ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಅಳಲಿಲ್ಲವೇಕೋ ಗೊತ್ತಿಲ್ಲ..

ನನ್ನ ಮುಟ್ಟು ನನಗೆ ಹೆಮ್ಮೆ……

ಭುವಿ

ನಾನು ದೊಡ್ಡವಳಾದ ದಿನದ ನೆನಪು ಇಂದಿಗೂ ನನಗೆ ಕಚಗುಳಿಯಿಡುತ್ತದೆ.

ಹೊಲದಲ್ಲಿ ಹತ್ತಿ ಬಿಡಿಸಿ ಬಂದು ಅದರ ಗಂಟನ್ನೇ ಗಾದಿಯಾಗಿಸಿಕೊಂಡು ಲಗಾಟೆ ಹೊಡೆಯುತ್ತಿರುವಾಗ ಸ್ಕರ್ಟಿನ ಒಳಗಿನ ಕಲೆ ಆಟಕ್ಕೆ ಬ್ರೇಕ್ ಹಾಕಿತ್ತು.

ನನ್ನ ಅನುಭವಕ್ಕೆ ಸಿಕ್ಕ ದೊಡ್ಡವರಾದವರೆಲ್ಲ ಸಂಪ್ರದಾಯವೆಂಬಂತೆ ಬೋರಿಟ್ಟು ಅತ್ತಿದ್ದರು.

ನಾನು ಅಳಲಿಲ್ಲವೇಕೋ ಗೊತ್ತಿಲ್ಲ ಆದರೆ ಅದು ನನಗೆ ಗೊತ್ತಾಗದೇ ಕಲೆಯ ಮೂಲಕ ನನ್ನ ಅಣಕಿಸಿದ್ದು ನಾಚಿಕೆ ತರಿಸಿತ್ತು. ಶಾಲೆಗೆ ಹೋಗುವಾಗ ಆ ದಿನಗಳು ಎದುರಾದಾಗ ನನಗೆ ಸ್ಯಾನಿಟರಿಯ ಬಗ್ಗೆ ಗೊತ್ತಿದ್ದರೂ ಕೊಳ್ಳಲಾಗಿರಲಿಲ್ಲ. ಬಸ್ಸು ಬರುವುದು ತಡವಾದರೆ ತೊಡೆಗುಂಟ ಇಳಿದ ಪ್ರಸಂಗಗಳಲ್ಲಿ ಹೆಣ್ಣು ಜನ್ಮವನ್ನು ಶಪಿಸಿಕೊಂಡದ್ದೂ ಇದೆ.

ಹೊರಗೆ ಕೂಡುವ ಕಟ್ಟುಪಾಡಿಲ್ಲದ ನಮ್ಮ ಮನೆಯಲ್ಲಿ ಸಹಜವಾಗಿಯೆ ಇದ್ದ ನಾನು ಮುಟ್ಟಾದಾಗ ಹಾಸಿಗೆ ಹಾಳಾಗದಿರಲೆಂದು ನಸುಕಿನಲ್ಲೇ ಏಳುತ್ತಿದ್ದೆ.

ನನ್ನ ಜೊತೆಗೆ ನನ್ನ ಚಿಕ್ಕಪ್ಪ ಎದ್ದು ನೀರೊಲೆ ಹೊತ್ತಿಸುವುದಷ್ಟೇ ಅಲ್ಲದೆ ನೀರು ತೋಡಿ ಕೊಟ್ಟದ್ದು ನಾನು ಮುಟ್ಟನ್ನು ಗೌರವಿಸುವಂತೆ ಮಾಡಿರಬೇಕೇನೊ. ಅವನೊಬ್ಬ ಹಳ್ಳಿಗ ತಕ್ಕಮಟ್ಟಿಗೆ ಓದುವಷ್ಟು ಮಾತ್ರ ಅಕ್ಷರಸ್ಥ ಎನ್ನುವುದನ್ನು ಇಲ್ಲಿ ಉಲ್ಲೇಖಿಸಲೇಬೇಕು.

ಇದರಿಂದಲೇ ನಾನು ಮುಟ್ಟನ್ನು ಮನುಕುಲದ ಸೃಷ್ಟಿಕರ್ತತೆಯ ಕೊಡುಗೆ ಎಂದು ಹೆಮ್ಮೆಯಿಂದ ಪ್ರೀತಿಸುತ್ತೇನೆ. ನನ್ನವನ ಆ ದಿನಗಳ ಕಾಳಜಿಯದೂ ಪಾಲಿದೆ ನನ್ನನ್ನು ನನ್ನ ಹೆಣ್ತನವನ್ನು ಗೌರವಿಸಿಕೊಳ್ಳುವಲ್ಲಿ.

ಮುಟ್ಟನ್ನು ನಿಭಾಯಿಸಲು ಸ್ಯಾನಿಟರಿ,ಬಟ್ಟೆ,ಬಟ್ಟಲುಗಳ ಜೊತೆಗೆ ನಮ್ಮವರೆನಿಸಿಕೊಳ್ಳುವ ಪುರುಶೋತ್ತಮರ ಪಾತ್ರ ಕೂಡ ಗಣನೀಯ.

 

‍ಲೇಖಕರು avadhi

11 July, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading