ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಮ್ಮ ಈ ಭಾನುವಾರ ನಮ್ಮದು..

ಈ ತಿಂಗಳ 17, ಅಂದರೆ ಬರುವ ಭಾನುವಾರ ಬೆಳಗ್ಗೆ 10 ರಿಂದ 12-30 ರವರೆಗೆ ನೀವು ನಮ್ಮ ಜೊತೆ ಇರುತ್ತೀರಿ.

 

ನಿಮ್ಮ ಅಮೂಲ್ಯ ಎರಡೂವರೆ ಘಂಟೆಯನ್ನು ನಮಗೆ ನೀಡಲೇಬೇಕು ಎಂಬ ಹಕ್ಕೊತ್ತಾಯ ನಮ್ಮದು.

ನನ್ನ ಮೀಡಿಯಾ ಬರವಣಿಗೆ ‘ಮೀಡಿಯಾ ಮಿರ್ಚಿ’ ಹಾಗೂ ನಾನು ಬಂದ ಕಾಲದತ್ತ ಹೊರಳಿ ನೋಡಿದ ‘ಡೋರ್ ನಂ 142’ ಬಿಡುಗಡೆಯಾಗುತ್ತಿದೆ.

ಜೋಗಿಯ ಹೊಸ ಕಾದಂಬರಿ ‘ಊರ್ಮಿಳೆ’ ಸಹಾ ಈ ಸಂಭ್ರಮದಲ್ಲಿ ಜೊತೆ ಸೇರಲಿದೆ.

ಈ ಮೂರೂ ಪುಸ್ತಕಗಳು ಅಂಕಿತ ಪುಸ್ತಕದ ಪ್ರಕಾಶ್-ಪ್ರಭಾ ಕಂಬತ್ತಳ್ಳಿ ಅವರ ಕೊಡುಗೆ

 

ಜರ್ಮನಿಯ ಊರ್ಜ್ಬರ್ಗ್ ವಿ ವಿ ಯ ಅತಿಥಿ ಪ್ರಾಧ್ಯಾಪಕರಾದ ವಿದ್ವಾಂಸ ಪ್ರೊ ಬಿ ಎ ವಿವೇಕ ರೈ, ಆತ್ಮೀಯರಾದ ನಾಗೇಶ ಹೆಗಡೆ, ಬಿ ಸುರೇಶ ಕಾರ್ಯಕ್ರಮವನ್ನು ಮುನ್ನಡೆಸುತ್ತಾರೆ.

ನಿಮ್ಮ ಸಮಯವನ್ನು ನಮಗಾಗಿ ಕೊಡಿ ಎನ್ನಲು ಈ ಅಡ್ವಾನ್ಸ್ ಪತ್ರ.

ಆಹ್ವಾನ ಪತ್ರಿಕೆ ನಿಮ್ಮ ಕೈ ಸೇರಲಿದೆ.

-ಜಿ ಎನ್ ಮೋಹನ್

 

 

‍ಲೇಖಕರು G

11 April, 2011

6 Comments

  1. prakash hegde

    It our Progrm We will comme… VENUE elli ?

  2. ವಸುಧೇಂದ್ರ

    ಜೋಗಿ ಮತ್ತು ಮೋಹನ್,

    ಅಭಿನಂದನೆಗಳು. ನಿಮ್ಮ ಪುಸ್ತಕಗಳು ಓದುಗರ ಪ್ರೀತಿಯನ್ನು ಗಳಿಸಲಿ.

    ವಸುಧೇಂದ್ರ

  3. D.RAVIVARMA

    mohan nimma pustikebidugade karyakrmagalella bangalore seemita agodu beda,namagu omme avakasha madikodi naavu karyakrama madikodthivi,nimma hagu jogi pustakakke haddu kada hage kadiruve jaga elli guruve,onduvele naavu bandre bari jaga hudkodrage karyakrama mugidu hogi bidutteno all the best d.ravi varma hospet

  4. ugamasrinivas

    ಜೋಗಿ ಹಾಗೂ ಮೋಹನ್ ಸರ್ ಗೆ ಅಭಿನಂದನೆಗಳು. ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬರಲು ಪ್ರಯತ್ನಿಸುವೆ. ಇಲ್ಲದಿದ್ದರೆ ನಿಮ್ಮ ಪುಸ್ತಕ ಓದುವ ಸಂಭ್ರಮ ಇದ್ದೇ ಇರುತ್ತೆ.
    -ಉಗಮ ಶ್ರೀನಿವಾಸ್

  5. Gubbachchi Sathish

    ನೆಚ್ಚಿನ ಲೇಖಕರ ಪುಸ್ತಕಗಳು. ಶುಭವಾಗಲಿ.

  6. ವಿಜಯರಾಜ್

    ಖಂಡಿತ… ತಪ್ಪಿಸೋ ಛಾನ್ಸೇ ಇಲ್ಲ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading