ಕೆ ಶಿವು
ಜನಶ್ರೀ ವಾಹಿನಿಯಲ್ಲಿ ಈಗಷ್ಟೇ ಮುಗಿದ ದಿವಂಗತ ಶಂಕರ್‍ನಾಗ್ ನಿರ್ದೇಶನದ “ಮಾಲ್ಗುಡಿ ಡೇಸ್” ಕನ್ನಡ ಉಪಶೀರ್ಷಿಕೆಯಲ್ಲಿ ಬಂದ ಮೊದಲ ಅಧ್ಯಾಯವನ್ನು ನೋಡಿದೆ. ಅನಂತನಾಗ್‍ರವರ ಪೀಕಲಾಟದ ಸಹಜ ಅಭಿನಯ. ರೋಡ್ ರೋಲರ್, ಆನೆ ಬಂದು ಎಳೆಯುವುದು, ಗೋಡೆ ಬೀಳಿಸುವುದು….ಇವೆಲ್ಲವನ್ನು ನಡುವೆ ಬರುವ ಜಾಹೀರಾತು ಸಮೇತ ರೆಕಾರ್ಡ್ ಮಾಡಿದ್ದೇನೆ. ಮುಂದಿನ ಪೀಳಿಗೆಯ ಮಕ್ಕಳಿಗಾಗಿ…ನಮ್ಮ ಶಂಕರ್‍ನಾಗ್ ವಿವರಿಸುವ ಸಲುವಾಗಿ..
ಮಾಲ್ಗುಡಿ ಎನ್ನುವ ಕಾಲ್ಪನಿಕ ಹಳ್ಳಿಗಾಗಿ, ಒಟ್ಟಾರೆ “ಮಾಲ್ಗುಡಿ ಡೇಸ್” ಧಾರವಾಹಿಯಲ್ಲಿ ನಮಗೆ ಕಾಣದಂತೆ ಚಲಿಸುವ ಮುಗ್ದತೆಗಾಗಿ…ಮೈಮರೆತು ಬುದ್ಧಿವಂತರಂತೆ ವರ್ತಿಸುವ ನಾವೆಲ್ಲ ಇದನ್ನು ಮತ್ತೆ ಮತ್ತೆ ನೋಡಿ ನಮ್ಮೊಳಗಿನ ಮುಗ್ದತೆಯನ್ನು ಆಗಾಗ ನೆನಪಿಸಿಕೊಳ್ಳುವ ಸಲುವಾಗಿ…






0 Comments