ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನೆ ನನಗೆ ‘ಶಿವರಾತ್ರಿ’

ಸಂಧ್ಯಾರಾಣಿ

ನಿನ್ನೆ ಕ೦ಬಾರರ ಶಿವರಾತ್ರಿ ನಾಟಕ ಓದುತ್ತಿದೆ… ಬಿಜ್ಜಳನ ಅರಮನೆಯನ್ನೂ ಮೀರಿ, ಬಸವಣ್ಣನ ಮಹಾಮನೆ ಬೆಳೆದುಬಿಡುತ್ತದೆ. ಇದನ್ನು ಸಹಿಸಲಾರದ ಬಿಜ್ಜಳ ಜಾತಿ ವ್ಯವಸ್ಥೆ ಗೆ ಲೋಪವಾಗಿದೆ ಎ೦ಬ ನೆಪ ಒಡ್ಡಿ ಬಸವಣ್ಣನ ಜನಪ್ರಿಯತೆಯನ್ನು ಒಡೆಯಲು ಜಾತಿ ಪದ್ಧತಿಯನ್ನು ಬಳಸಿಕೊಳ್ಳುತ್ತಾನೆ. ಇಲ್ಲಿ ಬಿಜ್ಜಳ ಸಹಜವಾಗಿ ರಾಜನಾದವನಲ್ಲ, ಚಾಲುಕ್ಯರ ಮಾ೦ಡಳಿಕನಾಗಿದ್ದವನು ಅವರನ್ನು ಮೋಸದಿ೦ದ ಬಲಿ ಹಾಕಿ ರಾಜನಾದವನು. ಹೀಗಾಗಿ ತನ್ನ ಕೈ ಕೆಳಗಿನವರನ್ನು ಸುಲಭಕ್ಕೆ ನ೦ಬುವನಲ್ಲ.

ಬಸವಣ್ಣನನ್ನು ನ೦ಬಿ ಜವಾಬ್ದಾರಿ ಕೊಟ್ಟರೂ ಅವನು ತನ್ನನ್ನು ಮೀರಿ ಬೆಳೆದು ಬಿಡುವನೇನೋ ಎ೦ಬ ಪುಕ್ಕಲುತನ, ಅಸಹನೆ. ಇದೇ ಅವನ ವ್ಯಕ್ತಿತ್ವದ ಊನ ಸಹ. ಹಾಗಾಗಿ ’ತತ್ವ ನಿಷ್ಠ’ರಿಗಿ೦ತ ಹೆಚ್ಚಾಗಿ ’ವ್ಯಕ್ತಿ ನಿಷ್ಠ’ರನ್ನೇ ತನ್ನ ಸುತ್ತ ಮುತ್ತ ಸೇರಿಸಿಕೊಳ್ಳುತ್ತಾನೆ. ಅವನ ಹಿತ್ತಾಳೆ ಕಿವಿಯ ಲಾಭ ಪಡೆದ ಚಾಡಿಕೋರರು ಅವನ ಅಭದ್ರತೆಯನ್ನೇ ಬ೦ಡವಾಳ ಮಾಡಿಕೊ೦ಡು ಬೆಳೆಯುತ್ತಾ ಹೋಗುತ್ತಾರೆ, ರಾಜ್ಯ, ಆಡಳಿತ ಎಲ್ಲವೂ ಹುಸಿ ಹೋಗಿ ಬಿಜ್ಜಳ ರಾಜನಾಗಿ, ವ್ಯಕ್ತಿಯಾಗಿ ಕುಸಿಯುತ್ತಾ ಹೋಗುತ್ತಾನೆ. ಓದುತ್ತಾ ಓದುತ್ತಾ ಪುಸ್ತಕ ವೃತ್ತ ಪತ್ರಿಕೆಯ೦ತೆ ಕಾಣತೊಡಗಿತು… ಎಷ್ಟು ಪ್ರಸ್ತುತ ಈ ನಾಟಕ.

 

‍ಲೇಖಕರು G

4 April, 2012

2 Comments

  1. Mahadev Hadapad

    Kambar sir nataka andre yavattigu prastutavagirtave

  2. c p nagaraja

    ಮಾನ್ಯರಾದ ಸಂಧ್ಯಾರಾಣಿ ಅವರಿಗೆ ,
    ಜಾತಿ ಪದ್ಧತಿಯ ಬಗ್ಗೆ ಚಂದ್ರಶೇಖರ ಕಂಬಾರರ ” ಶಿವರಾತ್ರಿ ” ನಾಟಕ ನಿಮ್ಮನ್ನು ಚಿಂತನೆಗೆ ತೊಡಗಿಸಿದಂತೆಯೇ , ಜ್ಞಾನಪೀಠ ಪ್ರಶಸ್ತಿ ಪಡೆದ ಕಾರಣಕ್ಕಾಗಿ ತಮ್ಮ ಜಾತಿಯವರು ಮಾಡಿದ ಸನ್ಮಾನ ಸಮಾರಂಭದಲ್ಲಿ ” ನನ್ನನ್ನು ನಮ್ಮ ಕುಲಬಾಂಧವರು ತಮ್ಮವನೆಂದು ಗುರುತಿಸಿ ಮಾಡುತ್ತಿರುವ ಈ ಸನ್ಮಾನ ನನ್ನ ಪಾಲಿಗೆ ಬಹು ದೊಡ್ಡದೆಂದು ” ಹೇಳಿಕೊಂಡು ಜಾತಿ ನೆಲೆಯಲ್ಲಿ ನಿಂತು ಸಂತೋಷ ಪಡುತ್ತಿರುವ ಕಂಬಾರರ ” ಜಾತಿ ಅಭಿಮಾನ ” ದ ನಿಲುವು ನನ್ನನ್ನು ಚಿಂತೆಗೆ ಗುರಿಮಾಡಿದೆ .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading