ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಳೆ ‘ಮರ ಏರಲಾಗದ ಗುಮ್ಮ’

ಮರ ಏರಲಾಗದ ಗುಮ್ಮ

The monster who could not climb a tree.

ಮಕ್ಕಳ ನಾಟಕ. ಸಂಚಾರಿ ಥಿಯೇಟರ್ ನ ಅಂಗಸಂಸ್ಥೆಯಾದ ಸಂಚಾರಿ ಸ್ಟೋರಿ ಕ್ವಿಲ್ಟ್ ಅಭಿನಯಿಸುವ ನಾಟಕ ಮರ ಏರಲಾಗದ ಗುಮ್ಮ. ಈ ಪ್ರದರ್ಶನವು ಬೊಂಬೆಯಾಟ, ನೆರಳು ಬೆಳಕಿನ ಆಟ, ಚಲಿಸುವ ಚಿತ್ರಗಳು ಮತ್ತು ನಟರ ಅಭಿನಯ ತಂತ್ರಗಳನ್ನು ಒಳಗೊಂಡಿರುತ್ತದೆ.

ಕಲ್ಪವೃಕ್ಷ, ಪರಾಗ್ ಮತ್ತು ಬಹುರೂಪಿ ಸಂಸ್ಥೆಗಳು ಜಂಟಿಯಾಗಿ ಹೊರತಂದಂತಹ ಮಕ್ಕಳ ಪುಸ್ತಕಗಳಲ್ಲಿ ಒಂದು ಕತೆಯನ್ನು ಆರಿಸಿಕೊಂಡಿದೆ. ತಾನ್ಯಾ ಮುಜುಂದಾರ್ ಅವರ The monster who could not climb a tree ಕತೆಯನ್ನು ಪ್ರಸಾದ್ ನಾಯ್ಕ ಅವರು ಕನ್ನಡಕ್ಕೆ ತಂದಿದ್ದಾರೆ.

ಆ ಕತೆಯನ್ನು ರಂಗರೂಪಕ್ಕೆ ಅಳವಡಿಸಿ, ವಿನ್ಯಾಸ ಮತ್ತು ನಿರ್ದೇಶನಗಳೆರಡರ ಜವಾಬ್ದಾರಿಯನ್ನು ಧನುಷ್ ನಾಗ್ ಅವರು ಹೊತ್ತಿದ್ದಾರೆ. ಈ ಪ್ರಯೋಗ ಇಂಗ್ಲೀಷ್ ಮತ್ತು ಕನ್ನಡ ಭಾಷೆಗಳಲ್ಲಿ ಪ್ರದರ್ಶನಗೊಳ್ಳುತ್ತವೆ.

ಇದೇ ಅಕ್ಟೋಬರ್ 5, ಅಂದರೆ ನಾಳೆ, ರಂಗಶಂಕರದಲ್ಲಿ ಮದ್ಯಾಹ್ನ 3.30 ಮತ್ತು 7.30 ಗೆ ಇದರ ಪ್ರದರ್ಶನ ಇರುತ್ತದೆ.

ಮಕ್ಕಳನ್ನು ಕರೆದುಕೊಂಡು ನೀವೂ ಬನ್ನಿ.

‍ಲೇಖಕರು Admin

4 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading