ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನೆ ಗುರುದತ್ತ್ ಜನ್ಮದಿನ ಅಂತೆ…

ಸಂವರ್ಥ ಸಾಹಿಲ್

ಇಂದು ನಾನು ಬಹಳ ಇಷ್ಟ ಪಡುವ ನಟ ಗುರು ದತ್ತ್ ಅವರ ಜನ್ಮದಿನ. ಕೆಲ ವರ್ಷಗಳ ಹಿಂದೆ ಗುರು ದತ್ತ್ ಬಗ್ಗೆ ಉರ್ದು ಕಾವ್ಯದ ಮಹಾ ಪ್ರತಿಭೆ ಕೈಫಿ ಆಜ್ಮಿ ಬರೆದ ಗಜಲ್ ಒಂದನ್ನು ಅನುವಾದ ಮಾಡಿದ್ದೆ. ಅದನ್ನು ಇಂದು ಮತ್ತೆ ನಿಮ್ಮ ಮುಂದೆ ಇಡುತ್ತಿದ್ದೇನೆ…
ಸದಾ ನೆಲೆಸಲು ಇಹ ಲೋಕಕ್ಕೆ ಯಾರೂ ಬರುವುದಿಲ್ಲ
ಆದರೂ ನೀ ತೆರಳಿದಂತೆ ಯಾರೂ ತೆರಳುವುದಿಲ್ಲ.
ಸಾವು ಕೂಡ ಹೆದರಿ ಕಂಪಿಸಿರಬೇಕು ಅರೆಕ್ಷಣ,
ಈ ಬಗೆಯಲಿ ಯಾರೂ ಸಾವನ್ನು ಆಲಿಂಗಿಸುವುದಿಲ್ಲ
ಸಮುದ್ರವೇ ಇಂಗಿಹೋಗಬಹುದು ಎಂಬ ಭಯ ಈಗ
ತನ್ನ ಅಸ್ಥಿಯ ತಾನೇ ಯಾರೂ ವಿಸರ್ಜಿಸುವುದಿಲ್ಲ
ಸಾಕಿಯ ಮೇಲೆ ಸಿಟ್ಟಿತ್ತೆ ಮಧುಶಾಲೆಯ ಬಗೆಗೆ ದೂರು?
ದಣಿವಾರಿಸಲು ಈ ರೀತಿ ಯಾರು ವಿಷ ಸೇವಿಸುವುದಿಲ್ಲ.
ಬೆಳಕಿನ ಕಿರಣಗಳು ನಿನ್ನ ಮೈ ಪರಚಿದವು, ಒಪ್ಪಿಕೊಂಡೆ
ಇರುಳು ಕಳೆಯದೆ ಯಾರೂ ದೀಪ ಆರಿಸುವುದಿಲ್ಲ.
– ಕೈಫಿ ಆಜ್ಮಿ
ಅನುವಾದ: ಸಂವರ್ತ ‘ಸಾಹಿಲ್’
 

‍ಲೇಖಕರು G

10 July, 2014

2 Comments

  1. Ganapathi

    ಮೂಲ ಓದಿಲ್ಲ. ಆದರೂ ಅನುವಾದ ಸತ್ವಯುತವಾಗಿದೆ ಅನಿಸಿತು. ಚೆನ್ನಾಗಿದೆ.

  2. kooki

    ಕೈಫಿ ಆಜ್ಮಿ ಬರೆದ ಗಜಲ್:
    rehne ko sadaa dahar mein aata nahin koi
    tum jaise gaye aise bhi jaata nahin koi
    ek baar toh khud maut bhi ghabra gayi hogi
    yun maut ko seene se lagaata nahin koi
    darta hoon kahin khushq na ho jaaye samundar
    raakh apni kabhi aap bahaata nahin koi
    saaqi se gila tha tumhein, maikhaane se shikwaa
    ab zahar se bhi pyaas bujhaata nahin koi
    maana ki ujaalon ne tumhein daag diye the
    beraat dhale shama bujhaata nahin koi
    rehne ko sadaa dahar mein aata nahin koi
    tum jaise gaye aise bhi jaata nahin koi

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading