ನಟರಾಜ್, ನೀವು ವ್ಯಕ್ತಪಡಿಸಿದ ಅನುಭವಕ್ಕೆ ಹ್ಯಾಟ್ಸ್ ಆಫ್. ಒಬ್ಬ ವೈದ್ಯನಾಗಿ ನಾನು ಅದೆಷ್ಟೋ ಹೆಣ್ಣು ಭ್ರೂಣಗಳ ಮೂಕ ಸಾವಿಗೆ ಸಾಕ್ಷಿಯಾಗಿದ್ದೇನೆ. ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಭ್ರೂಣದ ಲಿಂಗ ಕುರಿತು ಹೇಳಲು ಒಪ್ಪದ ದಿಟ್ಟ ನಿಲುವಿನ ತಜ್ಞರನ್ನು ಕಂಡಾಗ ಮೆಚ್ಚಿಕೊಂಡಿದ್ದೇನೆ. ಈ ಇಡೀ ದುಷ್ಕೃತ್ಯದಲ್ಲಿ ಭಾಗಿಯಾಗಿರೋದು ನಮ್ಮದೇ ವೈದ್ಯಕೀಯ ಸಮುದಾಯ ಅಂತಾ ಹೇಳೋಕ್ಕೆ ನಾಚಿಕೆಯಾಗುತ್ತೆ. ಕುಟುಂಬದಲ್ಲಿ ಮತ್ತೊಂದು ಹೆಣ್ಣುಮಗು ಬರೋದನ್ನು ಹೇಗಾದ್ರೂ ತಪ್ಪಿಸಬೇಕು ಅನ್ನೋ ತಪ್ಪು ಧಾವಂತದಲ್ಲಿರೋ ಮಿಡ್ಲ್ ಕ್ಲಾಸಿನ ಪೋಷಕರಿಗೆ ನೆರವಾಗ್ತೀವಿ ಅನ್ನೋ ಸೋಗಿನಲ್ಲಿ ದುಡ್ಡು ಸುಲಿಯುವ ಪರಮ ದುರಾಸೆಯಲ್ಲದೆ ಮತ್ತೇನೂ ಅಲ್ಲ ಇದು. ಇದರ ವಿರುದ್ಧ ಬೇರೆ ಬೇರೆ ಹಂತಗಳಲ್ಲಿ ಫೈಟ್ ಆಗ್ಬೇಕು. ಅಂಥ ನರ್ಸಿಂಗ್ ಹೋಂಗಳ (ನರ್ಸಿಂಗ್ ಹೋಂಗಳಲ್ಲ, ಅವನ್ನು ಕಸಾಯಿ ಖಾನೆಗಳು ಅಂತ ಕರೆಯೋದೇ ಸರಿ) ವಿರುದ್ಧ ದಂಡ ಹಾಕ್ಬೇಕು. ಅಂಥ ಕಟುಕ ಡಾಕ್ಟರ್ ಗಳಿಗೂ ತಕ್ಕ ಶಿಕ್ಷೆಯಾಗ್ಬೇಕು. ಅವರ ರಿಜಿಸ್ಟ್ರೇಷನ್ ಕ್ಯಾನ್ಸಲ್ ಮಾಡಿದರೂ ಸರಿಯೆ.
ಡಾ. ಸತ್ಯನಾರಾಯಣ ಭಟ್





0 Comments