’ನಿರುತ್ತರ’ – ಒಂದು ಕಿರುಗತೆ

ನಾಗರಾಜ್ ಹರಪನಹಳ್ಳಿ

ಆ ಪುಟ್ಟ ಕಂದನ ಮಾತು ಕಾಡುತ್ತಲೇ ಇದೆ….ಚಟಪಟ ಅಂತಾ ಮನೆತುಂಬಾ ಓಡಾಡುವ ಅವಳು . ಆ ಪುಟ್ಟಿ ಆಕೆಯ ಮಗಳು. ತುಂಬಾ ಚೂಟಿ ಹುಡುಗಿ. ಹೋರಾಟದ ಬದುಕಿನ ಹಾದಿಯಲ್ಲಿ ಅಮ್ಮ . ಕಷ್ಟ ಸುಖ ವಿಚಾರಿಸಲು ಬಾರದ ಅಪ್ಪ. ನೌಕರಿ , ಮನೆ ಮಕ್ಕಳು ಅಂತಾ ನೋಡಿಕೊಂಡು ಹಗಲಾದರೆ ರಾತ್ರಿಯನು, ರಾತ್ರಿಯದರೆ ಹಗಲನು ಕಾಯುತ್ತಾ ಬದುಕಿನ ಅನುಕ್ಷಣವನ್ನು ಜೀವಂತವಾಗಿಡುವ ಆಕೆ. ಆಕೆಯನ್ನು ಜೀವಂತವಾಗಿಡುವ ಮಗಳು…ಹಾಗೆ ನೋಡಿದರೆ ಮಗುವಿಗೆ ಅಂಥಾ ವಯಸ್ಸೇನು ಅಲ್ಲ.ಬರೀ ಆರು ವರ್ಷ. ಆಕೆಯ ಗ್ರಹಿಕೆ ಚಿಕ್ಕದು. ಆದ್ರೂ ಒಮ್ಮೆ ಇದ್ದಕ್ಕಿದ್ದಂತೆ `ಅಮ್ಮಾ ನೀ ಎಷ್ಟು ಕ್ಯೂಟ್ ಇದ್ದೀಯಲ್ಲಾ ‘ ಅಂಥಾ ಉದ್ಗರಿಸುತ್ತೇ ಮಗು.. ಏನೋ ಹೇಳ್ಬೇಕು ಮಗು ಮಾತಿಗೆ…ದೂರಹೋದ ಅಪ್ಪನ ಕಂದರದ ನಡುವೆಯೂ ಪ್ರೀತಿಯ ಸೆಲೆ ಉಕ್ಕಿಸುವ ಮಗುವಿನ ಒಂದು ಮಾತು ಬದುಕಿನ ಹೊಸ ಆಶಯಗಳನ್ನ , ಸಾಧ್ಯತೆಗಳನ್ನ ಹೆಚ್ಚಿಸುತ್ತೆ …ಆಕೆ ಸುಮ್ಮನೇ ಪೂನ್ ಮಾಡಿದಾಗ ಮಗಳ ಉದ್ಘಾರ ಹೇಳಿದಳು….ಮರೆಯುವ ಮುನ್ನ `ಅಮ್ಮಾ ನೀ ಎಷ್ಟು ಕ್ಯೂಟ್ ಇದ್ದೀ ‘ ಅಂತಾ ಆಗಾಗ ನೆನಪಿಸುತ್ತೇನೆ ಆಕೆಗೆ ….
ಅಂಕಲ್ ಮತ್ತೆ ಬನ್ನಿ…..ಮತ್ತೆ ಮತ್ತೆ ಈ ಮಾತು ನನ್ನ ಕಿವಿಯಲ್ಲಿ ರಿಂಗಣಿಸುತ್ತಿದೆ….ಮರೆಯಲಾಗುತ್ತಿಲ್ಲ ಪ್ರೀತಿಯ ಎಳೆಯ ಹೊತ್ತು ತರುವ ದನಿಯ . ಆಕೆ ಇನ್ನು ೮ ನೇ ತರಗತಿಯಲ್ಲಿ ಓದುವ ಹುಡುಗಿ.. ಅಮ್ಮನೇ ಎಲ್ಲಾ… ನೆನಪಿನಲ್ಲಿದ್ದು ಪ್ರತ್ಯಕ್ಷವಾಗದ ಅಪ್ಪ. ಅಪ್ಪ ಬರಬಾರದೇ ಎಂಬ ನಿರೀಕ್ಷೆ ಹೊತ್ತ ಕಂಗಳು. ಅಮ್ಮ ಇದೆಲ್ಲಾ ಯಾಕೆ ಎಂದು ಕೇಳಲಾಗದ, ಕೇಳಿದರೂ ಅದೆಲ್ಲಾ ಅರ್ಥವಾಗಾದ ಸಂದರ್ಭಗಳು..ಪರಿಸ್ಥಿತಿಗಳು . ಅಮ್ಮನದೇ ಪ್ರೀತಿ, ಒಲವು, ಆಶ್ರಯ .ಸರ್ವಸ್ವವೂ ಅವಳು. ಅಚಾನಕ್ ಆಗಿ ಬಂದ ಅಮ್ಮನ ಸ್ನೇಹಿತ. ಅಮ್ಮ ಮತ್ತು ಅಮ್ಮನ ಸ್ನೇಹಿತ ಅದೇನೋ ಮಾತಾಡಿಕೊಂಡರು. ಅದರ ಕಂಟೆಂಟ್ ಮಾತ್ರ ಅಪ್ಪ ಮನೆಗೆ ಬಾರದಿರುವ ಕುರಿತು ಆಗಿತ್ತು. ಕೊನೆಗೆ ಮಧ್ಯೆ ಮಧ್ಯೆ ತನ್ನ ಗುಣಗಾನ. ತನ್ನ ಅಪ್ಪ ಇರಬೇಕಿತ್ತು. ಸುತ್ತಾಡಿಸಬೇಕಿತ್ತು ಎಂಬ ಭಾವ . ಅಂಕಲ್ ಸುತ್ತಾಡಿಸಲು ಕರೆದೊಯ್ಯುವುದಾಗಿ ಹೇಳಿದರು. ಸ್ವರ್ಗಕ್ಕೆ ಮೂರೇ ಗೇಣು. ಅದು ಕಾರ್ ನಲ್ಲಿ . ಅಮ್ಮ ರೆಡಿ ಆಗಲು ಹೇಳಿದಳು. ಬರ್ತಡೇ ಗೆ ತಂದಿದ್ದ ಡ್ರೆಸ್ ಹಾಕಿದೆ. ಅಮ್ಮ ರೆಡಿ ಆದಳು. ತುಂಬಾ ಸುಂದರವಾಗಿ ಕಾಣುತ್ತಿದ್ದಳು..ಏನಾದ್ರೂ ಹೇಳೋಣಾ ಅಂದ್ರೆ ಅಂಕಲ್ ಇದ್ದಾರೆ. ಏನೂ ಹೇಳದೆ ಸುಮ್ಮನಾದೆ.

ಕಾರ್ ನಲ್ಲಿ ಕಿಟಕಿ ಪಕ್ಕ ಕುಳಿತೆ.ಸ್ನೇಹಿತರು ಸಿಕ್ಕರೆ ನಾನು ಕಾರ್ ನಲ್ಲಿ ಹೋಗುವುದು ಕಾಣಿಸಲಿ ಅಂತಾ. ದಾರಿಯಲ್ಲಿ ಸಿಕ್ಕಿ ಒಂದಿಬ್ಬರು ಗೆಳೆಯರಿಗೆ ಹೆಮ್ಮೆಯಿಂದ ಕೈಬೀಸಿ , ನಗು ಚೆಲ್ಲಿದೆ. ಅದು ದಾರಿಯುದ್ದಕ್ಕೂ ಹರಡಿಕೊಂಡಿತು . ಅಮ್ಮನಿಗೆ ನಗರದ ದೊಡ್ಡ ಹೋಟೆಲ್ ಗೆ ಹೋಗೋಣಾ ಎಂದೆ. ಅದು ಪರೋಕ್ಷವಾಗಿ ಅಂಕಲ್ ಗೆ ಹೇಳಿದ ಮಾತಾಗಿತ್ತು. ಅಂಕಲ್ ನಗರದ ಅತೀ ದೊಡ್ಡ ಹೋಟೆಲ್ ಗೆ ಕರೆದೊಯ್ಯದರು. ಅಲ್ಲಿ ನಾನು ಬಯಸಿದ್ದನ್ನೆ ಕೊಡಿಸಿದ್ರು. ಮತ್ತೆ ಮನೆಗೆ…ಹೋಟೆಲ್ ನಲ್ಲಿ ಕುಳಿತಾಗ ಅಮ್ಮ ನೀ ಹಳೆ ಹಿಂದಿ ಸಿನಿಮಾಗಳ ಹಿರೋಯಿನ್ ತರಹ ಕಾಣುತ್ತೀ ಅಂತ ಮೆಲ್ಲಗೇ ಉಸುರಿದೆ. ಕೆನ್ನೆ ಮುದ್ದಿಸುವ ಮುಂಗುರುಳು ಚೆಂದ ಅಮ್ಮ ಅಂದೆ…ಅಮ್ಮ ಕಣ್ಣಲ್ಲೇ ಸುಮ್ಮನಿರು ಅಂತಾ ಗದರಿಸಿದಳು..ಒಳಗೊಳಗೇ ನಸು ನಕ್ಕೆ. ಅಂಕಲ್ ನನ್ನ ಪಿಸುಮಾತು ಕೇಳಿಸಿಕೊಂಡಿರಬೇಕು. ಆದ್ರೆ ಅವರು ಕೇಳಿಯೂ ಕೇಳಿಸಿಕೊಳ್ಳದಂತೆ ಇದ್ದರೇ…ಗೊತ್ತಿಲ್ಲ. ಮತ್ತೆ ಯಾವಾಗಾಲಾದರೂ ಸಿಕ್ಕಾಗ ಕೇಳಬೇಕು ಅಂದುಕೊಂಡಿದ್ದೀನಿ….ಮಗಳು ಹೋಟೆಲ್ ನಲ್ಲಿ ಉಸುರಿದ್ದನ್ನ ಆಕೆ ಪೋನ್ನಲ್ಲಿ ಮಾಡಿದಾಗ …ನೆನಪಿಸಿದಳು. ನಾನು ಬರುವಾಗ ಆ ಮಗು ಹೇಳಿದ್ದು : ಅಂಕಲ್ ಮತ್ತೆ ಬನ್ನಿ.. ಅದರಲ್ಲಿ : ಆ ದನಿಯಲ್ಲಿ ಹೊಸ ಕನಸು , ಹೊಸ ಹುಟ್ಟಿನ ಆಶಾವಾದ ಎಲ್ಲವೂ ಇತ್ತು.. ಆ ಕ್ಷಣ ಮರೆಯಲಾಗುತ್ತಿಲ್ಲ.
 
 

‍ಲೇಖಕರು avadhi

September 4, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: