ಹಾಡಿಗಾಗಿ ಇಲ್ಲಿ ಕ್ಲಿಕ್ಕಿಸಿ :
ಇದನ್ನು ಹಾಡಿರುವುದು ಸಾಧುಕೋಕಿಲ ಅಂದರೆ ನಂಬಬೇಕು ನೀವು!










ಎದೆಗಾರಿಕೆ ನೋಡಬೇಕು.
ಈ ಹಾಡು ಸಾಧು ಕೋಕಿಲ ಹಾಡಿದ್ದು!!!!
edegarike odidavarige gothu.edegarike cinema maduvudakku edegarike beku.thandakke edegarike ide.