ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಳೆ ಮೈಸೂರಿನಲ್ಲಿ ಸಿಕ್ತೀರಾ?

ನಾಳೆ ಮೈಸೂರಿನಲ್ಲಿ ಸಿಕ್ತೀರಾ?

ಮೈಸೂರಿನಲ್ಲಿ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಇದೆ. ಮಾತು ಬಾರದ, ಕಿವಿ ಕೇಳಿಸದ ಮಕ್ಕಳ ಚಿಕಿತ್ಸೆಗೆಂದು ಇರುವ ದೇಶದ ಅತ್ಯುತ್ತಮ ಆಸ್ಪತ್ರೆಗಲ್ಲಿ ಅದೂ ಒಂದು. ನಾಳೆ, ಅಂದರೆ ಮೇ ೩೧ ರ ಬೆಳಗ್ಗೆ ೧೦.೩೦ ಕ್ಕೆ ಆ ಸಂಸ್ಥೆಯಲ್ಲಿ, ಮಾತು ಬಾರದ, ಕಿವಿ ಕೇಳಿಸದ ವಿಶೇಷ ಮಕ್ಕಳಿಗೆ ನಡೆಸಲಾದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ ಇದೆ. ಆ ಮುದ್ದು ಮಕ್ಕಳು ನಾಳೆ ಬಿ ವಿ ಕಾರಂತರ ರಚನೆಯ “ನೀಲಿ ಕುದುರೆ” ನಾಟಕವನ್ನು ಪ್ರದರ್ಶಿಸಲಿದ್ದಾರೆ.

ಶ್ರವಣ ಸಮಸ್ಯೆ ಇರುವ ಮಕ್ಕಳು ಕೇವಲ ಸಂಜ್ಞೆಯಿಂದಲೇ ಎಲ್ಲವನ್ನೂ ಅರ್ಥ ಮಾಡಿಕೊಂಡು ನಾಟಕ ಮಾಡುವುದನ್ನು ನೋಡುವುದೇ ಒಂದು ದಿವ್ಯ ಅನುಭವ. ಈ ಕಾರ್ಯಕ್ರಮಕ್ಕೆ, ಆ ವಿಶೇಷ ಮಕ್ಕಳ ಸಂಭ್ರಮದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದಲೇ ನಾನು ಹೋಗುತ್ತಿದ್ದೇನೆ. ಮೈಸೂರಿನಲ್ಲಿರುವ ಮಿತ್ರರು, ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆಬಂದರೆ ತುಂಬಾ ಖುಷಿಯಾಗುತ್ತದೆ
ಕಾರ್ಯಕ್ರಮ ೧೨. ೩೦ ಕ್ಕೆ ಮುಗಿಯುತ್ತದೆ. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.

ಮಣಿಕಾಂತ್

‍ಲೇಖಕರು avadhi

30 May, 2017

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading