ನಾನು ಯಾರು…ಯಾವ ಊರು…

‘ಅವಧಿ’ ಬಳಗ ಸತತವಾಗಿ ಸಮ್ಮೇಳನವನ್ನು ನಿಮಗೆ ಉಣಬಡಿಸಿದೆ. ಸಮ್ಮೇಳನದ ಮುನ್ನಾ ದಿನದಿಂದಲೇ ಆರಂಭವಾದ ಕೆಲಸ ಆ ‘ನೆಟ್’ ದೇವನ ಕೃಪೆಯಿಂದ ಸಾಂಗವಾಗಿ ನೆರವೇರಿದೆ. ಸುಮಾರು ೨೫೦ ಫೋಟೋಗಳನ್ನೂ, ಹಲವು ಲೇಖನಗಳನ್ನೂ ಪ್ರಕಟಿಸಿದೆ. ಬಹುಷಃ ಸಮ್ಮೇಳನಕ್ಕೆ ಬ್ಲಾಗ್ ಸೇವೆ ಇದೇ ಮೊದಲು.

‘ಅವಧಿ’ಯ ಈ ಎಲ್ಲಾ ಕೆಲಸದ ಹಿಂದೆ ಇದ್ದ ನಮ್ಮ ಬಳಗದ ಮೂತಿಗಳನ್ನು ಈ ದಿನವಾದರೂ ನೋಡಿ. ಕನ್ನಡಕ ಹಾಕಿ ಇತರರ ಹೆಗಲ ಮೇಲೆ ಭಾರ ಹಾಕಿ ಮುಗುಳ್ನಗುತ್ತಾ ನಿಂತಿರುವವರು ಸುಘೋಷ್ ನಿಗಳೆ. ಭಾರತೀಯ ವಿದ್ಯಾ ಭವನದಲ್ಲಿ ಪತ್ರಿಕೋದ್ಯಮ ಅಭ್ಯಾಸ ಮಾಡಿ ಈಟಿವಿಯಲ್ಲಿ ಸುಮಾರು 5 ವರ್ಷ ಇದ್ದು ನಂತರ ಎಲೆಕ್ಟ್ರಾನಿಕ್ ಮೀಡಿಯಾಗೆ ದೃಶ್ಯ ಸುದ್ದಿ ವಿತರಿಸುವ ಎ ಎನ್ ಐ ನಲ್ಲಿದ್ದು ಮೇಫ್ಲವರ್ ಅಂಗಳಕ್ಕೆ ಬಂದವರು.

ಸಮ್ಮೇಳನದ ಅಂಗಳದಲ್ಲಿ ಮೇಫ್ಲವರ್ ಚಟುವಟಿಕೆಗಳನ್ನು ಜನರಿಗೆ ಮನಮುಟ್ಟುವಂತೆ ವಿವರಿಸಿದ್ದೇ ಅಲ್ಲದೆ ಇದ್ದ ಕಡೆಯಿಂದಲೇ ಲ್ಯಾಪ್ ಟಾಪ್ ಹಿಡಿದು ಫೋಟೋವನ್ನು ಬೆಂಗಳೂರು ಮುಟ್ಟಿಸಿದವರು.

ಇನ್ನು ನಂದೀಶ್ ಮಲ್ಲೇನಹಳ್ಳಿ. ಫೋಟೋಗಾಗಿ ನಿಲ್ಲುವುದಕ್ಕೂ ಸಂಕೋಚಪಡುವ ಈ ಹುಡುಗ ಸಮ್ಮೇಳನದ ಅಷ್ಟೂ ದಿನ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸಿಕ್ಕ ಸಿಕ್ಕಲ್ಲೆಲ್ಲಾ ಓಡಾಡಿ ನೂರಾರು ಫೋಟೋಗಳನ್ನು ತೆಗೆದಿದ್ದಾನೆ. ದಣಿವಿಲ್ಲದ ಕೆಲಸಗಾರ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ ಕಮ್ಯುನಿಕೇಶನ್ ವಿದ್ಯಾರ್ಥಿ. ನೀನು ತೆಗೆದ ಫೋಟೋಗಳಲ್ಲಿ ನಿನಗೆ ಬೆಸ್ಟ್ ಅನಿಸಿದ್ದು ಯಾವುದು ಎಂದು ಕೇಳಿ ನೋಡಿ-ಜೋಗಿ ಎಳನೀರು ಮಾರುತ್ತಾ ಇದ್ದದ್ದು ಎನ್ನುತ್ತಾನೆ.

ಇನ್ನು ಪಟ್ಟೆ  ಟೀ ಶರ್ಟ್ ತೊಟ್ಟವನು ಸತೀಶ್. ಸಮ್ಮೇಳನಕ್ಕಾಗಿಯೇ ಸ್ವಲ್ಪ ಸ್ಟೈಲ್ ಆದ ಹೇರ್ ಕಟ್ಟಿಂಗ್ ಮಾಡಿಸಿ ರೆಡಿಯಾದವನು. ಮೂಗಿಗೆ ಬಟ್ಟೆ ಕಟ್ಟಿಕೊಂಡು ನಮ್ಮ ಎಲ್ಲ ಪುಸ್ತಕ ಮತ್ತು ಇತರ ಸಾಮಗ್ರಿಗಳನ್ನು ಜನರಿಗೆ ದಾಟಿಸಿದವನು.

ಇನ್ನು ಶ್ರೀಜಾ. ಮಂಗಳೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಶಿಕ್ಷಣ ಮುಗಿಸಿ ೮ ವರ್ಷ ಈ ಟಿ ವಿ ಯಲ್ಲಿದ್ದು ಈಗ ಮೇಫ್ಲವರ್ ನಲ್ಲಿ ಮಲಯಾಳಂ ಸೊಗಡು ಸಾಕಷ್ಟು ಕಳೆದುಕೊಂಡು ಕನ್ನಡ ಮಾತನಾದುತ್ತಿರುವವಳು. ನಂದೀಶ್ ತೆಗೆದ, ಸುಘೋಷ್ ಕಳಿಸಿದ ಫೋಟೋ ಹಾಗೂ ಮಾಹಿತಿಯನ್ನು ಬೆಂಗಳೂರು ಕಚೇರಿಯಿಂದ ಬ್ಲಾಗಿಸಿದವಳು.

img_9046

img_9063

mayflower-party-058

‍ಲೇಖಕರು avadhi

February 7, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Arkalgud Jayakumar

    Avadhi team did very good job… i hv got livephoto’s, n a on Kannada s report from chitradurga… photos and articles are much informative… thanks a lot AVADHI and all team members keep it up

    ಪ್ರತಿಕ್ರಿಯೆ
  2. kaligananath gudadur

    Sir, really amazing job. I personally congratulate you and your team’s hard work for connecting person
    like me who is away with the sammelana, with
    live photos and interesting articles.
    Once again thanks you a lot. -Kaligananath Gudadur

    ಪ್ರತಿಕ್ರಿಯೆ
  3. ಶ್ರೀನಿಧಿ

    ಭಾಷಣ ಧೂಳು ಎರಡೂ ಕಿರಿಕಿರಿ ಇಲ್ಲದೆ ಸಮ್ಮೇಳನದಲ್ಲಿ ಭಾಗವಹಿಸಿದಂತಹ ಅನುಭವ ನಮ್ಮದಾಗಿತ್ತು. ಥ್ಯಾಂಕ್ಯೂ ಅವಧಿ!

    ಪ್ರತಿಕ್ರಿಯೆ
  4. ಮಧುಸೂದನ್.ವಿ

    ಸಾಹಿತ್ಯ ಸಮ್ಮೇಳನದ ಸವಿ ಹೂರಣವನ್ನ ವಿಭಿನ್ನ ರೀತಿಯಲ್ಲಿ ನಮಗೆಲ್ಲರೀಗೂ
    ತಲುಪಿಸಿದ ನಿಮಗೆ ಹಾಗೂ ನಿಮ್ಮ ಪ್ರೀತಿಯ ತಂಡಕ್ಕೆ ನನ್ನ ಧನ್ಯವಾದಗಳು.
    ಇಂತಹ ಮತ್ತಷ್ಟು ನೂತನ ಪ್ರಯೋಗಗಳು ಈ ಕನ್ನಡ ನಾಡಿನಲ್ಲಿ ನಿಮ್ಮ ಮೂಲಕ
    ನೆರವೇರುತ್ತಿರಲಿ ಹಾಗೂ ಈ ಮೂಲಕ ಕನ್ನಡ ಮತ್ತಷ್ಟು ಶ್ರೀಮಂತವಾಗಲಿ.

    ಪ್ರತಿಕ್ರಿಯೆ
  5. ಸಂದೀಪ್ ಕಾಮತ್

    ಸಾಹಿತ್ಯ ಸಮ್ಮೇಳನದ ಧೂಳನ್ನು ತಿನ್ನದೆ ಬರೀ ಸವಿಯನ್ನಷ್ಟೇ ಸವಿಯಲು ಅನುವು ಮಾಡಿಕೊಟ್ಟ ಟೀಮ್ ’ಅವಧಿ’ ಗೆ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: