ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಂಗೆಂತಾನಮನಿ ಚಾ ರೂಢಿ..

ಗೀತಾ ಹೆಗ್ದೆ ಕಲ್ಮನೆ 

ತಮಾ ಈಗ ಬಂದ್ಯ
ಮನೇಲೆಲ್ಲ ಆರಾಮಿದ್ವನಾ
ಆಯಿ ಹ್ಯಾಂಗಿದ್ದು
ಬಾ ಕಾಲ್ ತೊಳಕ
ಸ್ವಲ್ಪ ಚಾ ಮಾಡ್ತಿ
ಬೆಲ್ಲ ಹಾಕಿ ಮಾಡ್ಲನ
ಸಕ್ಕರೆನೇ ಹಾಕವ
ಎಂತುದು ಹೇಳು ಮತ್ತೆ
ಯಂಗೊತ್ತಾಗ್ತಿಲ್ಲೆ
ಯಂಗ ಎಲ್ಲ ಹಳೆ ಕಾಲ್ದವು
ಯಂಗ ಬೆಲ್ಲದ ಚಾನೇ ಕುಡೀತ್ಯ
ಗನಾ ಎಮ್ಮೆ ಹಾಲಲ್ಲಿ ಮಾಡ್ತಿ.

ಹಾಂಗೆ ಹೇಳಿ
ಯಮ್ಮಲ್ಲೆಲ್ಲ ಹುಡುಗ್ರು
ಸಕ್ಕರೆ ಚಾನೇ ಕುಡೀಯದು
ಯಂಗೆ ಯಮ್ಮನೆಯವರಿಗೆ
ಗನಾ ಡಬ್ಬಿ ಬೆಲ್ಲದ
ಚಾನೇ ಆಗವು ಆತ ;
ನೀ ಅಪರೂಪಕ್ಕೆ ಬಂಜೆ
ಹೇಳಿ ಕೇಳ್ದಿ
ನಿನ್ನ ಆಯಿ ಆನು ಎಲ್ಲ
ಒಂದೇಯಾ
ನಿಂಗೆಂತಾನಮನಿ
ಚಾ ರೂಢಿ ಮಾಡಿದ್ದನ
ಸಂಬ್ರಮದಿಂದ ಗೌರತ್ತೆ
ಬಂದ ಗೆಳತಿಯ ಮಗನಿಗೆ
ಮಾತಾಡಲ್ಲೂ ಬಿಡದೆ
ತನ್ನಷ್ಟಕ್ಕೆ ಮಾತಾಡ್ತಾ
ಅಡಿಗೆ ಮನೆ ಬದಿಗೆ
ಹೋಪ ನಮನಿ ನೋಡಿ
ಬಿಟ್ಟ ಬಾಯಿ ಬಿಟ್ಟಾಂಗೆ ನೋಡ್ತಾ
ಮೈ ಮರೆತ
ಚಾ ಕುಡಿಯೊ ಗುಂಗಲ್ಲಿ.ಹೌದು
ನಮ್ಮ ಹವ್ಯಕರ
ಉಪಚಾರವೇ ಹಾಗೆ
ಮನಿಗೆ ಬಂದವಕೆ
ಚಾ,ಮಜ್ಜಿಗೆ, ಪಾನಕಾ
ಏನಾದರೂ ಕುಡಿಯಲು
ಕೊಡಲೇ ಬೇಕು
ಸಿಟಿಯಂತೆ
ಟೀ ಆಯ್ತಾ?
ಕಾಫೀ ಆಯ್ತಾ?
ಕೇಳಿ ಸಾಗಾಕೋದು
ಗೊತ್ತೇ ಇಲ್ಲ

‍ಲೇಖಕರು admin

16 April, 2017

0 Comments

Trackbacks/Pingbacks

  1. ನಿಂಗೆಂತಾನಮನಿ ಚಾ ರೂಢಿ.. | – Sandhyadeepa…. - […] http://wp002.global.temp.domains/~avadhion/avadhimag2017/04/16/%e0%b2%a8%e0%b2%bf%e0%b2%82%e0%b2%97%e0%b3%86%e0%b2%82%e0%b2%a4%e0%b… […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading