ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಪೋಲಿಸಿನವ, ನಮ್ಮ ಮನೆಯಲ್ಲಿ ಸಾಹಿತಿಗಳು ..

11887963_862703370479334_4001775735004666009_n

ರಾಜಕುಮಾರ ಮಡಿವಾಳರ 

ಅದೊಂದು ತುಂಬಿದ ಸಭೆ..

ನಾನು ಪೋಲಿಸಿನವ, ಅಪ್ಪನ ಜೊತೆ ಮಾತಾಡಲು ನಮ್ಮ ಮನೆಗೆ ಸಾಹಿತಿಗಳ ದಂಡೇ ಬರ್ತಿತ್ತು,

“ನಿಮ್ಮ ತಂದಿಯವರ ಹೆಸರು ಹೇಳ್ರಿ” ಚಂಪಾ ಪ್ರಶ್ನೆ..

ನನ್ನ ತಂದೆ ಬೆಸಗರಹಳ್ಳಿ ರಾಮಣ್ಣ,

ಸಭೆಯಿಂದ ಇನ್ನಿಲ್ಲದ ಕರತಾಡನ..

ನಮ್ಮ ಮನೆಗೆ ಸಾಹಿತಿಗಳ ದಂಡೇ ಬರ್ತಿತ್ತು ನಾನು ಸಾಹಿತಿಗಳಿಗೆ ಅಂದ್ರೆ ಈ ಹಿರಿಯರಿಗೆ ಹೆದರಿ ಅವಿತುಕೊಳ್ಳುತ್ತಿದ್ದೆ ! ಅಪ್ಪ ಅವರೆನಲ್ಲ ಪರಿಚಯಿಸುವದರ ಮೂಲಕ ಆ ಭಯ ಹೋಗಲಾಡಿಸಿದರು. ಕ್ರಮೇಣ ಸಾಹಿತ್ಯ -ಸಾಹಿತಿಗಳೆಡೆಗೆ ಪ್ರೀತಿ ವ ಆಸಕ್ತಿ ಬೆಳೆಯಿತು.

ಅದು ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ ನನ್ನಲ್ಲಿ ಒಮ್ಮೆ ಕುವೆಂಪು ಅವರನ್ನ “ಮುಟ್ಟಬೇಕು” ಅನ್ನುವ ಹುಚ್ಚು ಆಸೆ ಹುಟ್ಟಿತು, ಅದೊಂದು ದಿನ ಅವರ ಕಾರ್ಯಕ್ರಮಕ್ಕೆ ಹೋದೆ. ಅಲ್ಲಿಯ ಪೊಲೀಸರು ಕುವೆಂಪು ಹತ್ತಿರ ಸುಳಿಯಲೂ ಬಿಡಲಿಲ್ಲ, ಕೊನೆಗೆ ಹಿಂದಿನ ಬಾಗಿಲಿಂದ ಹೋಗಿ ಕುವೆಂಪು ಹೊರಡುವಾಗ ಅವರ ರಟ್ಟೆ ಹಿಡಿದು ಮೆಟ್ಟಿಲು ಇಳಿಸುವ ಸೌಭಾಗ್ಯ! ಆ ದಿವ್ಯ….ಅದೇ ಕೊನೆ!.. ಇಂತವೇ ನಮ್ಮ ಬೆರಗುಗಳು.

ಕೆಲಸ “ಡ್ಯೂಟಿ” ನಡುವೆ ಓದು, ಈ ನಮ್ಮ ಕೆಲಸವೆ ವಿಚಿತ್ರವಾದದ್ದು, ಎಲ್ಲೋ ಬಿಗಿ-ಬಂದೋಬಸ್ತು, ರಾತ್ರಿ ಗಸ್ತು! ಈ ಗಸ್ತಿನಲ್ಲಿ ರಾತ್ರಿಗಳಲ್ಲಿ ರಸ್ತೆಗಳ ಮಾತು ಬೇರೆ, ಈಗ ತುಂಬಿರುವ ಈ ಸಭೆಯ ರಾತ್ರಿಯ ಬಿಕೋ ಮಾತು ಬೇರೆ, ನಾಯಿಗಳ ಬೊಗಳುವಿಕೆ ಕೂಡ ಬೇರೆಯೇ! ಇಂತ ಅಪರಾತ್ರಿಯಲ್ಲಿ ನಾನು ಧಾರವಾಡದಲ್ಲಿ ಇದ್ದಾಗ ಪ್ರೀತಿಯಿಂದ ಗಸ್ತಿಗೆ ಆರಿಸಿಕೊಳ್ಳುತ್ತಿದ್ದ ಬೀದಿ ಸಾಧನಕೇರಿ..

..ಅಲ್ಲಿ ದೂರದಲ್ಲಿ ಜೀಪು- ನನ್ನ ಗನ್ ಮ್ಯಾನನ್ನು ನಿಲ್ಲಿಸಿ ಬೇಂದ್ರೆ ಅವರ ಮನೆ ಮುಂದೆ ನಿಂತು ನನಗೆ ತಿಳಿದ ರಾಗದಲ್ಲಿ ತಿಳಿದಂತೆ “ನಾನು ಬಡವಿ ಆತ ಬಡವ” ತುಸು ಜೋರಾಗಿ ಹಾಡಿಕೊಳ್ಳುತ್ತಿದ್ದೆ! ಇಷ್ಟೊತ್ತಿನಲ್ಲಿ ಯಾರಪ್ಪ ಇವನು ಹುಚ್ಚ ಅಂತ ಯಾರಾದರೂ ಹೊಡೆದಾರು ಅನ್ನುವ ಭಯ! ದೂರದಲ್ಲಿ ನಿಂತ ನನ್ನ ಸಿಬ್ಬಂಧಿಯ ಅನುಮಾನ ಎರಡು ನನ್ನಷ್ಟಕೆ ನಾನೇ ಕಲ್ಪಿಸಿಕೊಂಡು ನಕ್ಕಿದ್ದೂ ಇದೆ.

ಹೀಗೆಲ್ಲ ಮಾತಾಡಿದ್ದು ನಾನು ತುಂಬಾ ಗೌರವಿಸುವ- ಪ್ರೀತಿಸುವ ಪೋಲಿಸ್ ಅಧಿಕಾರಿ ಮೇಲಾಗಿ ಅದ್ಭುತ ಓದುಗ, ಮಿಗಿಲಾಗಿ ಅನರ್ಘ್ಯ ಸಹೃದಯಿ “ರವಿಕಾಂತೇ ಗೌಡರು” ಇವತ್ತ್ಯಾಕೋ ಇವರನ್ನ ಒಂದು ಸಲ “ಮುಟ್ಟಬೇಕು” ಅನಿಸುತಿದೆ..

‍ಲೇಖಕರು Admin

27 January, 2016

1 Comment

  1. ಶಮ, ನಂದಿಬೆಟ್ಟ

    ವಾಹ್…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading