ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ್ ಬರೆದ ಸಣ್ಣಕಥೆ

ಬದುಕುವ ಯೋಗ

ನಾ ದಿವಾಕರ

ಆರು ತಿಂಗಳ ಅವಿರತ ಶ್ರಮ ವಿಫಲವಾಗಿ ಎರಡು ಗುಂಟೆ ಭೂಮಿಯಲ್ಲಿ ತಾನು ನೆಚ್ಚಿಕೊಂಡಿದ್ದ ಬೆಳೆ ವಿಫಲವಾದಾಗ ತಿಮ್ಮಪ್ಪನಿಗೆ ಭೂಮಿಯೇ ಕುಸಿದಂತಾಗಿತ್ತು. ನಾಳಿನ ಚಿಂತೆ ಇರಲಿ ಒಪ್ಪೊತ್ತಿನ ಊಟಕ್ಕೇ ಸಂಚಕಾರ ಬಂದಿತ್ತು. ಸಾವು ಬದುಕಿನ ಹೋರಾಟದ ಛಾಯೆ ಅವರಿಸಿತ್ತು. ಒಂದು ಮುಂಜಾನೆ ಇಡೀ ಗ್ರಾಮವೇ ತಳಿರು ತೋರಣಗಳಿಂದ ಸಿಂಗರಿಸಲ್ಪಟ್ಟಿತು. ರಾಜಕೀಯ ನಾಯಕರು, ಪಂಚಾಯತ್ ಪುಢಾರಿಗಳು ದಂಡುದಂಡಾಗಿ ಗ್ರಾಮಕ್ಕೆ ಆಗಮಿಸಿದರು. ಅದುವರೆಗೂ ಕುಂಭಕರ್ಣ ನಿದ್ರೆಯಲ್ಲಿದ್ದ ಪಂಚಾಯಿತಿಯ ನಾಯಕರೂ ಸಹ ಚುರುಕಾಗಿದ್ದರು. ಅದೇನೋ ಯೋಗದಿನವಂತೆ ಕಣ್ಲಾ ಎಂಬ ಗುಸುಗುಸು ಕೇಳಿಸುತ್ತಿತ್ತು. ಮೋದಿ ಹೇಳವ್ರಂತೆ ನಮ್ಮೂರ್ನಾಗೂ ಮಾಡ್ತಾವ್ರೆ ಹೋಗಾಮ ನಡಿ ಎಂದು ಹೇಳಿಕೊಂಡು ಎಲ್ಲರೂ ಸೇರಿದ್ದರು. ತಿಮ್ಮಪ್ಪನೂ ಹೆಂಡತಿ ಮಕ್ಕಳೊಡನೆ ಹೊರಟ. ಸಮಾರಂಭ ಮುಗಿದ ನಂತರ ಏನೋ ನೆಮ್ಮದಿ ಎನಿಸಿತು. ಬಾಡೂಟದ ಸವಿ ಮನತಣಿಸಿತ್ತು. ಕೆಂಡದಂತೆ ಉರಿಯುತ್ತಿದ್ದ ಹೊಟ್ಟೆ ತಣ್ಣಗಾಗಿತ್ತು.

ಮನೆಗೆ ಬಂದ ಕೂಡಲೇ ಮತ್ತದೇ ಚಿಂತೆ, ನಾಳಿನ ಕೂಳು. ಥಟ್ಟನೆ ತಿಮ್ಮಪ್ಪನಿಗೆ ಸಚಿವರೊಬ್ಬರ ಭಾಷಣ ನೆನಪಾಯಿತು. ನಿಮ್ಮ ದೇಹದ ಆರೋಗ್ಯ ಕಾಪಾಡಲು ಸೂರ್ಯ ನಮಸ್ಕಾರ ಮಾಡಿ ರಕ್ತ ಸಂಚಲನ ಸರಿಯಾಗಿಡಲು ಶೀಷರ್ಾಸನ ಮಾಡಿ ಚಿಂತೆ ಕಳೆಯಲು ಯೋಗ ಮಾಡಿ ಇತ್ಯಾದಿ ಇತ್ಯಾದಿ. ಅನಕ್ಷರಸ್ಥ ತಿಮ್ಮಪ್ಪನಿಗೆ ಕೊಂಚ ಕೊಂಚ ಅರ್ಥವಾಗಿತ್ತು. ಅಂದು ಮಾಡಿದ ಕಸರತ್ತು ನೆನಪಾಯಿತು. ಕೂಡಲೇ ತನ್ನ ಹೊಲದ ಬಳಿ ಹೊರಟ. ಸೂಯರ್ೋದಯದ ಸಮಯ. ಸೂರ್ಯ ನಮಸ್ಕಾರ ಮಾಡಲು ಮುಂದಾದ. ದಟ್ಟ ಮೋಡ ಸೂರ್ಯನೇ ಕಾಣುವುದಿಲ್ಲ, ಛೆ ಶೀಷರ್ಾಸನ ಮಾಡೋಣವೆಂದು ತೀಮರ್ಾನಿಸಿದ. ನಿಮಿಷಾರ್ಧದಲ್ಲಿ ತಿಮ್ಮಪ್ಪ ತಲೆ ಕೆಳಗೆ ಕಾಲು ಮೇಲೆ ಮಾಡಿ ಕಂಬದಂತೆ ನಿಂತಿದ್ದ. ಮನಸ್ಸಿನಲ್ಲಿ ಎಷ್ಟೇ ಚಿಂತೆಗಳಿದ್ದರೂ ದೇಹ ಹಗುರಾದಂತೆ ಭಾಸವಾಯಿತು.
ಕೆಲವೇ ನಿಮಿಷಗಳ ಶೀಷರ್ಾಸನದ ನಂತರ –
ತಿಮ್ಮಪ್ಪನ ತಲೆ ಊರಿದ್ದ ಭೂಮಿ ಕುಸಿದಿತ್ತು. ತಲೆ ಹುಗಿದು ಹೋಗಿತ್ತು. ಹೃದಯ ಬಡಿತ ನಿಂತು ಹೋಗಿತ್ತು. ಹೆಂಡತಿ ಮಕ್ಕಳು ರೋದಿಸುತ್ತಲೇ ಓಡೋಡಿ ಬಂದರು. ಶೀಷರ್ಾಸನ ಮಾಡಲು ಹೋಗಿ ಸಾವಿಗೀಡಾದ ತಿಮ್ಮಪ್ಪನಿಗೆ ತರ್ಪಣ ನೀಡಿ, ಅಲ್ಲಿಯೇ ಶಿರಶಾಸನ ಬರೆದು ನಡೆದರು, ನಗರದ ಕಡೆಗೆ, ಕೂಲಿಯನ್ನರಸಿ, ನಾಳಿನ ಬಾಳನ್ನು ಅರಸಿ. ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ. ಅವರ ಹಿಂದೆಯೇ ಕರಿನೆರಳೂ ಹಿಂಬಾಲಿಸಿತ್ತು, ಗಹಗಹಿಸುತ್ತಾ…..
 

‍ಲೇಖಕರು G

27 July, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading