“ನಿನ್ನ ಸೇರುವ ಎಲ್ಲ ಹಾದಿ ನನ್ನ ಹಾದು ಹೋಗಬೇಕು…. “

ಅರಳುತ್ತಿರಲಿ ‘ಗುಲ್ಜಾರ್’ 

-ಸ್ವರ್ಣ ಎನ್ ಪಿ

ನಾವು ಮೊದಲು ಕಂಡಿದ್ದು ಕಪ್ಪು ಬಿಳುಪಿನ ಟಿವಿಯನ್ನ, ಅದಕ್ಕೊಂದು ಪುಟ್ಟ ಡಬ್ಬಿ. ಆ ಡಬ್ಬಿ ತೆಗೆಯೋದು ಹಾಕೋದು ಮಜವಾಗಿತ್ತು. ಡಬ್ಬಿಯಷ್ಟೆ ಪುಟ್ಟ ಮತ್ತು ಮಜವಾದ ಜಗತ್ತು. ಬರುತ್ತಿದ್ದ ಚಾನೆಲ್ಲು ದೆಹಲಿ ದೂರದರ್ಶನ ಒಂದೇ ! ಮಕ್ಕಳಿಗೆ ಅಂತ ಒಂದೆರಡು ಕಾರ್ಯಕ್ರಮ ಪ್ರತಿ ಭಾನುವಾರ ಬರುತ್ತಿತ್ತು. ಅದರಲ್ಲೊಂದು ‘ಮೋಗ್ಲಿ’ (ಅದರ ಹೆಸರು ಜಂಗಲ್ ಬುಕ್ ಅಂತ ನಂಗೆ ಗೊತ್ತಾಗಿದ್ದು ಸುಮಾರು ವರ್ಷದ ನಂತರ). ” जंगल जंगल बात चली हैं,चड्डी पहन के फूल खिला हैं ” ಅಂತ ಹಾಡು ಶುರುವಾದರೆ ಹಾಡಿನ ಒಂದಕ್ಷರ ಅರ್ಥವಾಗದಿದ್ದರೂ ನಾವು ಟಿವಿ ಮುಂದೆ ಹಾಜರ್. ಸ್ವಲ್ಪ ವರ್ಷಗಳ ನಂತರ ಫೂಲ್ ಅಂದರೆ ಹೂವು ಮಧ್ಯೆ ಚಡ್ಡಿ ಯಾಕೆ ಅನ್ನೋ ಡೌಟು ಕಾಡಿತ್ತು ! ಹಾಡು ಸ್ವಲ್ಪ ಅರ್ಥವಾಗಿದ್ದು ಬಹುಶಃ ಮಗನಿಗೆ ತೋರಿಸುವಾಗ, ಭಾಷೆ ಬಾರದ ಮೂರು ವರ್ಷದ ಮಗ ತಲೆ ದೂಗುವಂತೆ ಮಾಡುವುದು ಹಾಡಿನ ಸಾಹಿತ್ಯ ಸಂಗೀತದ ಶಕ್ತಿ.

“ಕಾಡಲ್ಲಿ ಕಥೆಯೊಂದು ಹುಟ್ಟಿದೆ,ದಾವಣಿಯುಟ್ಟು ಹೂವೊಂದು ಅರಳಿದೆ ” ಹಾಗೆ ಅರಳಾರಂಬಿಸಿದ್ದರು ಗುಲ್ಜಾರ್ ನನ್ನೊಂದಿಗೆ .

ಟೇಪ್ ರೆಕಾರ್ಡ್ಗಳು ಅಪರೂಪವಾದ ಕಾಲದಲ್ಲಿ ಅಣ್ಣ (ಅಪ್ಪ) ಒಂದು ಹಳೇ ಟೇಪ್ ರೆಕಾರ್ಡ್ ನ್ನು ಕೊಂಡು ತಂದಿದ್ದರು.ಅವರಿಗಿಷ್ಟವಾದ ‘ ಆಂಧಿ’ ಚಿತ್ರದ ಹಾಡುಗಳು ಅವರು ತಂದ ಕ್ಯಾಸೇಟ್ನಲ್ಲಿತ್ತೋ ಅಥವಾ ನಾವೇ ತಂದೆವೋ ಮರೆತು ಹೋಗಿದೆ. ನನಗೆ ಮೊದಮೊದಲು ” तेरे बिना ज़िन्दगी से कोई शिकवा ” ಹಾಡು ಕೇಳಿದಾಗ ಹಾಡಿಗಿಂತ ಮೊದಲು ಇಷ್ಟವಾಗಿದ್ದು ಮಧ್ಯೆ ಸಂಜೀವ್ ಕುಮಾರ್ ಮತ್ತು ಸುಚಿತ್ರ ಸೇನ್ರ ಸಂಭಾಷಣೆ. ಗುಲ್ಜಾರ್ शिकवा ಪದದ ಅರ್ಥ ಹೇಳಿದ್ದರು ! ಎಫ್.ಎಂ.ಗಳ ಹಾವಳಿ ಶುರುವಾದ ಮೇಲೆ ಪ್ರತಿ ಘಂಟೆಗೂ ಈ ಹಾಡನ್ನ ಯಾವುದಾದರೊಂದು ಸ್ಟೇಷನ್ನಲ್ಲಿ ಹಾಕಿ, ಸ್ವಲ್ಪ ದಿನ ಈ ಹಾಡು ಕೇಳಬೇಕೆಂಬ ಆಸೆ ಕಡಿಮೆಯಾಗಿದ್ದು ನಿಜ. ನನಗೆ ಈ ಸಂಕಲನದ ” इस मोड़ से जाते हैं ….” ತುಂಬಾ ಹತ್ತಿರವಾಗಿತ್ತು ಆದರೆ “” तेरे बिना..” ದ “काश ऐसा हो तेरे कदमोंपे चुन के मंजिल चले ” ಇಂದಿಗೂ ಕಾಡುವ ಸಾಲು

“ನಿನ್ನ ಸೇರುವ ಎಲ್ಲ ಹಾದಿ ನನ್ನ ಹಾದು ಹೋಗಬೇಕು ”

ನಂತರದ ದಿನಗಳಲ್ಲಿ ಗುಲ್ಜಾರರು ಅರಳಿಸಿದ ಒಂದೊಂದೆ ಕವಿತೆಯ ಪರಿಚಯವಾಗುತ್ತಾ ಹೋಗಿತ್ತು.’ ಮಾಸೂಮ್ ‘ ಹಿಂದಿ ಸಿನೆಮ ನೋಡುಗರೆಲ್ಲರೂ ನೋಡಿರಬಹುದಾದ ಚಿತ್ರ. “लकड़ी की काठी काठी पे घोड़ा….. “ಅಂತ ಮಕ್ಕಳೊಂದಿಗೆ ಹಾಡಿದ ಉಸಿರಿನಲ್ಲೇ ” तुझसे नाराज़ नहीं ज़िन्दगी..” ಅಂತ ಇನ್ಯಾರು ಬರೆದಾರು ? ” हुज़ूर इस कदर भी न इतराके चलिए… ” ಅಂತ ಇಂದಿಗೂ ಪ್ರೇಮಿಗಳು ಹಾಡುತ್ತಾರೆನೋ ? ನಂಗೆ ಮಾತ್ರ ” दो नैन और इक कहानी ..” ಯ ಸೆಳೆತ .

“ಪ್ರತೀ ಮುಗುಳ್ನಗೆಗೂ ಋಣಭಾರದಲ್ಲರಳುವ ಕರ್ಮ ”

ಇಜಾಜತ್ ಸಿನೆಮಾ ನಾನಿಂದಿಗೂ ನೋಡಿಲ್ಲ. “मेरा कुछ सामान ..” ಬರೆದಾಗ “ನಾಳೆ ನೀನು ವೃತ್ತ ಪತ್ರಿಕೆಯ ಮುಖ್ಯಾಂಶ ತಂದು ಸಂಗೀತ ಕೊಡು ಅನ್ನೋ ಪೈಕಿ” ಅಂತ ಆರ್.ಡಿ ಬರ್ಮನ್ ತಮಾಷೆ ಮಾಡಿದ್ದರಂತೆ ಎಂದು ಎಲ್ಲೋ ಕೇಳಿದ ನೆನಪು. ಈ ಹಾಡಿನ ಪ್ರತೀ ಸಾಲು ಒಂದು ಕವಿತೆಯ ಗರ್ಭದಲ್ಲಿಟ್ಟುಕೊಂಡಿದೆಏನೋ ? “कतरा कतरा मिलती हैं” ನಾನು ಮೊದಲ ಬಾರಿ ಕೇಳಿದ್ದು ಎಫೆಮ್ ನಲ್ಲಿ. ಶೀತಲ್ ಅನ್ನೋ ಒಬ್ಬ ಆರ್.ಜೆ ಇದ್ದರು, ಬಹುಶಃ ಆಕೆಗೆ ಈ ಹಾಡು ತುಂಬಾ ಇಷ್ಟವಾಗ್ತಿತ್ತು, ಅದನ್ನಾಕೆ ನನ್ನಂತ ಕೇಳುಗರಿಗೆ ವರ್ಗಾಯಿಸಿದ್ದಳು . ಈ ಚಿತ್ರದ ಎಲ್ಲ ಹಾಡುಗಳೂ ಸುಂದರ ಅನುಭವಗಳು.

“ನನ್ನ ಕೈಲಿ ಗೋರಂಟಿ ಬಿಡಿಸಿದ ನಿನ್ನ ಹೆಗಲ ಮಚ್ಚೆ ಬೇಕೆನಗೆ ”

“पानी पानी रे खारे पानी रे …” ಕೇಳಿದಾಗೆಲ್ಲ ಯಾರೋ ಮಡುಗಟ್ಟಿದ ದುಃಖವನ್ನು ಕಂಬನಿಯಾಗಿ ಹರಿವಂತೆ ಬೇಡಿಕೊಳ್ಳುತ್ತಿದ್ದಾರೆನೋ ಅನ್ಸತ್ತೆ. ” छययं छययं ..” ಅಂತ ಕುಣಿದು “ए अजनबी …” ಅಂತ ಆದ್ರವಾಗಿ ಸಂಗಾತಿಯನ್ನ ಕರೆಯದಿರೋದು ಹೇಗೆ ? “रात भर बेचारी मेहँदी पिसती हैं पैरों तले…” ಅಂತ “जियां जले जान जले ” ಕೇಳಿದಾಗ ಗ್ರೇಟ್ ಮಣಿರತ್ನಂ ಇದನ್ನ ಹೇಗೆ ಚಿತ್ರಿಕರಿಸಬಹುದು ಅಂತ ನಾನೂ ನನ್ನ ಗೆಳತಿ ಕುತೂಹಲಕ್ಕೂ ಮೀರಿದ ಕುತೂಹಲದಿಂದ ಚಿತ್ರ ಮಂದಿರಕ್ಕೆ ಹೋಗಿದ್ದು ಇನ್ನೂ ನೆನಪಿನಲ್ಲಿ ಹಸಿರು.

“ಪುಟ್ಟ ಗಾಜಿನ ಬಳೆಗೆ ಬೆಟ್ಟದಷ್ಟು ಕಷ್ಟ”

” बीडी जलैले जिगारसे पिया ” ಒಂಥರಾ ಕಾಲಿಲ್ಲದೇ ಕುಣಿಸಿದ ಹಾಡಾದರೆ “ओ साथिरे ..” ಸಂಗಾತ್ಯವೊಂದನ್ನ ಮರುಕಳಿಸುವಂತೆ ಮಾಡಿತ್ತು. “कभी कभी यूं करना , मैं डाटूं और तुम डरना, उबल पड़े आँखों से मीठे पानी का झरना ” ಅನ್ನೋದು ತುಟಿಯರಳಿಸಿದ ಸಾಲು. “लाकड जलके कोयला होय जाय ” ಅಂತ ರೇಖಾ ಭಾರದ್ವಾಜ್ ಹಾಡುತ್ತಿದ್ದರೆ ಎಲ್ಲೋ ಏನೋ ಹೊತ್ತಿ ಉರಿದ ಅನುಭವ.

“ನಿನ್ನ ಮೇಲಿನ ಕೋಪಕ್ಕೆ ಉಕ್ಕುವ ಕಂಬನಿಯೂ ಸಿಹಿ”

ಬೃಂದಾವನನ್ನ ನೆನಪಿಸುವ ಬಂಧಿನಿ ಸಿನೆಮಾದ ಅವರ ಮೊದಲ ಚಿತ್ರಗೀತೆ “मोरा गोरा अंग लेले ” ಇಂದ ಮೊನ್ನೆ ಮೊನ್ನೆ ಅಜ್ಜ ” दिल तो बच्चा हैं जी ..” ಅಂತ ಹಾಡಿದ್ದು ಅವರು ಮರಳಿ ಮರಳಿ ಅರಳುತ್ತಿರುವುದಕ್ಕೆ ಸಾಕ್ಷಿ ಎನಿಸಿತ್ತು. ಗುಲ್ಜಾರ್ ಅಂದರೆ ನನಗೆ ಇಂದಿಗೂ ಮೊದಲು ನೆನಪಾಗೋ ಸಾಲು “चड्डी पहन के फूल खिला हैं “. ಮೇಲಿನ ಚಿತ್ರಗಳಲ್ಲೇ ಇನ್ನೂ ಎಷ್ಟೋ ನನಗಿಷ್ಟವಾದ, ಎಲ್ಲರಿಗಿಷ್ಟವಾದ ಹಾಡುಗಳಿವೆ. ಅವು ಅವರೇ ಹೇಳಿದಂತೆ “ಹೆಸರಳಿದರೆನಾಯ್ತು ನಿನ್ನ ಉಸಿರ ಹಾಡಾಗಿರುವೆ” (“नाम घूम जाएगा…… “) ಗುಲ್ಜಾರ್ ಮತ್ತೆ ಮತ್ತೆ ನನ್ನಲ್ಲಿ ಅರಳುತ್ತಿರಲಿ.

‍ಲೇಖಕರು G

October 25, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Suma

    Thanks for bringing back all the childhood memories 🙂 I doubt if anyone can match Gulzar’s writing style.

    Suma

    ಪ್ರತಿಕ್ರಿಯೆ
  2. ಹರಿ

    ಸ್ವರ್ಣ,
    ಲೇಖನ ತುಂಬಾ ಚೆನ್ನಾಗಿದೆ. ನೆನೆಪುಗಳೆ ತೇರನ್ನು ಎಳೆದಿದ್ದೀರಿ.
    ಗುಲ್ಜಾರ್…ಒಂದೊಂದು ಕವಿತೆಯು ಅಮರ. ಅಜರಾಮರ.
    “ಇಜಾಝತ್” ಚಿತ್ರ ನನ್ನ ಅತ್ಯಂತ ಪ್ರೀತಿಯ ಚಿತ್ರಗಳಲ್ಲೊಂದು. ಬಹಳ ದಿನ ಕಾಡಿದ…ಈಗಲು ನೆನಪಾದರೆ ಕಾಡುತ್ತಲೇ ಇರುವ ಚಿತ್ರ. ಮರೆಯದೆ ನೋಡಿ. ನೋಡಿದ ನಂತರ ಮರೆಯೋದೆ ಇಲ್ಲ.
    ಗುಲ್ಜಾರ್‍‍ಗೆ ಮನಸಿನ ನಮನಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: