ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಾ, ಮಾವಿನಕುಳಿ ಅವರಿಗೆ ದುಬೈ ಪ್ರಶಸ್ತಿ

ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಆಚರಣೆಯ ಅಂಗವಾಗಿ ಅಯೋಜಿಸಿದ್ದ ಅಂತಾರಾಷ್ಟ್ರೀಯ ವಿಶ್ವ ಕನ್ನಡ ನಾಟಕ ರಚನಾ ಸ್ಪರ್ಧೆಯಲ್ಲಿ ಡಾ. ಜಯಪ್ರಕಾಶ್ ಮಾವಿನಕುಳಿಯವರ ನಾಟಕ “ಅಭಿಯಾನ” ’ ‘ರಜತ ಧ್ವನಿ ವಿಶ್ವ ನಾಟಕ’ ಪ್ರಶಸ್ತಿಗೆ ಆಯ್ಕೆಗೊಂಡಿದೆ. ಪ್ರಶಸ್ತಿಯು ರೂಪಾಯಿ ಇಪ್ಪತ್ತೈದು ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಹೊಂದಿದೆ.

ಡಾ.ಜಯಪ್ರಕಾಶ್ ಮಾವಿನಕುಳಿಯವರು ಪ್ರಸ್ತುತ ಕಾರ್ಕಳದ ಭುವನೇಂದ್ರ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ತರಾಗಿರುವರು. ಶ್ರೀಯುತರ ಇಪ್ಪತೈದಕ್ಕೂ ಹೆಚ್ಚು ಕೃತಿಗಳು ಪ್ರಕಟ ಗೊಂಡಿದ್ದು ಇವುಗಳಲ್ಲಿ ಆರು ನಾಟಕಗಳು ಸೇರಿವೆ. ನಾಟಕ ಅಕಾಡೆಮಿ ಪುಸ್ತಕ ಪ್ರಸಸ್ತಿ ಸೇರಿ ದಂತೆ ಹಲವಾರು ಪ್ರಶಸ್ತಿಗಳು ಇವರ ಸಾಹಿತ್ಯ ಕೃಷಿಗೆ ದೊರೆತಿವೆ.

ಧ್ವನಿ ಕಳೆದ ಹಲವಾರು ವರ್ಷಗಳಿಂದ ನಾಟಕಗಾರ ಆದ್ಯ ರಂಗಾಚಾರ್ಯ ರ ನೆನಪಿನಲ್ಲಿ ಕನ್ನಡ ರಂಗ ಕರ್ಮಿಗಳಿಗೆ ನೀಡುತ್ತಾ ಬಂದಿರುವ ಅಂತಾರಾಷ್ಟ್ರೀಯ ’ಧ್ವನಿ ಶ್ರೀರಂಗ” ಪ್ರಶಸ್ತಿಗೆ ರಂಗ ಕರ್ಮಿ ಹಾಗೂ ಸಾಹಿತಿ ಡಾ. ನಾ. ದಾಮೋದರ ಶೆಟ್ಟಿ ಅವರು ಆಯ್ಕೆ ಗೊಂಡಿರುವರು. ಪ್ರಶಸ್ತಿಯು ರೂಪಾಯಿ ಇಪತ್ತೈದು ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಡಾ. ನಾ. ದಾಮೋದರ ಶೆಟ್ಟಿ ಯವರ ’ರಂಗ ಶೋಧನೆ’ ಕೃತಿ ಸೇರಿದಂತೆ ರಂಗ ಭೂಮಿಗೆ ಸಂಬಂಧಿಸಿದಂತೆ ನಾಲ್ನೂರಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ.ಇವರ ವಿವಿಧ ಸಾಹಿತ್ಯ ಪ್ರಕಾರಗಳನೊಳಗೊಂಡ ಇಪ್ಪತ್ತೆಂಟಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಮೂವತ್ತಾರು ವರ್ಷ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಐವತ್ತಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದೂ ಚಲಚಿತ್ರ, ಟಿವಿ ಧಾರವಾಹಿ ಗಳಲ್ಲೂ ಪ್ರಖ್ಯಾತ ನಿರ್ದೇಶಕರೊಂದಿಗೆ ಅಭಿನಯಿಸಿರುವರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕನ್ನಡ ಚುಟುಕು ಸಾಹಿತ್ಯ ಸಮ್ಮೇಳನದೊಂದಿಗೆ 29.04.2011 ರಂದು ಶುಕ್ರವಾರ ಅಪರಾಹ್ನ ಮೂರು ಗಂಟಿಗೆ ದುಬೈಯ ಗುಸೈಸ್ ನಲ್ಲಿರುವ ಫಿಲ್ಡೆಲ್ಫಿಯ ಪ್ರೈವೆಟ್ ಸ್ಕೂಲ್ ನ ಸಭಾಂಗಣದಲ್ಲಿ ನೆರವೇರಿಸಲಾಗುವುದು. ಸಮಾರಂಭಕ್ಕೆ ಚುಟುಕು ಕವಿ ಶ್ರೀ ಡುಂಡಿರಾಜ್ ಅಧ್ಯಕ್ಷತೆ ವಹಿಸಲಿರುವರು. ಅನಿವಾಸಿ ಉದ್ಯಮಿ ಶ್ರೀ ಶ್ರೀನಿವಾಸ ಶ್ರೀರಂಗಂ ಸಮಾರಂಭವನ್ನು ಉಧ್ಘಾಟಿಸಲಿರುವರು.

ಸಚಿವೆ ಶೊಭಾ ಕರಂದ್ಲಾಜೆ, ರಂಗ ಹಾಗೂ ಚಲಚಿತ್ರ ನಟಿ ಗಿರಿಜ ಲೋಕೇಶ್, ಶ್ರೀ ನವಿನ್ ಕುಮಾರ್ ಕಟೀಲ್, ಎಂ.ಪಿ. ಆನಿವಾಸಿ ಕನ್ನಡಿಗ ಫೋರಂ ನ ಉಪಾಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ನಟಿ ತೇಜಸ್ವಿನಿ ಪ್ರಕಾಶ್ ಅತಿಥಿಗಳಾಗಿ ಅಗಮಿಸಲಿರುವರು.

 

 

‍ಲೇಖಕರು G

10 April, 2011

3 Comments

  1. nagaraja rao javali

    ಇಬ್ಬರಿಗೂ ಅಭಿನಂದನೆಗಳು.

  2. sangeetha shantha johnson

    ಮಾವಿನಕುಳಿ ಸರ್, ನಿಮಗೆ ಇಂತಹ ಪ್ರಶಸ್ತಿಗಳು ಬಹಳ ಹಿಂದೆಯೇ ಬರಬೇಕಾಗಿತ್ತು. ನಿಮ್ಮೊಳಗಿನ ಚೈತನ್ಯಕ್ಕೆ ಒಂದು ಅವಕಾಶ…ನೀವು ಇನ್ನಷ್ಟು ಬರೆಯುವಂತೆ ಮಾಡುತಿತ್ತು. ದುಬೈಯ ದ್ವ್ಹನಿ ಪ್ರತಿಷ್ಟಾನ ಬಳಗಕ್ಕೆ ಅಭಿನಂದನೆಗಳು. ಪ್ರಶಸ್ತಿ ಸ್ವೀಕರಿಸಲು ಸಾಗರದಾಚೆಗೆ ಹಾರುತ್ತಿರುವ ನಿಮ್ಮಿಬ್ಬರಿಗೂ ಶುಭಾಶಯಗಳು. ನಿಮಗೆ ಇಂತಹ ಪ್ರಶಸ್ತಿಗಳು ಇನ್ನಷ್ಟು ಬರಲಿ.
    ಸಂಗೀತಾ ಜಾನ್ಸನ್

  3. na.damodara shetty

    dhanyavaadagalu, nanna geleyarige haagu hitaishigalige
    naada

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading