ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಲ್ಕು ಚಿತ್ರ, ಒಂದು ಕವನ

‘ಕನ್ನಡಪ್ರಭ’ ದ ಸಂಗ್ರಹದಲ್ಲಿ ಗಂಗೂಬಾಯಿ ಹಾನಗಲ್ ಅವರ ಅಪರೂಪದ ಛಾಯಾಚಿತ್ರಗಳಿವೆ.

ಅಪಾರ ಅವರ ಅನ್ ಲಿಮಿಟೆಡ್ ಬ್ಲಾಗ್ ನಲ್ಲಿ ಎಸ್ ಮಂಜುನಾಥ್ ಬರೆದ ಕವಿತೆಯಿದೆ. ಈ ಎರಡರ ಜುಗಲ್ಬಂದಿ ಇಲ್ಲಿದೆ.

ಭೈರವಿಯ ಹಾಡಲು ಗಂಗವ್ವ

ಎಂಥ ಬೆಳ್ಳಿಯ ಚಂದ್ರ

ಶಿವನ ಮುಡಿಯಲ್ಲಿರಲು ಯೋಗ್ಯ

ಶಿವನೆಲ್ಲಿ?

ನಕ್ಷತ್ರವೆಲ್ಲೆಲ್ಲು ಬೀಳುತಿವೆ ಉದುರುದುರಿ

ಕೀಳುತಿರುವವರು ಯಾರು?

ಮಿಂಚಿನ ಬಳ್ಳಿಯನ್ನೆಳೆದಿರುವರು ಧರೆಗೆ

ಬಾನಂಚಿಗೆ ಕೆಂಪು ಬಳಿದು ತೊಡೆದು

ಕತ್ತಲಗೊಳಿಸಿರುವರು

ಮತ್ತೆ ಅದ ಚಲಿಸಿರುವರು

ಯಾರು ಈ ಭುವಿಯನ್ನೊಮ್ಮೆ ಮೀಟಿಬಿಟ್ಟರು?

ಭೈರವಿಯ ಹಾಡಲು ಗಂಗವ್ವ

ದಿಕ್ಕುಗಳ ಎಂಟೆದೆಯು ಸೀಳಿರುವುದು

ಬೆಳಕಿನ ಒಡಲುಗಿದು ಕಾವು

ದಳದಳವಾಗಿ ಅರಳಿರುವುದು

ತಾಯ ಮಾರಿಮುಖ ತೋರಿರುವುದು

ಭಯದ ದಯೆ ನಿಡಿದಾಗಿ ಚಾಚಿರುವುದು

GANGU6

GANGU4A

GANGU2A

GANGU5

‍ಲೇಖಕರು avadhi

3 August, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading